ವಾಣಿಜ್ಯ ತೆರಿಗೆ ನೋಟೀಸ್: ₹ 55 ಲಕ್ಷ ತೆರಿಗೆ ಹಣ ಎಲ್ಲಿಂದ ತರಲಿ ಸ್ವಾಮೀ? ನಾಗರಾಜ್ ಗೌಡ, ವ್ಯಾಪಾರಿ
ಸಣ್ಣದರಿಂದ ಹಿಡಿದು ದೊಡ್ಡ ಮೊತ್ತದವರೆಗೆ ಎಲ್ಲರೂ ಫೋನ್ಗಳ ಮೂಲಕ ಆನ್ಲೈನ್ ಪೇಮೆಂಟ್ ಮಾಡುತ್ತಾರೆ. ತಾವು ಬೇಕರಿಗೆ ಬೇಕಾದ ಸಾಮಗ್ರಿ ಕೊಳ್ಳಲು ಹೋದಾಗಲೂ ಫೋನಲ್ಲೇ ಪೇಮೆಂಟ್ ಮಾಡುತ್ತೇವೆ, ಬಿಲ್ನಲ್ಲಿ ಜಿಎಸ್ಟಿ, ಸಿಎಸ್ಟಿ ಎಲ್ಲ ಸೇರಿರುತ್ತದೆ, ನಮ್ಮದು ಸಣ್ಣ ವ್ಯಾಪಾರವಾದರೂ 4 ವರ್ಷಗಳ ವಹಿವಾಟಿನ ನಂತರ ಅದು ದೊಡ್ಡದಾಗಿ ಕಾಣುತ್ತಿದೆ ಎಂದು ನಾಗರಾಜ ಗೌಡ ಹೇಳುತ್ತಾರೆ.
ಬೆಂಗಳೂರು, ಜುಲೈ 11: ಗ್ರಾಹಕರಿಂದ ಆನ್ಲೈನ್ ಮೂಲಕ ಹಣವನ್ನು (online payment) ಪಡೆದಿದ್ದು ನಗರದ ಸಣ ಪುಟ್ಟ ವ್ಯಾಪಾರಿಗಳಿಗೆ ಶಾಪವಾಗಿ ಪರಿಣಮಿಸಿದೆ. ನಮ್ಮ ವರದಿಗಾರ ಇವತ್ತೂ ಕೂಡ ಒಂದಷ್ಟು ವ್ಯಾಪಾರಿಗಳೊಂದಿಗೆ ಮಾತಾಡಿದ್ದಾರೆ. ನಾಗರಾಜ್ ಗೌಡ ಹೆಸರಿನ ಈ ವ್ಯಾಪಾರಿಯು ಒಂದು ಚಿಕ್ಕ ಬೇಕರಿ ನಡೆಸುತ್ತಾರೆ, 2021 ರಿಂದ ಇವರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ತೆರಿಗೆ ಕೇಳಿಲ್ಲ. ಈಗ ಇದ್ಕಕ್ಕಿಂದ್ದಂತೆ ನಾಲ್ಕು ವರ್ಷಗಳ ಕಾಲ ನಡೆಸಿರುವ ವಹಿವಾಟಿನ ಮೇಲೆ ₹ 55 ಲಕ್ಷ ತೆರಿಗೆ ಕಟ್ಟಬೇಕಿದೆ, ಕೂಡಲೇ ಕಟ್ಟಿ ಅಂತ ನೋಟೀಸ್ ನೀಡಿದ್ದಾರೆ. ನನ್ನ ಅಂಗಡಿ ಮಾರಿದರೆ ₹ 5 ಲಕ್ಷವೂ ಬರೋದಿಲ್ಲ, ₹ 55 ಲಕ್ಷ ಎಲ್ಲಿಂದ ತರಲಿ, ಅಧಿಕಾರಿಗಳು ಮಾಡಿದ ತಪ್ಪಿಗೆ ನಮ್ಮನ್ನು ಹೊಣೆಗಾರರನ್ನಾಗಿಸಲಾಗಿದೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತೆರಿಗೆ ಕಟ್ಟಬೇಕಿರುವುದನ್ನು ಮನ್ನಾ ಮಾಡಿಸದಿದ್ದರೆ ತಮಗೆ ಸಾವೇ ಗತಿ ಎಂದು ನಾಗರಾಜ್ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

