Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೆಸ್ಟೋರೆಂಟ್‌ನಲ್ಲಿ ಉಡ ಪ್ರತ್ಯಕ್ಷ; ಭಯಗೊಂಡ ಮಹಿಳೆ ಉಡದಂತೆ ಕುರ್ಚಿ ಹಿಡಿದು, ಮಾಡಿದ್ದೇನು ಗೊತ್ತಾ?

56 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಹಿಳೆ ಜೋರಾಗಿ ಕಿರುಚಾಡುವುದನ್ನು ಕಂಡ ನೆಟ್ಟಿಗರು ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ವೈರಲ್‌ಹಾಗ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Viral Video: ರೆಸ್ಟೋರೆಂಟ್‌ನಲ್ಲಿ ಉಡ ಪ್ರತ್ಯಕ್ಷ; ಭಯಗೊಂಡ ಮಹಿಳೆ ಉಡದಂತೆ ಕುರ್ಚಿ ಹಿಡಿದು, ಮಾಡಿದ್ದೇನು ಗೊತ್ತಾ?
ಕುರ್ಚಿ ಹತ್ತಿದ ಮಹಿಳೆ
Follow us
TV9 Web
| Updated By: preethi shettigar

Updated on:Feb 11, 2022 | 9:28 AM

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ವಿಡಿಯೋ ವೈರಲ್(Video Viral)​ ಆಗುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಪ್ರಾಣಿ ಮತ್ತು ಮನುಷ್ಯನ ಒಡನಾಟದ ವಿಡಿಯೋಗಳು ವೈರಲ್​ ಆಗುತ್ತವೆ ಅಥವಾ ಪ್ರಾಣಿಗಳಿಂದ ಭಯಬೀತರಾದ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social media) ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ರೆಸ್ಟೋರೆಂಟ್‌ನಲ್ಲಿ ಪ್ರತ್ಯಕ್ಷವಾದ ಉಡವನ್ನು(monitor lizard) ಕಂಡು ಮಹಿಳೆಯೊಬ್ಬಳು ಕುರ್ಚಿ ಹತ್ತಿ ಕಿರುಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ವೈರಲ್​ ಆದ ವಿಡಿಯೋದಲ್ಲಿ ಥಾಯ್ಲೆಂಡ್‌ನ ರೆಸ್ಟೋರೆಂಟ್‌ನ ದೃಶ್ಯಾವಳಿಗಳು ಇವೆ. ಮಹಿಳೆಯೊಬ್ಬಳು ಕುರ್ಚಿಯ ಮೇಲೆ ನಿಂತು ನೆಲದ ಮೇಲಿನ ಉಡವನ್ನು ಕಂಡು ಜೋರಾಗಿ ಕಿರುಚಾಡುವುದನ್ನು ಕಾಣಬಹುದು. ಈ ವೇಳೆ ಮಹಿಳೆಯ ಸಹಾಯಕ್ಕೆ ಬಂದ ಆ ರೆಸ್ಟೋರೆಂಟ್‌ನ ಸಿಬ್ಬಂದಿ ಉಡವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಾನೆ. ಉಡ ಆ ವ್ಯಕ್ತಿಯ ಮೇಲೆ ದಾಳಿ ಮಾಡಲು ಮುಂದಾಗುವಾಗ ತಾನು ಧರಿಸಿದ ಚಪ್ಪಲಿ ತೆಗೆದು ಅದನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ.

ಉಡವನ್ನು ಹಿಡಿಯಲು ವ್ಯಕ್ತಿ ಪ್ರಯತ್ನಿಸುತ್ತಿರುವಾಗ ಮಹಿಳೆ ಕಣ್ಣೀರಿಡುತ್ತಾ ತನ್ನನ್ನು ಕಾಪಾಡಿ ಎನ್ನುವಂತೆ ಗೊಗರೆಯುತ್ತಾಳೆ. ಬಳಿಕ ರೆಸ್ಟೋರೆಂಟ್‌ನ ಸಿಬ್ಬಂದಿ ಮಾಪಿಂಗ್​ ತಂದು ಉಡವನ್ನು ಆ ಸ್ಥಳದಿಂದ ದೂರ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾನೆ. ಇಷ್ಟಾದ ನಂತರ ಮಹಿಳೆ ನಿಟ್ಟುಸಿರು ಬಿಟ್ಟು ತನ್ನ ಸಹಪಾಠಿಗಳ ಕಡೆಗೆ ನೋಡುತ್ತಾಳೆ.

56 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಹಿಳೆ ಜೋರಾಗಿ ಕಿರುಚಾಡುವುದನ್ನು ಕಂಡ ನೆಟ್ಟಿಗರು ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ವೈರಲ್‌ಹಾಗ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಾವಿರಾರು ಲೈಕ್​ ಬಂದಿದ್ದು, ಲಕ್ಷಾಂತರ ವ್ಯೂವ್ಸ್​ ಪಡೆದುಕೊಂಡಿದೆ.

ಅನವಶ್ಯಕವಾದ ಕಿರಿಚುವಿಕೆಯು ಹಾಸ್ಯಾಸ್ಪದವಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದರೆ, ಮತ್ತೊಬ್ಬರು ಬಹುಶಃ ಆ ಉಡ ಅವಳಿಗೆ ಹೆಚ್ಚು ಹೆದರುತ್ತಿತ್ತು ಎಂದು ಈ ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ. ಆದಾಗ್ಯೂ, ಕೆಲವರು ಮಹಿಳೆಯ ಜಾಗದಲ್ಲಿ ನಾವಿದ್ದರೂ ನಮಗೆ ಹೆಚ್ಚು ಭಯವಾಗುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Viral Video: ಗೋಲ್​ಗಪ್ಪ ಐಸ್ ಕ್ರೀಮ್ ತಿಂದಿದ್ದೀರಾ? ವೈರಲ್ ಆದ ಹೊಸ ರೆಸಿಪಿಯ ವಿಡಿಯೋ ನೋಡಿ

Viral Video: ಮದುವೆ ಮನೆಯಲಿ ಊ ಅಂತಾವಾ ಸಾಂಗ್​ಗೆ ಸಖತ್ ಸ್ಟೆಪ್ ಹಾಕಿದ ದೇಸಿ ವಧು-ವರ

Published On - 9:25 am, Fri, 11 February 22

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್