AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತುರಾಜ್ ಹೆಸರು ರಾಜ್​ಕುಮಾರ್ ಆಗಿ ಬದಲಾಗಿದ್ದು ಅಣ್ಣಾವ್ರಿಗೇ ಗೊತ್ತಿರಲಿಲ್ಲ

ರಾಜ್ ಕುಮಾರ್ ಅವರ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. 'ಬೇಡರ ಕಣ್ಣಪ್ಪ' ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕರು ಅವರ ಹೆಸರನ್ನು ರಾಜ್ ಕುಮಾರ್ ಎಂದು ಬದಲಾಯಿಸಿದ್ದರು. ರಾಜ್ ಕುಮಾರ್ ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಈ ಬದಲಾವಣೆಯ ಕುರಿತು ಅವರು ನೀಡಿದ ಸಂದರ್ಶನದ ಆಡಿಯೋ ಈಗ ವೈರಲ್ ಆಗಿದೆ.

ಮುತ್ತುರಾಜ್ ಹೆಸರು ರಾಜ್​ಕುಮಾರ್ ಆಗಿ ಬದಲಾಗಿದ್ದು ಅಣ್ಣಾವ್ರಿಗೇ ಗೊತ್ತಿರಲಿಲ್ಲ
ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Sep 25, 2025 | 7:53 AM

Share

ರಾಜ್​ಕುಮಾರ್ (Rajkumar) ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿಡಿದವರು. ಅವರು ನಮ್ಮನ್ನು ಬಿಟ್ಟು ಹಲವು ವರ್ಷಗಳೇ ಕಳೆದಿದ್ದರೂ ಈಗಲೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ರಾಜ್​ಕುಮಾರ್ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಆ ಬಳಿಕ ಅವರ ಹೆಸರನ್ನು ರಾಜ್​ಕುಮಾರ್ ಎಂದು ಬದಲಿಸಲಾಯಿತು. ಈ ಬದಲಾವಣೆ ಬಗ್ಗೆ ರಾಜ್​ಕುಮಾರ್ ಅವರಿಗೇ ತಿಳಿದಿರಲಿಲ್ಲ.

ರಾಜ್​ಕುಮಾರ್ ನಾಟಕಗಳನ್ನು ಮಾಡಿಕೊಂಡಿದ್ದವರು. ಗುಬ್ಬಿ ವೀರಣ್ಣ ಕಂಪನಿಯಲ್ಲಿ ಅವರಿದ್ದರು. 1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಎಚ್​ಎಲ್​ಎನ್​ ಸಿಂಹ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದ ಡೈರೆಕ್ಟರ್ ಸಿಂಹ ಅವರೇ ತಂಡದ ಜೊತೆ ಚರ್ಚಿಸಿ ಮುತ್ತುರಾಜ್ ಎಂಬ ಹೆಸರನ್ನು  ರಾಜ್​ಕುಮಾರ್ ಆಗಿ ಬದಲಿಸಿದ್ದರು. ಆ ಬಗ್ಗೆ ರಾಜ್​ಕುಮಾರ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅದರ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋನ ಅನೇಕರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ
Image
ರಿಂಗ್ ಕೊಡಿಸಲು ರಮ್ಯಾ ಜೊತೆ ಜ್ಯುವೆಲರಿ ಶಾಪ್​ಗೆ ಹೋದ ವಿನಯ್;ಇದೆ ಟ್ವಿಸ್ಟ್
Image
‘ಬಿಗ್ ಬಾಸ್ 12’ರ ನಾಲ್ಕು ಸ್ಪರ್ಧಿಗಳ ಹೆಸರು ಶನಿವಾರವೇ ರಿವೀಲ್?
Image
ಪುನೀತ್ ರಾಜ್​ಕುಮಾರ್ ಯಾವಾಗಲೂ ಸರಳ ಉಡುಗೆ ಧರಿಸುತ್ತಿದ್ದಿದ್ದೇಕೆ?
Image
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ರಾಜ್​ಕುಮಾರ್ ಆಡಿಯೋ

‘ಬೇಡರ ಕಣ್ಣಪ್ಪ ಸಿನಿಮಾಗೆ ಹೋದಾಗ ಹೆಸರು ಬದಲಾಗಿತ್ತು. ಒಂದು ತಿಂಗಳು ಶೂಟ್ ಆಗಿತ್ತು. ನಾನು ಪೇಪರ್​ನಲ್ಲಿ ರಾಜ್​ಕುಮಾರ್ ಹೆಸರು ನೋಡಿ ಗಾಬರಿ ಆದೆ. ನನ್ನ ಹೆಸರು ಮುತ್ತುರಾಜು. ಬೇಡರಕಣ್ಣಪ್ಪ ಪಾತ್ರ ಕೊಟ್ಟಿದ್ದಾರೆ. ಆದರೆ, ಇಲ್ಲಿ ಯಾರೋ ರಾಜ್​ಕುಮಾರ್ ಅನ್ನೊರನ್ನು ಸೇರಿಸಿಕೊಂಡಿದ್ದಾರೆ ಎಂದುಕೊಂಡೆ. ನನ್ನ ನಟನೆ ಚೆನ್ನಾಗಿಲ್ಲ ಅಂತ ಬೇರೆ ಯಾರನ್ನೋ ಹಾಕಿಕೊಂಡಿದ್ದಾರೆ. ಕೊಟ್ಟರು ಕೈ ಅಂದುಕೊಂಡೆ’ ಎಂದಿದ್ದರು ರಾಜ್​ಕುಮಾರ್.

ಇದನ್ನೂ ಓದಿ: ಎನ್​ಟಿಆರ್​ಗೆ 20 ಸಾವಿರ, ರಾಜ್​ಕುಮಾರ್​ಗೆ 2 ಸಾವಿರ ನಂತರ ಆಗಿದ್ದೇನು?

‘ಯಾರು ರಾಜ್​ಕುಮಾರ್ ಎಂದು ನಾನು ಸಿಂಹ ಅವರನ್ನು ಕೇಳಿದೆ. ಮುತ್ತು ರಾಜ್ ಹೆಸರನ್ನು ತೆಗೆದು, ನಾವೇ ರಾಜ್​ಕುಮಾರ್ ಅಂತ ಹೆಸರು ಬದಲಾಯಿಸಿದ್ದೇವೆ. ನನಗೆ ನಾಚಿಕೆ ಆಯ್ತು. ನಾನು ಮಾಡ್ತಿರೋದು ಮೊದಲ ಸಿನಿಮಾ ಇದು. ಒಳ್ಳೆಯ ಹೆಸರು ಬಂದರೆ ರಾಜ್​ಕುಮಾರ್ ಅಂತ ಇಟ್ಟಿದ್ದಕ್ಕೆ ತೊಂದರೆ ಇಲ್ಲ, ಆದರೆ ಸಿನಿಮಾ ಚೆನ್ನಾಗಿ ಆಗಿಲ್ಲ ಎಂದರೆ, ಈ ಕರ್ಮಕ್ಕೆ ಇವನು ರಾಜ್​ಕುಮಾರ್ ಅಂತ ಹೆಸರು ಇಟ್ಕೊಂಡ್ನಾ ಅಂತ ಕೇಳೋ ತರ ಆಗಬಹುದು’ ಎಂದು ರಾಜ್​ಕುಮಾರ್ ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Thu, 25 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ