‘ಓಜಿ’ ಅಬ್ಬರದ ಗಳಿಕೆ; ಇತ್ತೀಚಿನ ವರ್ಷಗಳಲ್ಲೇ ಅತಿ ದೊಡ್ಡ ಗೆಲುವು ಕಂಡ ಪವನ್ ಕಲ್ಯಾಣ್
OG Movie Collection: ಓಜಿ ಸಿನಿಮಾ ಮೂಲಕ ಪವನ್ ಕಲ್ಯಾಣ್ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಸೆಪ್ಟೆಂಬರ್ 25ರಂದು ರಿಲೀಸ್ ಆದ ಈ ಸಿನಿಮಾ ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸರಿ ಹೊಸ ದಾಖಲೆ ಬರೆದಿದೆ. ಇತ್ತೀಚಿನ ವರ್ಷಗಳಲ್ಲಿ ಪವನ್ ಕಲ್ಯಾಣ್ ಕಂಡ ಅತಿದೊಡ್ಡ ಗೆಲುವು ಇದಾಗಿದೆ.

ಪವನ್ ಕಲ್ಯಾಣ್ (Pawan Kalyan) ಅವರು ‘ಓಜಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಾಣುವ ಸೂಚನೆ ನೀಡಿದ್ದಾರೆ. ಅವರ ನಟನೆಯ ಈ ಚಿತ್ರ ಸೆಪ್ಟೆಂಬರ್ 25ರಂದು ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.
‘ಓಜಿ’ ಸಿನಿಮಾಗೆ ಸೆಪ್ಟೆಂಬರ್ 24ರಂದು ಅದ್ದೂರಿ ಪ್ರೀಮಿಯರ್ ಆಯೋಜನೆ ಮಾಡಲಾಯಿತು. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಈ ಸಿನಿಮಾ ಬುಧವಾರ ಬರೋಬ್ಬರಿ 21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೆಪ್ಟೆಂಬರ್ 25ರಂದು 63.75 ಕೋಟಿ ರೂಪಾಯಿ, ಸೆಪ್ಟೆಂಬರ್ 26ರಂದು 18.75 ಕೋಟಿ ರೂಪಾಯಿ ಹಾಗೂ ಸೆಪ್ಟೆಂಬರ್ 27ರಂದು ಸಿನಿಮಾ 18.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 100 ಕೋಟಿ ರೂಪಾಯಿ ಆಗಿದೆ.
‘ಓಜಿ’ ಸಿನಿಮಾದ ಒಟ್ಟಾರೆ ಕಲೆಕ್ಷನ್ 122 ಕೋಟಿ ರೂಪಾಯಿ ಆಗಿದೆ. ಪವನ್ ಕಲ್ಯಾಣ್ ಚಿತ್ರವೊಂದು ಮೂರೇ ದಿನಕ್ಕೆ ಇಷ್ಟು ಅಬ್ಬರದ ಕಲೆಕ್ಷನ್ ಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನಬಹುದು. ಪವನ್ ಕಲ್ಯಾಣ್ ಅವರ ‘ಅತ್ತಾರೆಂಟಿಕಿ ದಾರೀದಿ’ ಸಿನಿಮಾ ಅತಿ ದೊಡ್ಡ ಗೆಲುವು ಕಂಡಿತ್ತು. ಇದಾದ ಬಳಿಕ ಬಂದ ಹಲವು ಸಿನಿಮಾಗಳು ಸಾಧಾರಣ ಗೆಲುವು ಕಂಡವರು. 2022ರಲ್ಲಿ ಬಂದ ‘ಭೀಮ್ಲಾ ನಾಯಕ್’ ಚಿತ್ರ ಒಂದು ಸಾಧಾರಣ ಯಶಸ್ಸನ್ನು ಪವನ್ಗೆ ನೀಡಿತ್ತು.
ಇದನ್ನೂ ಓದಿ: ಶುಕ್ರವಾರವೂ ಭರ್ಜರಿಯಾಗಿ ಗಳಿಕೆ ಮಾಡಿದ ಪವನ್ ಕಲ್ಯಾಣ್ ‘ಓಜಿ’
ಪವನ್ ಕಲ್ಯಾಣ್ ಅವರು ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬಳಿ ಈಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾತ್ರ ಉಳಿದುಕೊಂಡಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗುವಂತೆ ಮಾಡಿದೆ. ಈ ಸಿನಿಮಾದ ಕೆಲಸಗಳು ಇನ್ನು ಸಾಕಷ್ಟು ಬಾಕಿ ಇದ್ದು, 2026ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








