AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮನ ಹಾಲು ಕುಡಿಯಲು ಮರಿಯಾನೆಗಳ ಮಧ್ಯೆ ಜಗಳ; ನಾನು ಈ ಆಟಕ್ಕಿಲ್ಲ ಎಂದ ತಾಯಾನೆ!

Elephant Video: ಈ ವಿಡಿಯೋವನ್ನು ಆಫ್ರಿಕಾದ ಕೀನ್ಯಾದಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಒಂದು ದಿನದ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

Viral Video: ಅಮ್ಮನ ಹಾಲು ಕುಡಿಯಲು ಮರಿಯಾನೆಗಳ ಮಧ್ಯೆ ಜಗಳ; ನಾನು ಈ ಆಟಕ್ಕಿಲ್ಲ ಎಂದ ತಾಯಾನೆ!
ಆನೆ
TV9 Web
| Updated By: ಸುಷ್ಮಾ ಚಕ್ರೆ|

Updated on: Feb 07, 2022 | 2:33 PM

Share

ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ನಡುವಿನ ಜಗಳ ಹೊಸತೇನಲ್ಲ. ಆದರೆ, ಇದು ಮನುಷ್ಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರಾಣಿಗಳಲ್ಲೂ ತೀವ್ರ ಪೈಪೋಟಿ ಇರುತ್ತದೆ. ಒಡಹುಟ್ಟಿದವರ ಪೈಪೋಟಿಯು ಹಳೆಯದು. ಅಮ್ಮನಿಗೆ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅವರ ನಡುವೆ ಪೈಪೋಟಿ ಹಾಗೂ ಜಗಳ ತುಂಬಾ ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ಮನುಷ್ಯರಲ್ಲಿ ಮಾತ್ರವಲ್ಲದೆ ಯಾವುದೇ ಇತರ ಪ್ರಾಣಿಗಳು, ಪಕ್ಷಿಗಳಲ್ಲಿಯೂ ಕಂಡುಬರುತ್ತದೆ. ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ ಇನ್‌ಸ್ಟಾಗ್ರಾಮ್ (Instagram) ಪುಟದಿಂದ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಎರಡು ಮರಿ ಆನೆಗಳು (Elephants) ಜಗಳವಾಡುತ್ತಿವೆ.

ಎರಡು ಆನೆ ಮರಿಗಳು ತಮ್ಮ ತಾಯಿಯ ಹಾಲು ಕುಡಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಣ್ಣ ಆನೆ ಮರಿ ತನ್ನ ಅಕ್ಕನೊಂದಿಗೆ ಅಮ್ಮನ ಹಾಲನ್ನು ಹಂಚಿಕೊಳ್ಳಲು ಇಷ್ಟಪಡದ ಕಾರಣ ಅಕ್ಕನಿಗೆ ಹಾಲು ಕುಡಿಯಲು ಬಿಡಲಿಲ್ಲ. ಇದನ್ನೆಲ್ಲ ಗಮನಿಸಿದ ತಾಯಿ ಆನೆ ತನ್ನ ಮಕ್ಕಳ ಜಗಳದ ನಡುವೆ ಪ್ರವೇಶಿಸದೆ ಸುಮ್ಮನಾದಳು. ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ.

ಆನೆಗಳ ನಡುವೆಯೂ ಫ್ಯಾಮಿಲಿ ಡ್ರಾಮಾ ನಡೆಯುತ್ತದೆ! ಮೂರು ವರ್ಷದ ಲುಲು ತನ್ನ ಅಮ್ಮನ ಹಾಲು ಕುಡಿಯುತ್ತಿದ್ದಳು. ಆದರೆ ಬೇಬಿ ಲೆಕ್ಸಿ ತನ್ನ ಅಕ್ಕನೊಂದಿಗೆ ‘ತನ್ನ’ ಹಾಲನ್ನು ಹಂಚಿಕೊಳ್ಳಲು ಬಯಸಲಿಲ್ಲ. ಇದರಿಂದ ಲುಲು ಅಮ್ಮನ ಹಾಲನ್ನು ತಂಗಿಗೇ ಬಿಟ್ಟುಕೊಡಬೇಕಾಯಿತು. ಆ ಆನೆ ಮರಿಗಳ ಅಮ್ಮ ಈ ಅಕ್ಕ-ತಂಗಿಯರ ಜಗಳದಿಂದ ತಾನು ದೂರವಿರುವುದೇ ಉತ್ತಮ ಎಂದು ಭಾವಿಸಿ ಅವರಿಬ್ಬರ ಜಗಳ ಬಿಡಿಸಲು ಹೋಗಲಿಲ್ಲ ಎಂದು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.

ಈ ವಿಡಿಯೋವನ್ನು ಆಫ್ರಿಕಾದ ಕೀನ್ಯಾದಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಒಂದು ದಿನದ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ ಈ ವೀಡಿಯೊ 59,000ಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಇದಕ್ಕೆ ಪ್ರಾಣಿ ಪ್ರಿಯರಿಂದ ವಿವಿಧ ಕಾಮೆಂಟ್‌ಗಳೂ ಬಂದಿವೆ.

ಇದನ್ನೂ ಓದಿ: Viral Video: ಸಿಎಂ ಜಗನ್ ಮೋಹನ್ ರೆಡ್ಡಿ ಬಂಗಿ ಜಂಪ್ ಮಾಡಿದ ವಿಡಿಯೋ ವೈರಲ್

Viral Video: ಆನೆ ಜತೆಗೆ ಫುಟ್​ಬಾಲ್​ ಆಡುತ್ತಿದ್ದ ಬಾಲಕಿ ಆನೆ ಹಾಲು ಕುಡಿಯಲು ಮುಂದಾಗಿದ್ದೇಕೆ? ಇಲ್ಲಿದೆ ವೈರಲ್​ ವಿಡಿಯೋ