ಪ್ರಯಾಣಿಕನೊಂದಿಗೆ ಬಂದ ಹುಂಜಕ್ಕೂ 30 ರೂ. ಟಿಕೆಟ್ ನೀಡಿದ ಕಂಡಕ್ಟರ್: ಆಮೇಲಾಗಿದ್ದೇನು ಗೊತ್ತಾ?
ತೆಲಂಗಾಣದ ಬಸ್ನಲ್ಲಿ ಕಂಡಕ್ಟರ್ ಒಬ್ಬ ಪ್ರಯಾಣಿಕನೊಂದಿಗೆ ಬಂದಿದ್ದ ಹುಂಜಕ್ಕೆ ಟಿಕೇಟ್ ನೀಡಿದ್ದಾನೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವೊಮ್ಮೆ ಸರಿ ಎಂದುಕೊಂಡು ಮಾಡಿದ ಕೆಲಸಗಳು ಅಪರಾಧ ಮತ್ತು ಅಪವಾದಕ್ಕೆ ಕಾರಣವಾಗುತ್ತದೆ. ಇಲ್ಲೊಂದು ಅಂತಹದ್ದೆ ಘಟನೆ ನಡೆದ ಬಗ್ಗೆ ವರದಿಯಾಗಿದೆ. ತೆಲಂಗಾಣದ ಬಸ್ನಲ್ಲಿ ಕಂಡಕ್ಟರ್ ಒಬ್ಬ ಪ್ರಯಾಣಿಕನೊಂದಿಗೆ ಬಂದಿದ್ದ ಹುಂಜಕ್ಕೆ(Rooster) ಟಿಕೇಟ್ (Ticket) ನೀಡಿದ್ದಾನೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಬಸ್ಗಳಲ್ಲಿ ಪ್ರಾಣಿಗಳನ್ನು ಸೇರಿಸುವಂತಿಲ್ಲ. ಹೀಗಿದ್ದಾಗಲೂ ಕಂಡಕ್ಟರ್ (Conducter) ಪ್ರಯಾಣಿಕ ಹುಂಜವನ್ನು ಹಿಡಿದುಕೊಂಡಿದ್ದರೂ ಅವರನ್ನು ಬಸ್ನಿಂದ ಇಳಿಸದೆ ಟಿಕೆಟ್ ನೀಡಿದ್ದು ಸಾರಿಗೆ ನಿಯಮದ ಪ್ರಕಾರ ತಪ್ಪು ಎಂದು ಕಂಡಕ್ಟರ್ ವಿರುದ್ದ ಕ್ರಮ ಕೈಗೊಂಡ ಘಟನೆ ನಡೆದಿದೆ.
A rooster ?is a living being. Ticket is a must to travel in RTC bus.#Telangana pic.twitter.com/XEckxd9bXL
— P Pavan (@PavanJourno) February 8, 2022
ಈ ಘಟನೆ ನಡೆದಿದ್ದು ತೆಲಂಗಾಣದ ಸುಲ್ತಾನಾಬಾದ್ ಸರ್ಕಾರಿ ಬಸ್ನಲ್ಲಿ. ತ್ರಿಪಾಟಿ ಎನ್ನುವ ಬಸ್ ಕಂಡಕ್ಟರ್ಗೆ ಪ್ರಯಾಣಿಕ ಬಸ್ ಹತ್ತಿದ ಮೇಲೆ ಸ್ವಲ್ಪ ದೂರ ಮುಂದೆ ಹೋದ ಮೇಲೆ ಆತನ ಜತೆ ಹುಂಜ ಇರುವುದು ಗಮನಕ್ಕೆ ಬಂದಿದೆ. ಈ ವೇಳೆ ಕಂಡಕ್ಟರ್ ಭೂಮಿಯ ಮೇಲೆ ಜೀವ ಇರುವ ಎಲ್ಲಾ ಜೀವಿಗಳಿಗೂ ಟಿಕೆಟ್ ನೀಡಲಾಗುತ್ತದೆ ಎಂದು ಹುಂಜಕ್ಕೂ 30 ರೂ. ಟಿಕೆಟ್ ನೀಡಿದ್ದಾನೆ. ಈ ಘಟನೆಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ತೆಲಂಗಾಣ ರಸ್ತೆ ಸಾರಿಗೆ ಸಂಸ್ತೆಯ ಅಧಿಕಾರಿಗಳು ಕಂಡಕ್ಟರ್ ವಿರುದ್ಧ ಗರಂ ಆಗಿದ್ದಾರೆ.
ಘಟನೆಯ ಕುರಿತು ಅಧಿಕಾರಿಯೊಬ್ಬರು ಪ್ರತಿಕ್ರಯಿಸಿ, ಪ್ರಯಾಣಿಕನ ಜತೆ ಹುಂಜ ಇರುವುದನ್ನು ಗಮನಿಸಿದ ಮೇಲೆ ಆತನನ್ನು ಬಸ್ನಿಂದ ಕೆಳಗೆ ಇಳಿಸಬೇಕಿತ್ತು ಆದರೆ ಅದರ ಬದಲು ಟಿಕೆಟ್ ನೀಡಿದ್ದಾರೆ. ಪ್ರಾಣಿಗಳನ್ನು ಬಸ್ನಲ್ಲಿ ಹತ್ತಿಸುವಂತಿಲ್ಲ. ಹೀಗಿದ್ದರೂ ಇರಿಸಿಕೊಂಡು ತಪ್ಪು ಮಾಡಿದ್ದಾರೆ, ಅದೂ ಅಲ್ಲದೆ ಟಿಕೆಟ್ ಕೂಡ ನೀಡಿ ಮತ್ತೊಂದು ತಪ್ಪು ಮಾಡಿದ್ದಾರೆ. ಹೀಗಾಗಿ ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಕಂಡಕ್ಟರ್ ಹುಂಜಕ್ಕೆ ಟಿಕೆಟ್ ನೀಡಿದ ವಿಡಿಯೋ ಮತ್ತು ವಿಚಾರ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ:
ಇದು 100 ವರ್ಷಗಳ ಹಳೆಯ ಮೊಟ್ಟೆ: ಶತಮಾನದ ಮೊಟ್ಟೆಯ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ
Published On - 2:36 pm, Thu, 10 February 22