AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರ ಸಂಬಂಧಗಳ ಬಗ್ಗೆ ಹೇಳುವುದಾದರೆ, ನಟ ಅನೇಕ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಸಲ್ಮಾನ್ ಖಾನ್ ಅವರ ಯಾವುದೇ ನಟಿಯೊಂದಿಗಿನ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ.ಈಗ ಅವರು ಒಂಟಿಯಾಗಿದ್ದಾರೆ. ಅವರಿಗೆ ಮಕ್ಕಳನ್ನು ಹೊಂದುವ ಆಸೆ ಬಂದಿದೆ.

‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 26, 2025 | 7:50 AM

Share

ಬಾಲಿವುಡ್‌ ನಟ ಸಲ್ಮಾನ್ ಖಾನ್ (Salman Khan) ತಮ್ಮ ವೃತ್ತಿಪರ ಜೀವನದ ಕಾರಣದಿಂದಾಗಿ ಮಾತ್ರವಲ್ಲದೆ ತಮ್ಮ ಖಾಸಗಿ ಜೀವನದ ಕಾರಣದಿಂದಾಗಿಯೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 59ನೇ ವಯಸ್ಸಿನಲ್ಲಿ ಅವರು ಇನ್ನೂ ಒಂಟಿಯಾಗಿದ್ದಾರೆ. ಆದರೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ನಟ ತಂದೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಇತ್ತೀಚೆಗೆ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಅವರ ಟಾಕ್ ಶೋ ‘ಟೂ ಮಚ್ ವಿತ್ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ’ದ ಮೊದಲ ಕಂತಿನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಈ ಕಂತಿನಲ್ಲಿ, ತಾವು ಶೀಘ್ರದಲ್ಲೇ ತಂದೆಯಾಗಲು ಬಯಸುತ್ತಿದ್ದದಾಗಿ ಬಹಿರಂಗಪಡಿಸಿದರು.

ತಂದೆಯಾಗುವ ಆಸೆಯನ್ನು ವ್ಯಕ್ತಪಡಿಸಿದ ನಟ ಸಲ್ಮಾನ್ ಖಾನ್, ‘ಮಕ್ಕಳು ಒಂದು ದಿನ ಖಂಡಿತ ಜನಿಸುತ್ತಾರೆ. ಶೀಘ್ರದಲ್ಲೇ ಜನಿಸುತ್ತಾರೆ. ನಾನು ಶೀಘ್ರದಲ್ಲೇ ತಂದೆಯಾಗುತ್ತೇನೆ. ಮುಂದೆ ಏನಾಗುತ್ತದೆ ಎಂದು ನೋಡೋಣ’ ಎಂದು ಹೇಳಿದ್ದಾರೆ.  ಈ ವೇಳೆ ತಮಗೆ ಮಕ್ಕಳನ್ನು ದತ್ತು ಪಡೆದುಕೊಳ್ಳುವುದು ಇಷ್ಟ ಇಲ್ಲ ಎಂದಿದ್ದಾರೆ. ‘ಸಲ್ಮಾನ್ ಖಾನ್​ಗೆ ಈಗಾಗಲೇ 12 ಮಕ್ಕಳು ಇರಬಹುದು’ ಎಂದು ಟ್ವಿಂಕಲ್ ಹಾಸ್ಯ ಮಾಡಿದರು.

‘ಸಂಗಾತಿ ತಮಗಿಂತ ಮುಂದೆ ಹೋದಾಗ, ಹೆಚ್ಚಿನ ಯಶಸ್ಸನ್ನು ಸಾಧಿಸಿದಾಗ, ನಂತರ ವಾದಗಳು ಪ್ರಾರಂಭವಾಗುತ್ತವೆ. ಆಗ ಅಭದ್ರತೆಯ ಭಾವನೆಗಳು ನುಸುಳಲು ಪ್ರಾರಂಭಿಸುತ್ತವೆ. ಆದ್ದರಿಂದ ಇಬ್ಬರೂ ಕುಳಿತು ಅದರ ಬಗ್ಗೆ ಯೋಚಿಸಬೇಕು, ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಮುಂದುವರಿಯಬೇಕು’ ಸಲ್ಮಾನ್ ಖಾನ್ ಕೂಡ ಹೇಳಿದರು.

ಇದನ್ನೂ ಓದಿ
Image
ಬಿಗ್ ಬಾಸ್​ಗೆ ಶಾಕ್; ಬಿತ್ತು ಎರಡು ಕೋಟಿ ರೂಪಾಯಿ ಕೇಸ್
Image
‘ಓಜಿ’ ಅಬ್ಬರದ ಕಲೆಕ್ಷನ್; ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ
Image
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಫೈನಲ್ ಆದ ಸ್ಪರ್ಧಿಗಳು ಇವರೇ ನೋಡಿ
Image
ಮುತ್ತುರಾಜ್ ಹೆಸರು ಬದಲಾಗಿದ್ದು ಅಣ್ಣಾವ್ರಿಗೇ ಗೊತ್ತಿರಲಿಲ್ಲ

ಸಲ್ಮಾನ್ ಖಾನ್ ಅವರ ಸಂಬಂಧಗಳ ಬಗ್ಗೆ ಹೇಳುವುದಾದರೆ, ನಟ ಅನೇಕ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಸಲ್ಮಾನ್ ಖಾನ್ ಅವರ ಯಾವುದೇ ನಟಿಯೊಂದಿಗಿನ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ. ಸಂಗೀತಾ ಬಿಜಲಾನಿ, ಸೋಮಿ ಅಲಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ಅವರಂತಹ ನಟಿಯರೊಂದಿಗೆ ಸಲ್ಮಾನ್ ಖಾನ್ ಅವರ ಹೆಸರು ಚರ್ಚಿಸಲ್ಪಟ್ಟಿತು.

ಇದನ್ನೂ ಓದಿ: ‘ವೈರಿಗೂ ಆ ನೋವು ಬೇಡ’; ತಮಗೆ ಬಂದಿದ್ದ ಅಪರೂಪದ ಕಾಯಿಲೆ ಬಗ್ಗೆ ಹೇಳಿದ ಸಲ್ಮಾನ್ ಖಾನ್

ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಅವರ ಪ್ರೇಮ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ ಎಂಬುದು ಉಲ್ಲೇಖನೀಯ. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ ಅವರು ಬೇರೆಯಾಗಲು ನಿರ್ಧರಿಸಿದರು. ಆದರೆ ಅವರ ಸಂಬಂಧವು ತುಂಬಾ ಕೆಟ್ಟದಾಗಿ ಕೊನೆಗೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.