AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

pawan kalyan

pawan kalyan

ಕೊನಿಡೆಲಾ ಪವನ್ ಕಲ್ಯಾಣ್, ಸೆಪ್ಟೆಂಬರ್ 2, 1971 ರಂದು ಜನನ .ಇವರು ನಟ, ರಾಜಕಾರಣಿ ಮತ್ತು ಜನ ಸೇನಾ ಪಕ್ಷದ ಸಂಸ್ಥಾಪಕರು. ಅವರು ತೆಲುಗು ಚಲನಚಿತ್ರೋದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಜನಪ್ರಿಯ ನಟ ಚಿರಂಜೀವಿ ಅವರ ಕಿರಿಯ ಸಹೋದರ ಪವನ್ ಕಲ್ಯಾಣ್ ಅವರು 1996 ರಲ್ಲಿ “ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ” ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ವರ್ಷಗಳಲ್ಲಿ, ಅವರು ಬ್ಲಾಕ್ಬಸ್ಟರ್ ಚಲನಚಿತ್ರಗಳೊಂದಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿದರು ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟರಾದರು. 2014 ರಲ್ಲಿ, ಪವನ್ ಕಲ್ಯಾಣ್ ರಾಜಕೀಯಕ್ಕೆ ಪ್ರವೇಶಿಸಿ ಜನಸೇನಾ ಪಕ್ಷವನ್ನು ಸ್ಥಾಪಿಸಿದರು, ಜನರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದರು. ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿದ್ದಾರೆ. ಪವನ್ ಕಲ್ಯಾಣ್ ಅವರ ರಾಜಕೀಯ ಪ್ರವೇಶವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರದೇಶದ ಸುಧಾರಣೆಗೆ ಕೊಡುಗೆ ನೀಡುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಇನ್ನೂ ಹೆಚ್ಚು ಓದಿ

ಅರ್ಧಕ್ಕೆ ನಿಂತು ಹೋಯ್ತು ಪವನ್ ಕಲ್ಯಾಣ್ ನಟನೆಯ ಸಿನಿಮಾ

‘ಓಜಿ’ ಸಿನಿಮಾನ ಎರಡು ಪಾರ್ಟ್​ಗಳಲ್ಲಿ ತರಬೇಕು ಎಂಬುದು ತಂಡದ ಆಲೋಚನೆ ಆಗಿತ್ತು. ಇದಕ್ಕೆ ಸಿದ್ಧತೆ ಕೂಡ ನಡೆದಿತ್ತು.ಈಗ ನಿರ್ಮಾಪಕ ಡಿವಿವಿ ದಾನಯ್ಯ ಎರಡನೇ ಪಾರ್ಟ್ ಮಾಡುವ ಆಲೋಚನೆ ಕೈ ಬಿಟ್ಟಿದ್ದಾರಂತೆ. ಓಜಿ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ನಿರ್ದೇಶನ ಮಾಡಿದ್ದ ‘ಸಾಹೋ’ ಸಿನಿಮಾ ಕೂಡ ಫ್ಲಾಪ್ ಆಗಿತ್ತು.

ನೀರಿನ ಸಮಸ್ಯೆ ಬಗೆಹರಿಸಲು ಸಹೋದರನಾಗಿ ಪ್ರಯತ್ನ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್​ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಹೋದರನಾಗಿ ಪ್ರಯತ್ನ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

‘ಓಜಿ’ ಓಟಕ್ಕೆ ಹೊಡೆತ ಕೊಟ್ಟ ‘ಕಾಂತಾರ: ಚಾಪ್ಟರ್ 1’ ಅಬ್ಬರ

‘ಕಾಂತಾರ: ಚಾಪ್ಟರ್ 1’ ಮೂಲತಃ ಕನ್ನಡದ ಸಿನಿಮಾ. ಈ ಚಿತ್ರವನ್ನು ರಿಷಬ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಬೆರ್ಮೆ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇದು ‘ಕಾಂತಾರ’ ಸಿನಿಮಾದ ಪ್ರೀಕ್ಷೆಲ್. ‘ಕಾಂತಾರ’ ತೆಲುಗು ಭಾಗದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಈ ಕಾರಣದಿಂದಲೇ ಪ್ರೀಕ್ಷೆಲ್ ಬಗ್ಗೆ ನಿರೀಕ್ಷೆ ಮೂಡಿದೆ. ನಿರೀಕ್ಷೆಯನ್ನೂ ಮೀರಿ ಸಿನಿಮಾ ಗಳಿಕೆ ಮಾಡುತ್ತಿದೆ.

‘ಓಜಿ’ ಅಬ್ಬರದ ಗಳಿಕೆ; ಇತ್ತೀಚಿನ ವರ್ಷಗಳಲ್ಲೇ ಅತಿ ದೊಡ್ಡ ಗೆಲುವು ಕಂಡ ಪವನ್ ಕಲ್ಯಾಣ್

OG Movie Collection: ಓಜಿ ಸಿನಿಮಾ ಮೂಲಕ ಪವನ್ ಕಲ್ಯಾಣ್ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಸೆಪ್ಟೆಂಬರ್ 25ರಂದು ರಿಲೀಸ್ ಆದ ಈ ಸಿನಿಮಾ ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸರಿ ಹೊಸ ದಾಖಲೆ ಬರೆದಿದೆ. ಇತ್ತೀಚಿನ ವರ್ಷಗಳಲ್ಲಿ ಪವನ್ ಕಲ್ಯಾಣ್ ಕಂಡ ಅತಿದೊಡ್ಡ ಗೆಲುವು ಇದಾಗಿದೆ.

ಶುಕ್ರವಾರವೂ ಭರ್ಜರಿಯಾಗಿ ಗಳಿಕೆ ಮಾಡಿದ ಪವನ್ ಕಲ್ಯಾಣ್ ‘ಓಜಿ’

OG Movie Collection: ಸದ್ಯ ಚಿತ್ರದ ಒಟ್ಟಾರೆ ಕಲೆಕ್ಷನ್ 104 ಕೋಟಿ ರೂಪಾಯಿ ಆಗಿದೆ. ಸಿನಿಮಾ ಒಂದು ಎರಡೇ ದಿನಕ್ಕೆ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ ಎಂದರೆ ಚಿತ್ರ ಗೆಲುವು ಕಂಡಿದೇ ಎಂದೇ ಅರ್ಥ. ಇದು ಪವನ್ ಕಲ್ಯಾಣ್ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ. ಈ ಗೆಲುವನ್ನು ಅವರು ಖುಷಿಯಿಂದ ಆಚರಿಸಿದ್ದಾರೆ. ಪವನ್ ಕಲ್ಯಾಣ್ ಕೂಡ ಖುಷಿ ಪಟ್ಟಿದ್ದಾರೆ.

‘ಓಜಿ’ ಅಬ್ಬರದ ಕಲೆಕ್ಷನ್; ಮೊದಲ ದಿನವೇ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಪವನ್ ಸಿನಿಮಾ

OG Movie Box Office Collection: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿರಲಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಆದರೆ, ಈಗ ‘ಓಜಿ’ ಚಿತ್ರದ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ಇಲ್ಲಿದೆ.

‘ಓಜಿ’ ಸಿನಿಮಾ ಟ್ರೇಲರ್ ಈವೆಂಟ್​ನಲ್ಲಿ ಮಳೆಯಲ್ಲಿ ನೆನೆದು ಹಾಸಿಗೆ ಹಿಡಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಳೆಯಲ್ಲಿ ನೆನೆದ ಪರಿಣಾಮ ಅವರಿಗೆ ತೀವ್ರ ಜ್ವರ ಕಾಣಿಸಿದೆ. ಜ್ವರದ ಹೊರತಾಗಿಯೂ ಅವರು ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದರಿಂದ ಜ್ವರ ಉಲ್ಬಣಗೊಂಡಿದೆ. ವೈದ್ಯರ ಸಲಹೆ ಮೇರೆಗೆ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.

‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಎದುರು ಅಬ್ಬರಿಸುವ ಕನ್ನಡಿಗ ಸೌರವ್ ಲೋಕೇಶ್

ನಟ ಸೌರವ್ ಲೊಕೇಶ್ ಅವರು ಅಪ್ಪಟ ಕನ್ನಡದ ನಟ. ಪರಭಾಷೆಯಲ್ಲೂ ಸಖತ್ ಬೇಡಿಕೆ ಹೊಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸೌರವ್ ಲೊಕೇಶ್ ಅವರು ಘಟಾನುಘಟಿ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಅವರು ನಟಿಸಿದ್ದಾರೆ. ವಿಲನ್ ಪಾತ್ರ ಮಾಡಿ ಅಬ್ಬರಿಸಿದ್ದಾರೆ.

ತಡವಾಗಿ ಬಂದರೂ ಧೂಳೆಬ್ಬಿಸಿದ ‘ಓಜಿ’ ಟ್ರೇಲರ್: ಪವನ್ ಕಲ್ಯಾಣ್ ಆ್ಯಕ್ಷನ್ ಅಬ್ಬರ

ಕಾರಣಾಂತರಗಳಿಂದ ‘ಓಜಿ’ ಸಿನಿಮಾದ ಟ್ರೇಲರ್ ರಿಲೀಸ್ ತಡವಾಗುತ್ತಲೇ ಇತ್ತು. ಆದರೆ ಈಗ ಬಿಡುಗಡೆ ಆಗಿದೆ. ಟ್ರೇಲರ್ ನೋಡಿದ ಬಳಿಕ ನಟ ಪವನ್ ಕಲ್ಯಾಣ್ ಫ್ಯಾನ್ಸ್ ಬಳಗದಲ್ಲಿ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ. ಸೆಪ್ಟೆಂಬರ್ 25ರಂದು ಅದ್ದೂರಿಯಾಗಿ ‘ಓಜಿ’ ಸಿನಿಮಾ ತೆರೆಕಾಣಲಿದೆ. ಈಗ ಎಲ್ಲೆಡೆ ಟ್ರೇಲರ್ ಧೂಳೆಬ್ಬಿಸುತ್ತಿದೆ.

ಧರ್ಮಸ್ಥಳಕ್ಕೆ ಬರಲಿರುವ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್: ಯಾವಾಗ? ಏಕೆ?

Pawan Kalyan: ಆಂಧ್ರ ಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ತೆಲುಗು ಚಿತ್ರರಂಗದ ಸ್ಟಾರ್ ನಟರೂ ಆಗಿರುವ ಪವನ್ ಕಲ್ಯಾಣ್ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಪರವಾಗಿ ತಮ್ಮ ನಿಲುವು ಪ್ರಕಟಿಸಲೆಂದೇ ಪವನ್ ಕಲ್ಯಾಣ್ ಅವರು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.