AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು

ಭಿಕ್ಷುಕನೊಬ್ಬ ಜನರಿಂದ ಹಣ ಪಡೆಯಲು ಫೋನ್​ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು
ಭಿಕ್ಷುಕ
TV9 Web
| Edited By: |

Updated on: Feb 09, 2022 | 4:03 PM

Share

ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಡಿಜಿಟಲ್​ ಇಂಡಿಯಾವನ್ನು(Digital India)  ಜಾರಿಗೆ ತಂದಿದೆ. ಹೀಗಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣಪಾವತಿಯ ಎಲ್ಲ ಕೆಲಸವೂ ಆನ್ಲೈನ್​ನಲ್ಲಿಯೇ ನಡೆಯುತ್ತದೆ. ಹಣ ಪಾವತಿಯ ಬಹುತೇಕ ಸಂದರ್ಭಗಳಲ್ಲಿ ಕ್ಯಾಶ್​​ಲೆಸ್ (Cash Less)​ ಆಗಿಯೇ ಇರಲು ಬಯಸುತ್ತೇವೆ. ಅದು ಸುರಕ್ಷಿತ ಕೂಡ ಹೌದು. ಈ ಡಿಜಿಟಲ್​ ಇಂಡಿಯಾ ಯೋಜನೆ ದೇಶದ ಪ್ರತೀ ವ್ಯಕ್ತಿಗೂ ತಲುಪಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ.  ಹೌದು ಭಿಕ್ಷುಕನೊಬ್ಬ (Begger) ಜನರಿಂದ ಹಣ ಪಡೆಯಲು ಫೋನ್​ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.  ಬಿಹಾರದ ರಾಜು ಪಟೇಲ್​ ಎನ್ನುವ 40 ವರ್ಷದ ಭಿಕ್ಷುಕ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾನೆ.

ಬಿಹಾರದ ಬೆಟ್ಟೈ ರೈಲು ನಿಲ್ದಾಣದಲ್ಲಿ  ರಾಜು ಪಟೇಲ್​ ಎನ್ನುವ ಭಿಕ್ಷುಕ ಕುತ್ತಿಗೆಯಲ್ಲಿ  ಕ್ಯೂರ್​ ಕೋಡ್ ಅನ್ನು ನೇತುಹಾಕಿಕೊಂಡು, ಟ್ಯಾಬ್​ ​ ಇಟ್ಟುಕೊಂಡು ರಿಚ್​ ಅಗಿ ಭಿಕ್ಷೆ ಬೇಡುತ್ತಿದ್ದಾನೆ. ಈ ಕುರಿತು ಎ ಎನ್​ಐ ಜೊತೆ ಮಾತನಾಡಿದ ರಾಜು ಪಟೇಲ್​​ ಕೊರೊನಾ ಬಳಿಕವಂತೂ ಜನ ದುಡ್ಡುನ್ನು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಚಿಲ್ಲರೆ ಇಲ್ಲ, ಕ್ಯಾಶ್ ಇಲ್ಲ​ ಎನ್ನುತ್ತಿದ್ದಾರೆ. ಹೀಗಾಗಿ ನಾನು ಕೂಡ ಡಿಜಿಟಲ್​ ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ಚಿಕ್ಕಂದಿನಿಂದಲು ಇದೇ ಜಾಗದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ. ಈಗ ವಿಧಾನವನ್ನು ಬದಲಿಸಿಕೊಂಡಿದ್ದೇನೆ. ಭಿಕ್ಷೆ ಬೇಡಿದ ಬಳಿಕ ರೈಲ್ವೆ ನಿಲ್ದಾಣದಲ್ಲಿಯೇ ಮಲಗುತ್ತೇನೆ ಎನ್ನುವ ರಾಜು, ಡಿಜಿಟಲ್​ ಮೂಲಕ ಹಣ ಪಡೆಯಲು ಬ್ಯಾಂಕ್​ ಖಾತೆಯನ್ನೂ ತೆರೆದು, ಆನ್ಲೈನ್​ ಪೇಮೆಂಟ್​ ಸೌಲಭ್ಯವನ್ನು ಪಡೆದಿದ್ದೇನೆ ಎಂದಿದ್ದಾರೆ.

ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಮತ್ತು ಪಾನ್​ ಕಾರ್ಡ್​ನ ಅಗತ್ಯವಿತ್ತು. ಹೀಗಾಗಿ ರಾಜು ಪಾನ್​ಕಾರ್ಡ್ ಅನ್ನು ಮಾಡಿಸಿಕೊಂಡಿದ್ದಾರೆ. ರಾಜು ಪಟೇಲ್​ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಅವರ ಅಭಿಮಾನಿಯಾಗಿದ್ದು ಅವರ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರಂತೆ. ಎಎನ್​ಐ ವರದಿಯ ಪ್ರಕಾರ, ರಾಜು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್​ ಇಂಡಿಯಾ ಕಾರ್ಯಕ್ರಮದಿಂದ ಪ್ರೇರಿತರಾಗಿದ್ದು, ಮನ್​ ಕೀ ಬಾತ್​ ಅನ್ನು ತಪ್ಪದೇ ಕೇಳುತ್ತಾರಂತೆ. ಸದ್ಯ ಈ ಡಿಜಿಟಲ್​ ಹೈಟೆಕ್​ ಭಿಕ್ಷುಕನ ವಿಚಾರ ದೇಶದೆಲ್ಲೆಡೆ ವೈರಲ್​ ಆಗಿದೆ.

ಈ ಕುರಿತು ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ. ಎಎನ್​ಐ ಟ್ವಿಟರ್ನಲ್ಲಿ ರಾಜು ಪಟೇಲ್​ ಅವರ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಬಳಕೆದಾರರೊಬ್ಬರು ಭಿಕ್ಷುಕರಲ್ಲೂ ಡಿಜಿಟಲ್​ ಇಂಡಿಯಾ ಅಳವಡಿಕೆಯಾಗಿರುವುದು ಅಚ್ಚರಿಯ ವಿಚಾರ. ಅಲ್ಲದೆ ಆನ್ಲೈನ್​ ಪೇಮೆಂಟ್ ಮಾಡಿದಾಗ ಅವರು ಕ್ಯಾಶ್​ ಬ್ಯಾಕ್​ ಕೂಡ ಗೆಲ್ಲಬಹುದು ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಡಿಜಿಟಲ್​ ಇಂಡಿಯಾ ಸಧ್ಬಳಕೆಯ ಬಗ್ಗೆ ಸಂತಸವಿದೆ ಆದರೆ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ;

ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ