ಶ್ರೀವಲ್ಲಿ ಹಾಡಿಗೆ ಕೊರಿಯನ್​ ಮಹಿಳೆಯ ಸಖತ್​ ಸ್ಟೆಪ್​; ವಿಡಿಯೋ ವೈರಲ್​

ಕೊರಿಯಾದ ಮಹಿಳೆಯೊಬ್ಬರು ಇದೇ ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್​ ಸಿಗ್ನೇಚರ್​ ಸ್ಟೆಪ್​ಅನ್ನು ಮಾಡುವ ಮೂಲಕ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ.

ಶ್ರೀವಲ್ಲಿ ಹಾಡಿಗೆ ಕೊರಿಯನ್​ ಮಹಿಳೆಯ ಸಖತ್​ ಸ್ಟೆಪ್​; ವಿಡಿಯೋ ವೈರಲ್​
ಕೊರಿಯಾದ ಮಹಿಳೆ
Follow us
TV9 Web
| Updated By: Pavitra Bhat Jigalemane

Updated on: Feb 10, 2022 | 9:54 AM

ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್ (Allu Arjun)​ ನಟನೆಯ ಪುಷ್ಟ ರಿಲೀಸ್​ ಆಗಿ ತಿಂಗಳುಗಳೇ ಕಳೆದಿದೆ. ಆದರೂ ಶ್ರೀವಲ್ಲಿ ಹಾಡಿನ ಕ್ರೇಜ್​ ಮಾತ್ರ ಮರೆಯಾಗಿಲ್ಲ. ಪುಷ್ಪ ಚಿತ್ರ ಬಿಡುಗಡೆಯಾಗಿ 53 ದಿನಗಳೇ ಕಳೆದಿದೆ. ಈವರೆಗೆ ಚಿತ್ರ ಸುಮಾರು 18 ಕೋಟಿ ಗೂ ಹೆಚ್ಚು ಹಣವನ್ನು ಬಾಕ್ಸ್ ಆಫಿಸ್​ನಲ್ಲಿ ಗಳಿಕೆ ಮಾಡಿದೆ.  ಶ್ರೀವಲ್ಲಿ ಹಾಡಿಗೆ ಈ ಹಿಂದೆ ಹಲವರು ರೀಲ್ಸ್​ ಮಾಡಿದ್ದಾರೆ. ಸ್ಟಾರ್​​ ನಟರಿಂದ ಹಿಡಿದು, ವಿದೇಶಿ ಕ್ರಿಕೇಟಿಗರು ಕೂಡ ಶ್ರೀವಲ್ಲಿ (Shrivalli Song) ಹಾಡಿಗೆ ಸ್ಪೆಪ್​ ಹಾಕಿದ್ದಾರೆ. ಅಲ್ಲು ಅರ್ಜುನ್​ ಅವರ ಸಿಗ್ನೇಚರ್ ಸ್ಟೆಪ್​ ಸಖತ್​ ವೈರಲ್​ ಆಗಿದೆ. ಇದೀಗ ಕೊರಿಯಾದ (Korea) ಮಹಿಳೆಯೊಬ್ಬರು ಇದೇ ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ಅವರ​ ಸಿಗ್ನೇಚರ್​ ಸ್ಟೆಪ್​ಅನ್ನು ಮಾಡುವ ಮೂಲಕ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ.

View this post on Instagram

A post shared by ?????? ?1 (@korean.g1)

ಇನ್ಸ್ಟಾಗ್ರಾಮ್​ನಲ್ಲಿ ಕೊರಿಯನ್​ ಮಹಿಳೆಯ ಶ್ರೀವಲ್ಲಿ ಸ್ಟೆಪ್​ ಸಖತ್​ ವೈರಲ್​ ಆಗಿದೆ. ಡ್ಯಾನ್ಸ್​ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಕೊರಿಯನ್​ ವರ್ಷನ್​ನಲ್ಲಿ ಅಲ್ಲು ಅರ್ಜುನ್​ ಎಂದು ಇನ್ಸ್ಟಾಗ್ರಾಮ್​ನಲ್ಲಿ ಕ್ಯಾಪ್ಷನ್​ ನೀಡಲಾಗಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ಸಖತ್​ ಥ್ರಿಲ್​ ಆಗಿದ್ದಾರೆ.  ವಿಡಿಯೋ ಹಂಚಿಕೊಂಡಾಗಿನಿಂದ 1.1 ಮಿಲಿಯನ್​ ವೀವ್ಸ್​ ಪಡೆದಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಮಹಿಳೆ ಕಪ್ಪಿ ಕನ್ನಡಕ ಧರಿಸಿ, ಕೆಂಪು ಶರ್ಟ್​ಅನ್ನು ತೊಟ್ಟು ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪುಷ್ಟ ಚಿತ್ರದಲ್ಲಿ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಸುಕುಮಾರ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:

ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು