‘ನೆಮ್ಮದಿಯಾಗಿ ಊಟ ಮಾಡಿ’ ಹೋಟೆಲ್ ಆರಂಭಿಸಿದ ದರ್ಶನ್ ಅಳಿಯ ಚಂದು; ಎಲ್ಲಿ?
ದರ್ಶನ್ ಅವರ ಸೋದರಳಿಯಾದ ಚಂದನ್ ಕುಮಾರ್ ಮೈಸೂರಿನ ದಸರಾ ಆಹಾರ ಮೇಳದಲ್ಲಿ "ನೆಮ್ಮದಿಯಾಗಿ ಊಟ ಮಾಡಿ" ಎಂಬ ನಾನ್ ವೆಜ್ ಹೋಟೆಲ್ ಆರಂಭಿಸಿದ್ದಾರೆ. ಇದು ತಾತ್ಕಾಲಿಕ ಸ್ಟಾಲ್. ಅವರ ಈ ಹೋಟೆಲ್ ದರ್ಶನ್ ಅವರ 'ಡೆವಿಲ್' ಸಿನಿಮಾ ಹಾಡಿನ ಸಾಲಿನಿಂದ ಪ್ರೇರಿತವಾಗಿದೆ ಎನ್ನಲಾಗುತ್ತಿದೆ.

ನಟ ದರ್ಶನ್ (Darshan) ಅವರಿಗೆ ಸೋದರಳಿಯ ಚಂದನ್ ಕುಮಾರ್ ಎಂದರೆ ಅಚ್ಚುಮೆಚ್ಚು. ಇವರು ಸದಾ ಜೊತೆಯಲ್ಲೇ ಇರುತ್ತಿದ್ದರು. ಈಗ ಚಂದು ಅವರು ಮೈಸೂರಿನಲ್ಲಿ ನಾನ್ವೆಜ್ ಹೋಟೆಲ್ ಆರಂಭಿಸಿದ್ದಾರೆ. ಈ ಹೋಟೆಲ್ ಹೆಸರು ‘ನೆಮ್ಮದಿಯಾಗಿ ಊಟ ಮಾಡಿ’ ಎಂದು. ಹಾಗಂತ ಇದು ಪರ್ಮನೆಂಟ್ ಹೋಟೆಲ್ ಅಲ್ಲ. ಮೈಸೂರಿನ ದಸರಾ ಅಂಗವಾಗಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಚಂದು ಈ ಸ್ಟಾಲ್ ಹಾಕಿದ್ದಾರೆ. ಇದು ಪಕ್ಕಾ ನಾನ್ವೆಜ್ ಹೋಟೆಲ್.
ದರ್ಶನ್ ಮೈಸೂರಿನವರು. ಅವರಿಗೆ ಆ ಊರಿನ ಮೇಲೆ ಸಾಕಷ್ಟು ಪ್ರೀತಿ ಇದೆ. ದಸರಾ ಸಮಯದಲ್ಲಿ ಮಿಸ್ ಮಾಡದೇ ದರ್ಶನ್ ಅವರು ಮೈಸೂರಿಗೆ ಹೋಗುತ್ತಿದ್ದರು. ಆದರೆ, ಈಗ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ವಿಚಾರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಹಿಗಿರುವಾಗಲೇ ಚಂದು ಫುಡ್ಸ್ಟಾಲ್ ಆರಂಭಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸ್ವತಃ ಚಂದು ಅವರೇ ಫುಡ್ ಸ್ಟಾಲ್ನಲ್ಲಿ ನಿಂತು ಗ್ರಾಹಕರನ್ನು ಕರೆಯುತ್ತಿರುವುದು ಇದೆ. ಚಂದು ಅವರನ್ನು ಗುರುತಿಸಿ ಅನೇಕ ದರ್ಶನ್ ಫ್ಯಾನ್ಸ್ ಅವರನ್ನು ಮಾತನಾಡಿಸಿ ಮುಂದೆ ತೆರಳಿದ್ದಾರೆ. ಇನ್ನೂ ಕೆಲವರು ನೆಮ್ಮದಿಯಾಗಿ ಊಟ ಮಾಡಿ ಹೋಗಿದ್ದಾರೆ.
View this post on Instagram
ದರ್ಶನ್ ಅವರು ಪತ್ನಿಗೆ ಬೈದ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದು ಡೈಲಾಗ್ ಹೇಳಿದ್ದರು. ಇದೇ ಸಾಲುಗಳು ‘ಡೆವಿಲ್’ ಸಿನಿಮಾ ಹಾಡಿನ ಟೈಟಲ್ ಆಗಿತ್ತು. ಹೀಗಾಗಿ, ಫುಡ್ ಸ್ಟಾಲ್ಗೆ ಚಂದು ಅವರು ‘ನೆಮ್ಮದಿಯಾಗಿ ಊಟ ಮಾಡಿ’ ಎಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದರ್ಶನ್ಗೆ ನಿಜಕ್ಕೂ ಬೆನ್ನು ನೋವು ಇದೆಯಾ? ವೈರಲ್ ಆದ ವಿಡಿಯೋದಲ್ಲಿದೆ ಅಸಲಿಯತ್ತು
ಚಂದು ಅವರು ಇಂಡಸ್ಟ್ರಿಗೆ ಕಾಲಿಡಲು ರೆಡಿ ಆಗುತ್ತಿದ್ದಾರೆ. ಈ ಸಿನಿಮಾಗೆ ದಿನಕರ್ ತುಗದೀಪ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದರ್ಶನ್ ವಿಲನ್ ಎನ್ನಲಾಗಿತ್ತು. ಆದರೆ, ದರ್ಶನ್ ಜೈಲು ಸೇರಿರುವುದರಿಂದ ಸಿನಿಮಾ ಮುಂದಕ್ಕೆ ಹೋಯಿತೇ ಎನ್ನುವ ಪ್ರಶ್ನೆ ಮೂಡಿದೆ. ಇನ್ನು, ‘ಡೆವಿಲ್’ ಸಿನಿಮಾದಲ್ಲಿ ಚಂದು ನಟಿಸುತ್ತಿದ್ದರು. ಆದರೆ, ದರ್ಶನ್ ಅವರೇ ಚಂದುನ ಹೊರಕ್ಕೆ ಇಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:43 am, Wed, 24 September 25








