AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಎದುರು ರಿಲೀಸ್ ಆಗಲಿದೆ ಪವನ್ ಕಲ್ಯಾಣ್ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’

‘ಧುರಂಧರ್ 2’ ಸಿನಿಮಾಗೆ ಪೈಪೋಟಿ ನೀಡಲು ತೆಲುಗಿನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬರುತ್ತಿದೆ. ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುತ್ತಿದ್ದಂತೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಾಕ್ಸ್ ಆಫೀಸ್​​ನಲ್ಲಿ ರಣವೀರ್ ಸಿಂಗ್ ಸಿನಿಮಾ ಎದುರು ಪವನ್ ಕಲ್ಯಾಣ್ ಸಿನಿಮಾ ಪೈಪೋಟಿ ನೀಡಲಿದೆ.

‘ಧುರಂಧರ್ 2’ ಎದುರು ರಿಲೀಸ್ ಆಗಲಿದೆ ಪವನ್ ಕಲ್ಯಾಣ್ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’
Pawan Kalyan
ಮದನ್​ ಕುಮಾರ್​
|

Updated on: Mar 05, 2026 | 3:34 PM

Share

ಮಾರ್ಚ್ 19ರಂದು ಭಾರತದ ಬಾಕ್ಸ್ ಆಫೀಸ್​ನಲ್ಲಿ ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ (Toxic) ಸಿನಿಮಾಗಳ ನಡುವೆ ದೊಡ್ಡ ಕ್ಲ್ಯಾಶ್ ಆಗುವ ಸಾಧ್ಯತೆ ಇತ್ತು. ಆದರೆ ‘ಟಾಕ್ಸಿಕ್’ ಸಿನಿಮಾ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿತು. ಮಾರ್ಚ್ 19ರ ಬದಲು ಜೂನ್ 4ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಹಾಗಂತ ‘ಧುರಂಧರ್ 2’ (Dhurandhar 2) ಸಿನಿಮಾಗೆ ಪೈಪೋಟಿ ಕಡಿಮೆ ಆಗಿಲ್ಲ. ಮಾರ್ಚ್ 19ರಂದು ಬೇರೆ ಬೇರೆ ಸಿನಿಮಾಗಳು ರಿಲೀಸ್ ಆಗಲಿವೆ. ಕನ್ನಡದಲ್ಲಿ ‘ಲವ್ ಮಾಕ್ಟೇಲ್ 3’ ಅದೇ ದಿನ ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್ ನಟನೆಯ ತೆಲುಗಿನ ‘ಉಸ್ತಾದ್ ಭಗತ್ ಸಿಂಗ್’ (Ustaad Bhagat Singh) ಕೂಡ ಮಾರ್ಚ್ 19ರಂದು ಬಿಡುಗಡೆ ಆಗುವುದು ಖಚಿತವಾಗಿದೆ.

ಪವನ್ ಕಲ್ಯಾಣ್ ಅವರು ಈಗ ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಆಂಧ್ರದ ಉಪ ಮುಖ್ಯಮಂತ್ರಿ ಆಗಿರುವ ಅವರು ಇನ್ಮುಂದೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುವುದು ಅನುಮಾನ. ಹಾಗಾಗಿ ‘ಉಸ್ತಾದ್ ಭಗತ್ ಸಿಂಗ್’ ಅವರ ಕೊನೇ ಸಿನಿಮಾ ಎಂದು ಪರಿಗಣಿಸಲಾಗುತ್ತಿದೆ. ಆದ್ದರಿಂದ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.

ಹರೀಶ್ ಶಂಕರ್ ಅವರು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ, ರಾಶಿ ಖನ್ನಾ, ಅಶುತೋಶ್ ರಾಣ ಮುಂತಾದವರು ಪವನ್ ಕಲ್ಯಾಣ್ ಜೊತೆ ನಟಿಸಿದ್ದಾರೆ. ಈ ಸಿನಿಮಾವನ್ನು ಮಾರ್ಚ್ 26ರಂದು ಬಿಡುಗಡೆ ಮಾಡುವುದಾಗಿ ಈ ಮೊದಲು ಘೋಷಿಸಲಾಗಿತ್ತು. ಆದರೆ ‘ಟಾಕ್ಸಿಕ್’ ಮುಂದಕ್ಕೆ ಹೋಗುತ್ತಿದ್ದಂತೆಯೇ ಮಾರ್ಚ್ 19ರ ದಿನಾಂಕವನ್ನು ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ಆಕ್ರಮಿಸಿಕೊಂಡಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ಈ ಮೊದಲೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ಬಿಡುಗಡೆ ತಡವಾಗಿತ್ತು. ಈಗ ಒಂದು ವಾರ ಮುಂಚಿತವಾಗಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ತಿಳಿದು ಪವನ್ ಕಲ್ಯಾಣ್ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಸೆಲೆಬ್ರೇಷನ್ ಮಾಡಲು ನಮ್ಮ ಉಸ್ತಾದ್ ಒಂದು ವಾರ ಮುಂಚೆಯೇ ಬರುತ್ತಿದ್ದಾರೆ. ಮಾರ್ಚ್ 19ರಂದು ವಿಶ್ವಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ’ ಎಂದು ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಪೋಸ್ಟ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಡಿಕೆಶಿ ಬಗ್ಗೆ ನೊಣವಿನಕೆರೆ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ
ಡಿಕೆಶಿ ಬಗ್ಗೆ ನೊಣವಿನಕೆರೆ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!
ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!
ಮುಂದಿನ ಸಿಎಂ ಯಾರು ಅಂತಿದ್ದಂತೆ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮುಂದಿನ ಸಿಎಂ ಯಾರು ಅಂತಿದ್ದಂತೆ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಸಿದ್ದರಾಮಯ್ಯ ಪದತ್ಯಾಗಕ್ಕೆ ಹುಟ್ಟೂರಲ್ಲಿ ಆಕ್ರೋಶ
ಸಿದ್ದರಾಮಯ್ಯ ಪದತ್ಯಾಗಕ್ಕೆ ಹುಟ್ಟೂರಲ್ಲಿ ಆಕ್ರೋಶ
ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ
ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ
ಸಿದ್ದರಾಮಯ್ಯ ರಾಜೀನಾಮೆಗೆ ವಿಶೇಷ ಸೂಚನೆ ನೀಡಿದ ರಾಜ್ಯಪಾಲರ ಕಾರ್ಯದರ್ಶಿ!
ಸಿದ್ದರಾಮಯ್ಯ ರಾಜೀನಾಮೆಗೆ ವಿಶೇಷ ಸೂಚನೆ ನೀಡಿದ ರಾಜ್ಯಪಾಲರ ಕಾರ್ಯದರ್ಶಿ!
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ