ಪುನೀತ್ ರಾಜ್ಕುಮಾರ್ ಯಾವಾಗಲೂ ಸರಳ ಉಡುಗೆ ಧರಿಸುತ್ತಿದ್ದಿದ್ದೇಕೆ? ಇದಕ್ಕೆ ಕಾರಣ ಆ ಘಟನೆ
Puneeth Rajkumar: ಪುನೀತ್ ರಾಜ್ ಕುಮಾರ್ ಅವರು ಯಾವಾಗಲೂ ಸರಳ ಉಡುಪುಗಳನ್ನು ಧರಿಸುತ್ತಿದ್ದರು. ಇದಕ್ಕೆ ಕಾರಣ ಅವರ ಅಭಿಮಾನಿಗಳ ಮೇಲಿನ ಪ್ರೀತಿ ಮತ್ತು ಅವರ ಮೇಲೆ ಉಂಟಾಗಬಹುದಾದ ಒತ್ತಡವನ್ನು ತಪ್ಪಿಸುವ ಉದ್ದೇಶ. ಅವರ ಸರಳತೆಯು ಅನೇಕರಿಗೆ ಸ್ಪೂರ್ತಿಯಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಮ್ಮನ್ನು ಅಗಲಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿವೆ. ಅವರು ಇಲ್ಲ ಎಂಬ ನೋವು ಸದ್ಯಕ್ಕೆ ಮರೆ ಆಗುವಂಥದ್ದಲ್ಲ. ಅವರನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಾ ಇದ್ದಾರೆ. ಅವರು ನಿಧನ ಹೊಂದಿದ್ದು 2021ರ ಅಕ್ಟೋಬರ್ 28ರಂದು. ಆ ದಿನ ಸಮೀಪಿಸುತ್ತಿದೆ. ಈ ವೇಳೆ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಈಗ ಪುನೀತ್ ರಾಜ್ಕುಮಾರ್ ಅವರು ಸರಳ ಉಡುಗೆ ಧರಿಸುತ್ತಿದ್ದುದು ಏಕೆ ಎಂಬ ವಿಚಾರದ ಬಗ್ಗೆ ನೋಡೋಣ.
ಪುನೀತ್ ರಾಜ್ಕುಮಾರ್ ಅವರು ಎಲ್ಲಿಗೇ ತೆರಳಿದರೂ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅವರು ಜೀನ್ಸ್ ಧರಿಸಿ ಒಂದು, ಶರ್ಟ್ ಹಾಕುತ್ತಿದ್ದರು ಅಷ್ಟೇ. ಯಾರದ್ದೇ ಮದುವೆಗೆ ಹೋಗಲಿ, ಯಾವುದೇ ಟ್ರೇಲರ್ ಲಾಂಚ್ ಕಾರ್ಯಕ್ರಮ ಇರಲಿ ಅಥವಾ ತಮ್ಮದೇ ಸಿನಿಮಾದ ಈವೆಂಟ್ ಇದ್ದರೂ ಪುನೀತ್ ಕಾಣಿಸಿಕೊಳ್ಳುತ್ತಿದ್ದುದು ಇದೇ ರೀತಿಯಲ್ಲಿ. ಇದಕ್ಕೆ ಒಂದು ಕಾರಣವೂ ಇದೆ.
ಸೆಲೆಬ್ರಿಟಿಗಳು ಏನೇ ಮಾಡಿದರೂ ಅದನ್ನು ಫ್ಯಾನ್ಸ್ ಫಾಲೋ ಮಾಡುತ್ತಾರೆ. ದುಬಾರಿ ಶರ್ಟ್ ಹಾಕಿಕೊಂಡರೆ ಫ್ಯಾನ್ಸ್ ಕೂಡ ಅದೇ ರೀತಿಯ ಶರ್ಟ್ ಧರಿಸಬೇಕು ಎಂದುಕೊಳ್ಳುತ್ತಾರೆ. ಇದೇ ಭಯ ಪುನೀತ್ ಅವರಿಗೂ ಇತ್ತು. ಈ ಬಗ್ಗೆ ಚಿತ್ರರಂಗದವರು ವಿವರಿಸಿದ್ದರು.
ಪುನೀತ್ ಸರಳತೆ ಹೇಳುವ ವಿಡಿಯೋ
View this post on Instagram
ಪುನೀತ್ ಯಾವುದೋ ಹಳ್ಳಿಗೆ ಹೋಗಿದ್ದರಂತೆ. ಅಲ್ಲಿ ಅವರ ಫ್ಯಾನ್ಸ್ ಇವರು ಹಾಕುತ್ತಿದ್ದ ಬ್ರ್ಯಾಂಡ್ನ ಬಟ್ಟೆಗಳನ್ನೇ ಹಾಕಿದ್ದರಂತೆ. ಇಷ್ಟು ದುಬಾರಿ ಬಟ್ಟೆ ಹಾಕಿ ತಪ್ಪು ಸಂದೇಶ ಕೊಡುತ್ತಿದ್ದೇನೆ ಎಂದು ಅವರಿಗೆ ಅನಿಸಿದೆ. ‘ಅವನು ಎಷ್ಟು ದುಡಿತಾನೇನೋ ಏನೋ. ನಾನು ಹಾಕಿದೀನಿ ಎಂಬ ಕಾರಣಕ್ಕೆ ಅವನು ತೆಗೆದುಕೊಂಡು ಹಾಕಿಕೊಂಡಿದ್ದಾನೆ. ನಾನು ತಪ್ಪಾದ ಸಂದೇಶ ಕೊಡ್ತಿದೀನಿ’ ಎಂದು ಪುನೀತ್ಗೆ ಅನಿಸಿತು. ಅಂದಿನಿಂದ ಅವರು ಸರಳ ಉಡುಗೆಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಹಣ ಇದೆ ಎಂಬ ಕಾರಣಕ್ಕೆ ದುಬಾರಿ ಬ್ರ್ಯಾಂಡೆಡ್ ಬಟ್ಟೆ ಹಾಕಿ ಮಿಂಚುವ ಅವಕಾಶ ಅವರಿಗೆ ಇತ್ತು. ಆದರೆ, ಫ್ಯಾನ್ಸ್ಗಳಿಗೋಸ್ಕರ ಆ ಅವಕಾಶವನ್ನು ಪುನೀತ್ ತೊರೆದರು. ಅವರು ಇಷ್ಟೇ ಅಲ್ಲದೆ, ಹಲವು ವಿಚಾರಗಳಲ್ಲಿ ಸರಳತೆಯನ್ನು ಕಾಪಾಡಿಕೊಂಡು ಬರುತ್ತಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಮಾದರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







