ವಿಜ್ಞಾನಕ್ಕೇ ಸವಾಲು ಧಾರಾವಾಹಿಯ ಈ ದೃಶ್ಯ, ನೋಡಿದರೆ ನಗದೇ ಇರಲಾರಿರಿ
Indian Tv serial: ಇಲ್ಲೊಂದು ಹಿಂದಿ ಧಾರಾವಾಹಿಯ ದೃಶ್ಯವಿದೆ, ಈ ದೃಶ್ಯ ವಿಜ್ಞಾನ, ತಂತ್ರಜ್ಞಾನ ಮಾತ್ರವೇ ಅಲ್ಲ ಆಧ್ಯಾತ್ಮ, ಮಾನವ ಇತಿಹಾಸ, ಪ್ರೇಕ್ಷಕನ ಮಾನಸಿಕ ಸ್ಥಿಮಿತ ಎಲ್ಲದಕ್ಕೂ ಸವಾಲಾಗಿದೆ. ಈ ದೃಶ್ಯ, ಅತಿಯಾದ ಕ್ರಿಯಾಶೀಲತೆಯ ಫಲವೋ ಅಥವಾ ಅತಿಯಾದ ಮೂರ್ಖತೆಯ ಫಲವೋ ನೋಡಿದವರೇ ಹೇಳಬೇಕಿದೆ.

ಒಂದು ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಸಿನಿಮಾಗಳಿಗಿಂತಲೂ ಧಾರಾವಾಹಿಗಳು ಹೆಚ್ಚು ಗಳಿಕೆ ಮಾಡುತ್ತವೆ. ಚಿತ್ರರಂಗಕ್ಕಿಂತಲೂ ಬಲು ದೊಡ್ಡ ಮಾರುಕಟ್ಟೆಯಂತೆ ಭಾರತದ ಟಿವಿ ಮಾರುಕಟ್ಟೆ. ಇಷ್ಟು ದೊಡ್ಡ ಮಾರುಕಟ್ಟೆ ಇದ್ದರೂ ಸಹ ಭಾರತದ ಧಾರಾವಾಹಿಗಳು ತಮಗೆ ತೋಚಿದ್ದನ್ನು ಪ್ರೇಕ್ಷಕರ ಮುಂದಿಡುತ್ತಾ ಬಂದಿವೆ. ಭಾರತದಷ್ಟು ಕಳಪೆ ಗುಣಮಟ್ಟದ ಧಾರಾವಾಹಿಗಳನ್ನು ನಿರ್ಮಿಸುವ ಮತ್ತೊಂದು ದೇಶ ಇಲ್ಲವೇನೋ ಎಂಬ ಅನುಮಾನ ಮೂಡುತ್ತದೆ ಕೆಲ ಧಾರಾವಾಹಿಗಳನ್ನು ನೋಡಿದರೆ. ಮನಸ್ಸಿಗೆ ತೋಚಿದಂತೆ ಧಾರಾವಾಹಿಗಳ ಕತೆಗಳನ್ನು ಬರೆಯಲಾಗುತ್ತದೆ, ದೃಶ್ಯಗಳನ್ನು ಸಂಯೋಜಿಸಲಾಗುತ್ತದೆ.
ಇಲ್ಲೊಂದು ಹಿಂದಿ ಧಾರಾವಾಹಿಯ ದೃಶ್ಯವಿದೆ, ಈ ದೃಶ್ಯ ವಿಜ್ಞಾನ, ತಂತ್ರಜ್ಞಾನ ಮಾತ್ರವೇ ಅಲ್ಲ ಆಧ್ಯಾತ್ಮ, ಮಾನವ ಇತಿಹಾಸ, ಪ್ರೇಕ್ಷಕನ ಮಾನಸಿಕ ಸ್ಥಿಮಿತ ಎಲ್ಲದಕ್ಕೂ ಸವಾಲಾಗಿದೆ. ಈ ದೃಶ್ಯ, ಅತಿಯಾದ ಕ್ರಿಯಾಶೀಲತೆಯ ಫಲವೋ ಅಥವಾ ಅತಿಯಾದ ಮೂರ್ಖತೆಯ ಫಲವೋ ನೋಡಿದವರೇ ಹೇಳಬೇಕಿದೆ.
ಇವತ್ತಿನ ಧಾರಾವಾಹಿಗಳ ಕ್ರಿಯೇಟಿವಿಟಿ, ವಿಜ್ಞಾನಕ್ಕೆ ಒಂದು ದೊಡ್ಡ ಸವಾಲಾಗಿದೆ 🥱 pic.twitter.com/NFmNMOCh3A
— Goudrusarkar – ಗೌಡ್ರುಸರ್ಕಾರ್ (@Gs_0107) September 18, 2025
ಹಿಂದಿಯಲ್ಲಿ ‘ನಾಗಿನ್’ ಧಾರಾವಾಹಿಯ ಹಲವು ಸೀಕ್ವೆಲ್ಗಳು ಬಂದಿವೆ. ಏಕ್ತಾ ಕಪೂರ್ ನಿರ್ಮಿಸುವ ಈ ಧಾರಾವಾಹಿ ಮಾನವ ರೂಪ ಧರಿಸುವ ಹಾವುಗಳ ಬಗೆಗಿನ ಕತೆ ಒಳಗೊಂಡಿರುತ್ತವೆ. ಕನ್ನಡದಲ್ಲೂ ಕೆಲವು ಹಾವಿನ ಧಾರಾವಾಹಿಗಳು ಬಂದಿವೆ. ಯಶಸ್ವಿಯೂ ಆಗಿವೆ. ಈಗ ಇಲ್ಲಿ ವಿವರಿಸುತ್ತಿರುವುದು ‘ನಾಗಿನ್ 5’ ಧಾರಾವಾಹಿಯ ದೃಶ್ಯ. ಇಲ್ಲಿ ನಾಗಿನ್ (ನಾಗಿಣಿ) ಅನ್ನು ಮೊದಲು ಬೆಂಕಿಯಿಂದ ಕೊಲ್ಲುವ ಪ್ರಯತ್ನವನ್ನು ವಿಲನ್ ಮಾಡುತ್ತಾಳೆ. ಅದೂ ಬಾಯಿಂದಲೇ ಬೆಂಕಿ ಉಗುಳುತ್ತಾಳೆ ವಿಲನ್. ಗ್ರಾಫಿಕ್ಸ್ ಅದೆಷ್ಟು ಕಳಪೆಯಾಗಿದೆಯಂತೆ ಬಾಯಿಂದ ಉಗುಳಿದ ಬೆಂಕಿ ನಾಗಿಣಿಯನ್ನು ತಲುಪುವುದೇ ಇಲ್ಲ.
ಬಳಿಕ ವಿಷದ ಹೊಗೆಯನ್ನು ವಿಲನ್ ಉಗುಳುತ್ತಾಳೆ. ಕೂಡಲೇ ನಾಗಿನಿ ಹಾವಿನ ರೂಪ ಧರಿಸುವುದು ಮಾತ್ರವಲ್ಲದೆ ಹೊಗೆಯಿಂದಾಗಿ ಗಾತ್ರದಲ್ಲಿಯೂ ಚಿಕ್ಕದಾಗಿ ಹೋಗಿ ನೇರವಾಗಿ ಎದುರಾಳಿ ಪಾತ್ರದ ಬಾಯಿ ಸೇರಿಕೊಳ್ಳುತ್ತದೆ. ಆಗ ವಿಲನ್ ಅದ್ಭುತವಾದ ಪ್ಲ್ಯಾನ್ ಮಾಡಿ, ತನ್ನ ಬಾಯಿಯಲ್ಲಿ ಸೇರಿಕೊಂಡಿರುವ ನಾಗಿಣಿಯನ್ನು ಮೊಬೈಲ್ಗೆ ಟ್ರಾನ್ಸ್ಫರ್ ಮಾಡುತ್ತದೆ. ಅದೂ ಮೊಬೈಲ್ನ ಚಾರ್ಜಿಂಗ್ ಪೋರ್ಟ್ ಇರುತ್ತದೆಯಲ್ಲ, ಅಲ್ಲಿ ಊದುವ ಮೂಲಕ! ಅದರ ಮುಂದಿನ ದೃಶ್ಯ ಇನ್ನೂ ಭಯಾನಕ, ವಿಲನ್ ಮಾಡಿದ ಪ್ಲ್ಯಾನ್ನಂತೆ, ನಾಗಿಣಿ ಮೊಬೈಲ್ ಒಳಗೆ ಸೇರಿಕೊಳ್ಳುತ್ತಾಳೆ. ಮೊಬೈಲ್ನ ಸ್ಕ್ರೀನಿನ ಮೇಲೆ ನಾಗಿಣಿ ಬಂಧಿಯಾಗಿರುವಂತೆ ಕಾಣಿಸುತ್ತಾಳೆ. ಕೂಡಲೇ ವಿಲನ್ ಮೊಬೈಲ್ ಅನ್ನು ಚಾರ್ಜಿಂಗ್ಗೆ ಹಾಕುತ್ತಾಳೆ, ಆಗ ಮೊಬೈಲ್ ಒಳಗಿರುವ ನಾಗಿಣಿಗೆ ಶಾಕ್ ಹೊಡೆಯುತ್ತದೆ!
‘ನಾಗಿನ್ 5’ ಧಾರಾವಾಹಿಯ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಇಟ್ಟುಕೊಂಡು ಹಲವರು ಟ್ರೋಲ್ ಮಾಡಿದ್ದಾರೆ. ‘ನಾಗಿನ್ 5’ 2020 ರಿಂದ ಸುಮಾರು ಎರಡು ವರ್ಷಗಳ ಕಾಲ ಪ್ರದರ್ಶನವಾಗಿತ್ತು. ಈಗ ‘ನಾಗಿನ್ 6’ ಪ್ರದರ್ಶನಗೊಳ್ಳುತ್ತಿದೆ. ‘ನಾಗಿನ್’ ಸರಣಿ ಹಿಂದಿಯಲ್ಲಿ 2015ರಿಂದಲೂ ಪ್ರದರ್ಶನವಾಗುತ್ತಾ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




