ಪಾಕ್ ಪರ ಟ್ವೀಟ್ ಮಾಡಿದ ಹುಂಡೈ: ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ದಕ್ಷಿಣ ಕೋರಿಯಾದ ಹುಂಡೈ (Hyundai) ಕಾರು ಕಂಪನಿಯ ಪಾಕಿಸ್ತಾನದ ಘಟಕವು ಕಾಶ್ಮೀರ ಏಕತಾ ದಿನದ ಕುರಿತು ಮಾಡಿರುವ ಟ್ವೀಟ್ ಬಗ್ಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ
ಬೆಂಗಳೂರು: ದಕ್ಷಿಣ ಕೋರಿಯಾದ ಹುಂಡೈ (Hyundai) ಕಾರು ಕಂಪನಿಯ ಪಾಕಿಸ್ತಾನದ ಘಟಕವು ಕಾಶ್ಮೀರ ಏಕತಾ ದಿನದ ಕುರಿತು ಮಾಡಿರುವ ಟ್ವೀಟ್ ಬಗ್ಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಿಯಾ ಕಂಪನಿಯು ಸಹ ಕಾಶ್ಮೀರದ ವಿಚಾರದಲ್ಲಿ ಹಗುರವಾಗಿ ಮಾತನಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ #BoycottHyundai ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಸಾವಿರಾರು ಜನರು ಭಾರತದಿಂದ ಹುಂಡೈ ಕಂಪನಿಯನ್ನು ಬಹಿಷ್ಕರಿಸಬೇಕು, ಹುಂಡೈ ಕಾರುಗಳನ್ನು ಖರೀದಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ಹುಂಡೈ ಬದಲು ಟಾಟಾ ಕಂಪನಿಯ ಕಾರುಗಳನ್ನು ಖರೀದಿಸಬೇಕೆಂದು ಕರೆ ನೀಡುತ್ತಿದ್ದಾರೆ.
ಕಾಶ್ಮೀರದ ಸಹೋದರರ ತ್ಯಾಗವನ್ನು ಸ್ಮರಿಸುತ್ತೇವೆ. ಅವರು ಇಂದಿಗೂ ನಡೆಸುತ್ತಿರುವ ಸ್ವಾತಂತ್ರ್ಯ ಹೋರಾಟವನ್ನು ಗೌರವಿಸುತ್ತೇವೆ ಎಂದು ಹುಂಡೈ ಕಂಪನಿಯ ಪಾಕಿಸ್ತಾನ ಘಟಕ (Hyundai Pakistan) ಘಟಕವು ಟ್ವೀಟ್ ಮಾಡಿದೆ. ಈ ಟ್ವೀಟ್ ಬಗ್ಗೆ ಭಾರತೀಯರು ವ್ಯಾಪಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹುಂಡೈ ಕಂಪನಿಯ ಭಾರತ ಘಟಕವು ಸ್ಪಷ್ಟನೆ ನೀಡಿದೆ. ಆದರೆ ಕಂಪನಿಯು ಭಾರತೀಯರಲ್ಲಿ ಕ್ಷಮೆ ಯಾಚಿಸಿಲ್ಲ.
ಹುಂಡೈ ಕಂಪನಿಯು ಭಾರತದಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಭಾರತದ ಪರವಾಗಿ ನಾವಿದ್ದೇವೆ. ಭಾರತದ ಬಗ್ಗೆ ಹುಂಡೈ ಕಂಪನಿಯ ನಿಲುವನ್ನು ಪ್ರಶ್ನಿಸುವಂಥ ಕೆಲ ಪೋಸ್ಟ್ಗಳನ್ನು ಹಲವು ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಭಾರತಕ್ಕೆ ಹುಂಡೈ 2ನೇ ಮನೆಯಿದ್ದಂತೆ. ನಾವು ಈ ದೇಶದ ಸೇವೆಗೆ ಬದ್ಧರಾಗಿದ್ದೇವೆ. ಹುಂಡೈ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದಿದೆ. ಭಾರತ ಮತ್ತು ಭಾರತೀಯರ ಅಭ್ಯುದಯಕ್ಕಾಗಿ ನಾವು ಶ್ರಮಿಸುತ್ತೇವೆ ಎಂದು ಹುಂಡೈ ತನ್ನ ಅಧಿಕೃತ ಹೇಳಿಕೆಯನ್ನು ಟ್ವೀಟ್ ಮಾಡಿದೆ.
Official Statement from Hyundai Motor India Ltd.#Hyundai #HyundaiIndia pic.twitter.com/dDsdFXbaOd
— Hyundai India (@HyundaiIndia) February 6, 2022
ಆದರೆ ಈ ಸ್ಪಷ್ಟನೆಯನ್ನು ಬಹುತೇಕರು ಒಪ್ಪಿಲ್ಲ. ‘ಇಲ್ಲ, ಹುಂಡೈ. ಈ ಹೇಳಿಕೆಯಿಂದ ಏನನ್ನೂ ಸಾಧಿಸಿದಂತೆ ಆಗಲಿಲ್ಲ. ಹುಂಡೈನ ಪಾಕಿಸ್ತಾನ ಘಟಕ ಮಾಡಿರುವ ಟ್ವೀಟ್ಗೆ ಸ್ಪಷ್ಟವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಎಲ್ಲ ಭಾರತೀಯರೂ ಹುಂಡೈ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಲಿದ್ದಾರೆ’ ಎಂದು ಹಲವರು ಹೇಳಿದ್ದಾರೆ.
Bogus statment made by @HyundaiIndia ! First of all this is not an apology & secondly this post is still there on their insta page. #BoycottHyundai pic.twitter.com/7KPevGSkyG
— BALA (@erbmjha) February 6, 2022
Hyundai made a wrong choice by standing with Pakistan and supporting terrorism in indian soil.
Now Indians have to make right choice by boycotting Hyundai vehicles in india.@HyundaiIndia#BoycottHyundai pic.twitter.com/wNEzjX2gus
— Bharath Bhatta (@BharathBhatta1) February 6, 2022
ಇದನ್ನೂ ಓದಿ: ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್; ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿದೆ Boycott Amazon ಹ್ಯಾಷ್ಟ್ಯಾಗ್