ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್​; ಟ್ವಿಟರ್​ನಲ್ಲಿ ಟ್ರೆಂಡ್​ ಆಗ್ತಿದೆ Boycott Amazon ಹ್ಯಾಷ್​ಟ್ಯಾಗ್​

ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್​; ಟ್ವಿಟರ್​ನಲ್ಲಿ ಟ್ರೆಂಡ್​ ಆಗ್ತಿದೆ Boycott Amazon ಹ್ಯಾಷ್​ಟ್ಯಾಗ್​
ಅಮೇಜಾನ್​​ನಲ್ಲಿ ಮಾರಾಟಕ್ಕಿಟ್ಟ ವಸ್ತುಗಳು

ಅಮೇಜಾನ್ ಹೀಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2019ರಲ್ಲಿ ಇಂಥದ್ದೇ ಒಂದು ಕೆಲಸ ಮಾಡಿತ್ತು. ಹಿಂದು ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್​ ಸೀಟ್​ ಕವರ್​ಗಳು, ಬಾಗಿಲು ಮ್ಯಾಟ್​​ಗಳನ್ನು ಮಾರಾಟಕ್ಕಿಟ್ಟಿತ್ತು.

TV9kannada Web Team

| Edited By: Lakshmi Hegde

Jan 25, 2022 | 2:30 PM

ಇ -ಕಾಮರ್ಸ್​ ದಿಗ್ಗಜ, ಅತ್ಯಂತ ದೊಡ್ಡ ಆನ್​ಲೈನ್​ ಶಾಪಿಂಗ್ ಸಂಸ್ಥೆ ಅಮೇಜಾನ್​ ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. ಈ ಬಾರಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಮೇಜಾನ್​ ಬಹಿಷ್ಕರಿಸಿ (Boycott Amazon), ಅಮೇಜಾನ್​ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ (Amazon_Insults_National_Flag)ಎಂಬಿತ್ಯಾದಿ ಹ್ಯಾಷ್​​ಟ್ಯಾಗ್​ನಡಿ ಪೋಸ್ಟ್ ಹಾಕುತ್ತಿದ್ದಾರೆ. 73ನೇ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಬೆನ್ನಲ್ಲೇ, ಅಮೇಜಾನ್​ ಹೀಗೊಂದು ಎಡವಟ್ಟು ಮಾಡಿಕೊಂಡಿದೆ. ರಾಷ್ಟ್ರಧ್ವಜದ ಮುದ್ರೆ, ಚಿತ್ರವುಳ್ಳ ವಸ್ತುಗಳನ್ನು ಅಮೇಜಾನ್​ ಮಾರಾಟ ಮಾಡುತ್ತಿರುವುದೇ ಇದಕ್ಕೆ ಕಾರಣ.

ಅಮೇಜಾನ್​ ಇಂಡಿಯಾದಲ್ಲ, ಧ್ವಜದ ಚಿತ್ರ ಮುದ್ರಿಸಲಾದ ಟಿ-ಶರ್ಟ್​ಗಳು, ಮಾಸ್ಕ್​ಗಳು, ಕೀ ಚೈನ್​​ಗಳು, ಚಾಕಲೇಟ್ ಕವರ್​​ಗಳು ​, ಸೆರಾಮಿಕ್ ಮಗ್​​ಗಳು, ಮಕ್ಕಳ ಬಟ್ಟೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಧ್ವಜ ಸಂಹಿತೆ 2022ರ ಉಲ್ಲಂಘನೆ ಎಂದೂ ಹೇಳಲಾಗಿದೆ.  ಈ ಸಂಹಿತೆಯ ಪ್ರಕಾರ, ಯಾವುದೇ ಉಡುಪಿನ ಭಾಗದಲ್ಲಿ ರಾಷ್ಟ್ರಧ್ವಜ ಮುದ್ರಿಸುವಂತಿಲ್ಲ. ಕುಶನ್​ಗಳು, ಕರವಸ್ತ್ರಗಳು, ನ್ಯಾಪ್​ಕಿನ್​ ಅಥವಾ ಪೆಟ್ಟಿಗೆಗಳ ಮೇಲೆಲ್ಲ ಪ್ರಿಂಟ್​ ಅಥವಾ ಕಸೂತಿ ಮಾಡುವಂತಿಲ್ಲ. ಆದರೆ ಅಮೇಜಾನ್​ ತನ್ನ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು, ಮಾರ್ಕೆಟಿಂಗ್​ ಪ್ರಚಾರಕ್ಕಾಗಿ ಭಾರತದ ಧ್ವಜದ ಚಿತ್ರ ಬಳಸಿಕೊಳ್ಳುತ್ತಿದೆ ಎಂದು ಅನೇಕರು ತಮ್ಮ ಟ್ವಿಟರ್​ನಲ್ಲಿ ಆರೋಪಿಸಿದ್ದಾರೆ.

ನೆಟ್ಟಿಗರೊಬ್ಬರು ತ್ರಿವರ್ಣ ಧ್ವಜದ ಮಾದರಿಯಲ್ಲಿ ಹೊಲಿಯಲಾದ ಮಾಸ್ಕ್​ ಚಿತ್ರ ಶೇರ್​ ಮಾಡಿಕೊಂಡು, ಇದು ಅಮೇಜಾನ್​​ನಲ್ಲಿ ಮಾರಾಟಕ್ಕಿದೆ. ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ. ಮಾಸ್ಕ್​​ನ್ನು ಬಳಸಿ ಸುಡುತ್ತಾರೆ ಇಲ್ಲವೇ ಬಿಸಾಡುತ್ತಾರೆ. ಹೀಗೆ ಮಾಡಿದರೆ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಅಮೇಜಾನ್ ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹೀಗೆ ಇನ್ನೊಬ್ಬರು ಟ್ವೀಟ್ ಮಾಡಿ, ರಾಷ್ಟ್ರಧ್ವಜದ ಚಿತ್ರವಿರುವ ಎಲ್ಲ ಉತ್ಪನ್ನಗಳನ್ನೂ ಅಮೇಜಾನ್​ ಹಿಂಪಡೆಯಬೇಕು. ಬೇಷರತ್ತು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರ ಧ್ವಜ ಸಂಹಿತೆಯನ್ನು ಅವಮಾನಿಸಿದ ಅಮೇಜಾನ್​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅನೇಕರು ಆಗ್ರಹಿಸಿದ್ದಾರೆ.

ಇದೇ ಮೊದಲಲ್ಲ:  ಅಮೇಜಾನ್ ಹೀಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2019ರಲ್ಲಿ ಇಂಥದ್ದೇ ಒಂದು ಕೆಲಸ ಮಾಡಿತ್ತು. ಹಿಂದು ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್​ ಸೀಟ್​ ಕವರ್​ಗಳು, ಬಾಗಿಲು ಮ್ಯಾಟ್​​ಗಳನ್ನು ಮಾರಾಟಕ್ಕಿಟ್ಟಿತ್ತು. ಆಗಲೂ ಸಹ ಅಮೇಜಾನ್​ ಬಹಿಷ್ಕರಿಸಿ ಎಂಬ ಅಭಿಯಾನ ಇಂಟರ್​​ನೆಟ್​​ನಲ್ಲಿ ನಡೆದಿತ್ತು. ಅಮೇಜಾನ್​ ಕ್ಷಮೆ ಕೋರಿತ್ತು. ಅದಕ್ಕೂ ಮೊದಲು 2017ರಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಬಾಗಿಲಿಗೆ ಹಾಕುವ ಮ್ಯಾಟ್​ಗಳು ಅಮೇಜಾನ್​​ನ ಕೆನಡಾ ವಿಭಾಗದ ವೆಬ್​ಸೈಟ್​​ನಲ್ಲಿ ಮಾರಾಟಕ್ಕೆ ಇದ್ದವು. ಆಗಲೂ ಸಹ ಬಹಿಷ್ಕಾರ ಅಭಿಯಾನ ನಡೆದಿತ್ತು.

ಇಲ್ಲಿವೆ ನೋಡಿ ಅಮೇಜಾನ್​ ವಿರುದ್ಧದ ಕೆಲವು ಟ್ವೀಟ್​ಗಳು

ಇದನ್ನೂ ಓದಿ: ಸಾಧನೆಗೆ ವಯಸ್ಸಿನ ಹಂಗಿಲ್ಲ, 60ರ ಇಳಿ ವಯಸ್ಸಿನಲ್ಲೂ ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್​​ಗೆ ಸೇರ್ಪಡೆ

Follow us on

Related Stories

Most Read Stories

Click on your DTH Provider to Add TV9 Kannada