‘ಬಿಗ್ ಬಾಸ್ ಕನ್ನಡ 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೀಘ್ರದಲ್ಲೇ ಆರಂಭವಾಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಪಟ್ಟಿ ಹರಿದಾಡುತ್ತಿದೆ. ಅನನ್ಯಾ ಅಮರ್, ಹುಲಿ ಕಾರ್ತಿಕ್, ಅದ್ವಿತಿ ಶೆಟ್ಟಿ, ಸಮರ್ಜಿತ್ ಲಂಕೇಶ್, ಶ್ವೇತಾ ಪ್ರಸಾದ್ ಮುಂತಾದವರ ಹೆಸರಿದೆ. ಆದಾಗ್ಯೂ, ಅಂತಿಮ ಪಟ್ಟಿ ಸೆಪ್ಟೆಂಬರ್ 28ರಂದು ಮಾತ್ರ ಬಹಿರಂಗಗೊಳ್ಳಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss Kannada 12) ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ವಾರಾಂತ್ಯದಲ್ಲಿ ಶೋ ಆರಂಭ ಆಗಲಿದೆ. ಅದಕ್ಕೂ ಮೊದಲು ಸ್ಪರ್ಧಿಗಳ ಪಟ್ಟಿ ಫೈನಲ್ ಆಗುತ್ತಿದೆ. ಯಾರು ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪಟ್ಟಿ ಒಂದು ಹರಿದಾಡಿದೆ. ಅಲ್ಲಿ ಯಾರ ಹೆಸರು ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಅನನ್ಯಾ ಅಮರ್ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ. ಅವರು ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿದ್ದಾರೆ. ಹಾಸ್ಯ ಶೋಗಳ ಮೂಲಕ ಗಮನ ಸೆಳೆದ ಹುಲಿ ಕಾರ್ತಿಕ್ ಹೆಸರು ಕೂಡ ಲಿಸ್ಟ್ನಲ್ಲಿ ಇದೆ. ಅದ್ವಿತಿ ಶೆಟ್ಟಿ ಅವರಿಗೆ ಈ ಮೊದಲಿನಿಂದಲೂ ಶೋಗೆ ಬರೋಕೆ ಆಫರ್ ಬರುತ್ತಲೇ ಇದೆ. ಆದರೆ, ಇದನ್ನು ಅವರು ನಿರಾಕರಿಸುತ್ತಾ ಬರುತ್ತಿದ್ದಾರೆ. ಈ ಬಾರಿ ಅವರು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
‘ಗೌರಿ’ ಸಿನಿಮಾ ಮೂಲಕ ಫೇಮಸ್ ಆದ ಸಮರ್ಜಿತ್ ಲಂಕೇಶ್ ಹೆಸರು ಕೂಡ ಪಟ್ಟಿಯಲ್ಲಿ ಇದೆ. ಶ್ವೇತಾ ಪ್ರಸಾದ್ ಅವರೇ ತಾವೇ ಬಿಗ್ ಬಾಸ್ ಮನೆಗೆ ಬರೋದಾಗಿ ಹೇಳಿದ್ದಾರೆ. ಶ್ರೇಯಸ್ ಮಂಜು, ಮೌನ ಗುಡ್ಡೇಮನೆ, ಕಾಕ್ರೋಚ್ ಸುಧಿ, ಕಾವ್ಯ ಶೈವ, ಗಿಲ್ಲಿ ನಟ, ಕರಣ್ ಆರ್ಯನ್ ಹೆಸರು ಪಟ್ಟಿಯಲ್ಲಿ ಸೇರಿದೆ. ಸ್ಪಂದನಾ ಸೋಮಣ್ಣ, ದಿವ್ಯಾ ವಸಂತ್, ತೇಜಸ್ ಗೌಡ ಕೂಡ ದೊಡ್ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ? ಇಲ್ಲಿದೆ ಪಟ್ಟಿ
ಪ್ರತಿ ವರ್ಷ ಬಿಗ್ ಬಾಸ್ ಆರಂಭಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಇದರಲ್ಲಿ ಕೆಲವು ಹೆಸರು ಅಸಲಿ ಆದರೆ, ಇನ್ನೂ ಕೆಲವು ಫೇಕ್ ಆಗಿರುತ್ತವೆ. ಅಂತಿಮ ಪಟ್ಟಿ ತಿಳಿದುಕೊಳ್ಳಲು ಸೆಪ್ಟೆಂಬರ್ 28ವರೆಗೆ ಕಾಯಲೇಬೇಕು. ಕಿಚ್ಚ ಸುದೀಪ್ ಅವರು ಶೋ ನಡೆಸಿಕೊಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:48 am, Mon, 22 September 25








