AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮನೆಯಲಿ ಊ ಅಂತಾವಾ ಸಾಂಗ್​ಗೆ ಸಖತ್ ಸ್ಟೆಪ್ ಹಾಕಿದ ದೇಸಿ ವಧು-ವರ

ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಾಚಿ ಮೋರ್ ಮತ್ತು ರೋನಕ್ ಶಿಂಧೆ ಎಂಬ ಹೆಸರಿನ ದೇಸಿ ವಧು-ವರ ತಮ್ಮ ವರ್ಮಲಾ ಸಮಾರಂಭದಲ್ಲಿ ಹಾಡಿನ ಆಕರ್ಷಕ ಬೀಟ್‌ಗಳಿಗೆ ಎಲ್ಲರೂ ಚಿಂದಿ ಎನ್ನುವ ಹಾಗೆ ಹೆಜ್ಜೆ ಹಾಕಿದ್ದಾರೆ.

Viral Video: ಮದುವೆ ಮನೆಯಲಿ ಊ ಅಂತಾವಾ ಸಾಂಗ್​ಗೆ ಸಖತ್ ಸ್ಟೆಪ್ ಹಾಕಿದ ದೇಸಿ ವಧು-ವರ
ಡ್ಯಾನ್ಸ್ ಮಾಡುತ್ತಿರುವ ವಧು-ವರ
TV9 Web
| Edited By: |

Updated on:Feb 07, 2022 | 4:02 PM

Share

ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ: ದಿ ರೈಸ್ ಇನ್ನೂ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ಚಲನಚಿತ್ರವು ನಿಜವಾಗಿಯೂ ಬ್ಲಾಕ್ಬಸ್ಟರ್ ಆಗಿದ್ದು, ಅದರ ಜನಪ್ರಿಯತೆಗೆ ಯಾವುದೇ ಮಿತಿಯಿಲ್ಲ ಎನ್ನುವಂತಾಗಿದೆ. ಚಿತ್ರದ ಡೈಲಾಗ್‌ಗಳಿಂದ ಹಿಡಿದು ಹಾಡುಗಳವರೆಗೆ ಎಲ್ಲವೂ ಸೂಪರ್‌ಹಿಟ್. ಪುಷ್ಪಾ ಚಿತ್ರದ ಹಾಡುಗಳಿಗೆ ಜನರು ನೃತ್ಯ ಮಾಡುವ ಅಥವಾ ಅಲ್ಲು ಅರ್ಜುನ್ ಅವರ ಡೈಲಾಗ್​ಗೆ ಲಿಪ್ ಸಿಂಕ್ ಮಾಡುವ ಹಲವಾರು ರೀಲ್‌ಗಳು ಮತ್ತು ವಿಡಿಯೋಗಳನ್ನು ನೀವು ನೋಡಿರಬಹುದು. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಊ ಅಂಟಾವಾ (Oo Antava OoOo Antava Mava) ಟ್ರೆಂಡಿಂಗ್ ಹಾಡಿಗೆ ದೇಸಿ ವಧು ಮತ್ತು ವರ ಡ್ಯಾನ್ಸ್ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಾಚಿ ಮೋರ್ ಮತ್ತು ರೋನಕ್ ಶಿಂಧೆ ಎಂಬ ಹೆಸರಿನ ದೇಸಿ ವಧು-ವರ ತಮ್ಮ ವರ್ಮಲಾ ಸಮಾರಂಭದಲ್ಲಿ ಹಾಡಿನ ಆಕರ್ಷಕ ಬೀಟ್‌ಗಳಿಗೆ ಎಲ್ಲರೂ ಚಿಂದಿ ಎನ್ನುವ ಹಾಗೆ ಹೆಜ್ಜೆ ಹಾಕಿದ್ದಾರೆ. ಅವರು ಸಾಂಪ್ರದಾಯಿಕ ಮರಾಠಿ ಮದುವೆಯ ಬಟ್ಟೆಗಳನ್ನು ಧರಿಸಿದ್ದಾರೆ. ಇತರ ಅತಿಥಿಗಳು ಸಹ ಅವರೊಂದಿಗೆ ಹೆಜ್ಜೆ ಹಾಕಿದ್ದು, ನೆಟ್ಟಿಗರಿಗೂ ಸಾಕಷ್ಟು ಇಷ್ಟವಾಗಿದೆ. ಈ ವಿಡಿಯೋವನ್ನು ಕೆಮಿಸ್ಟ್ರಿ ಸ್ಟುಡಿಯೋಸ್ ಎನ್ನುವ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನಾವು ನೋಡಿದ ಅತ್ಯಮತ ಉದ್ಧಟ ವಧು ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ 2.3 ಮಿಲಿಯನ್ ವೀಕ್ಷಣೆ ಗಳಿಸಿದೆ. ದೇಸಿ ಜೋಡಿಯ ನೃತ್ಯದಿಂದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ.

2021ರಲ್ಲಿ ಹೆಚ್ಚು ಸದ್ದು ಮಾಡಿದ ಟಾಪ್​ 100 ಹಾಡುಗಳ ಪಟ್ಟಿಯಲ್ಲಿ ‘ಪುಷ್ಪ’ ಸಿನಿಮಾದ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ’ ನಂ.1 ಪಟ್ಟ ಪಡೆದುಕೊಂಡಿತ್ತು. ಬಿಡುಗಡೆಯಾದ ಬಳಿಕ ಈ ಗೀತೆಯನ್ನು ಜನರು ಮುಗಿಬಿದ್ದು ನೋಡಿದ್ದರು. ಅತಿವೇಗವಾಗಿ ಹೆಚ್ಚು ವೀವ್ಸ್​ ಪಡೆಯುವಲ್ಲಿಯೂ ಈ ಹಾಡು ದಾಖಲೆ ಬರೆಯಿತು. ಈ ಗೀತೆಯು ತೆಲುಗು ವರ್ಷನ್​ನಲ್ಲಿ​ 9.3 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್​ ಟ್ರೆಂಡ್​ ಮತ್ತು ಜನರ ಆಯ್ಕೆಯನ್ನು ಆಧರಿಸಿ ಈ ಹಾಡು ನಂ.1 ಸ್ಥಾನಕ್ಕೇರಿತ್ತು.

ಇದನ್ನೂ ಓದಿ;

Viral Video: ಅಮ್ಮನ ಹಾಲು ಕುಡಿಯಲು ಮರಿಯಾನೆಗಳ ಮಧ್ಯೆ ಜಗಳ; ನಾನು ಈ ಆಟಕ್ಕಿಲ್ಲ ಎಂದ ತಾಯಾನೆ!

Published On - 3:57 pm, Mon, 7 February 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್