ತಾಂತ್ರಿಕ ದೋಷಗಳನ್ನು ಸರಿ ಮಾಡಿದ್ದೇವೆ, ಮೇವರೆಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಸಲಾಗಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮೇ ತಿಂಗಳವರೆಗೆ ಬಿಡುಗಡೆ ಮಾಡಲಾಗಿದೆ, ಜೂನ್ ತಿಂಗಳು ಹಣ ರವಾನಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸಚಿವೆ ಹೇಳೋದು ನಿಜವೂ ಆಗಿರಬಹುದು, ಆದರೆ ಪ್ರತಿ ತಿಂಗಳು ತಮ್ಮ ಇಲಾಖೆಯ ಗ್ಯಾರಂಟಿ ಯೋಜನೆಯ ಬಗ್ಗೆ ಹೀಗೆ ಹೇಳಿಕೆ ನೀಡುವ ಪ್ರಮೇಯ ಯಾಕೆ ಬರುತ್ತಿದೆ ಅನ್ನೋದನ್ನು ಸಚಿವೆಯೇ ಯೋಚಿಸಬೇಕು.
ಮೈಸೂರು, ಜುಲೈ 11: ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಹಿಳಾ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಸಂದಾಯ ಅಗುತ್ತಿದೆ, ಯಾವುದೇ ಸಮಸ್ಯೆ ಇಲ್ಲ, ಮೊದಲಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿದರು. ಎಲ್ಲ 31 ಜಿಲ್ಲೆಗಳ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ಗಳ ಗೃಹಲಕ್ಷ್ಮಿಗಳಿಗೆ ಹಣವನ್ನು ಕಳಿಸಲಾಗುತ್ತಿದೆ, ಸಿಎಡ್ಪಿಒ ಗಳಿಗೆ ಹಣ ಕಳಿಸಿದರೆ ಡಿಬಿಟಿ ವಿಧಾನದ ಮೂಲಕ ನೆರವು ಅವರಿಗೆ ತಲುಪುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ