ಮುಖ್ಯಮಂತ್ರಿ ಬದಲಾವಣೆ; ಊಹಾಪೋಹಗಳನ್ನು ಮಾಧ್ಯಮಗಳಲ್ಲಿ ಮಾತ್ರ ಕೇಳುತ್ತಿದ್ದೇನೆ: ಡಿಕೆ ಶಿವಕುಮಾರ್
ಮಳೆಗಾಲದ ವಿಧಾನಸಭಾ ಅಧಿವೇಶನ ಶುರುವಾಗುವ ಮೊದಲು, ಖಾಲಿಯಿರುವ 4 ವಿಧಾನ ಪರಿಷತ್ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು. ನಾಲ್ವರಲ್ಲಿ ಒಬ್ಬರನ್ನು ಮಾಧ್ಯಮದಿಂದ ಆರಿಸಿಕೊಳ್ಳಲಾಗುವುದು ಅಂತ ಶಿವಕುಮಾರ್ ಹೇಳಿದ್ದು ನಿಜವೋ ಅಥವಾ ತಮಾಷೆಗೆ ಹಾಗೆ ಹೇಳಿದರೋ ಗೊತ್ತಾಗಲಿಲ್ಲ, ಅದನ್ನು ಹೇಳಿದಾಗ ಅವರ ಜೊತೆ ಮಾಧ್ಯಮದವರೂ ನಕ್ಕರು.
ದೆಹಲಿ, ಜುಲೈ 9: ದೆಹಲಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮತ್ತೊಮ್ಮೆ ಒಗಟಿನ ಉತ್ತರ ನೀಡಿದರು. ಪತ್ರಕರ್ತರೊಬ್ಬರು ಎಐಸಿಸಿ ಮಧ್ಯಸ್ಥಿಕೆಯಲ್ಲಿ ನಿಮ್ಮ ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ ಒಡಂಬಡಿಕೆ ಆಗಿರೋದು ನಿಜವೇ ಅಂತ ಕೇಳಿದಾಗ, ಕೇವಲ ಮಾಧ್ಯಮಗಳಲ್ಲಿ ಮಾತ್ರ ಅಂಥ ಊಹಾಪೋಹ ಕೇಳಿಬರುತ್ತಿದೆ, ಅದರೆ ನನ್ನಮಟ್ಟಿಗೆ ಅದ್ಯಾವುದೂ ಇಲ್ಲ ಎಂದು ಹೇಳಿದರು. ಹೈಕಮಾಂಡ್ ನಾಯಕರು ಶಾಸಕರ ಅಭಿಪ್ರಾಯಗಳನ್ನು ರಂದೀಪ್ ಸುರ್ಜೆವಾಲಾ ಅವರ ಮೂಲಕ ಸಂಗ್ರಹಿಸಿ ಸಿಎಂ ಮತ್ತು ಡಿಸಿಎಂರನ್ನು ದೆಹಲಿಗೆ ಕರೆಸಿದೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ರಾಮನಗರದ ಎಲ್ಲ ಶಾಸಕರಂತೆ ನಾನೂ ಸಹ ಶಿವಕುಮಾರ್ ಸಿಎಂ ಆಗುವುದನ್ನು ಬಯಸುತ್ತೇನೆ: ಯೋಗೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ