AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರಾಷ್ಟ್ರೀಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಹೊಂಬಾಳೆ, ಹೊಸ ಸಾಹಸ

Hombale Films distribution: ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡ ಹೊಂಬಾಳೆ ಫಿಲಮ್ಸ್ ಆ ನಂತರವೂ ಸಹ ‘ಸಲಾರ್’, ‘ಕಾಂತಾರ’, ‘ಕಾಂತಾರ ಚಾಪ್ಟರ್ 1’ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದು, ಪ್ರಭಾಸ್ ಜೊತೆಗೆ ಐದು ಸಿನಿಮಾಗಳ ಮುಂಗಡ ಒಪ್ಪಂದವನ್ನು ಸಹ ಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಹೊಂಬಾಳೆ ಇದೀಗ ಸಾಗರದಾಟಿ ಹೊರ ದೇಶಕ್ಕೆ ತನ್ನ ಉದ್ಯಮ ವಿಸ್ತರಿಸಲು ಮುಂದಾಗಿದೆ

ಅಂತರಾಷ್ಟ್ರೀಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಹೊಂಬಾಳೆ, ಹೊಸ ಸಾಹಸ
Hombale Films
ಮಂಜುನಾಥ ಸಿ.
|

Updated on: Feb 27, 2026 | 3:21 PM

Share

ಹೊಂಬಾಳೆ ಫಿಲಮ್ಸ್ (Hombale Films) ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡ ಹೊಂಬಾಳೆ ಫಿಲಮ್ಸ್ ಆ ನಂತರವೂ ಸಹ ‘ಸಲಾರ್’, ‘ಕಾಂತಾರ’, ‘ಕಾಂತಾರ ಚಾಪ್ಟರ್ 1’ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದು, ಪ್ರಭಾಸ್ ಜೊತೆಗೆ ಐದು ಸಿನಿಮಾಗಳ ಮುಂಗಡ ಒಪ್ಪಂದವನ್ನು ಸಹ ಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಹೊಂಬಾಳೆ ಇದೀಗ ಸಾಗರದಾಟಿ ಹೊರ ದೇಶಕ್ಕೆ ತನ್ನ ಉದ್ಯಮ ವಿಸ್ತರಿಸಲು ಮುಂದಾಗಿದೆ.

ಹೊಂಬಾಳೆ ಫಿಲಮ್ಸ್ ಇದೀಗ ವಿದೇಶದಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ, ಇನ್ನು ಮುಂದೆ ತಾವು ಓವರಸೀಸ್ ಡಿಸ್ಟ್ರಿಬ್ಯೂಷನ್ (ವಿದೇಶದಲ್ಲಿ ಸಿನಿಮಾ ವಿತರಣೆ) ಮಾಡುವುದಾಗಿ ಘೋಷಿಸಿದೆ. ‘ಸಿನಿಮಾ ಎನ್ನುವುದು ಅಂತರವನ್ನೂ ಮೀರಿ ಹೃದಯಗಳನ್ನು ಬೆಸೆಯುವ ಶಕ್ತಿ. ಭಾರತದಿಂದ ಜಗತ್ತಿನವರೆಗೆ, ನಮ್ಮ ಕಥೆಗಳು ದಿಕ್ಕು-ದಿಗಂತಗಳನ್ನೂ ದಾಟಿ ಸಾಗುತ್ತವೆ. ಅತೀವ ಕೃತಜ್ಞತೆ ಮತ್ತು ಸಂಭ್ರಮದೊಂದಿಗೆ, ಭಾರತೀಯ ಸಿನಿಮಾದ ಚೈತನ್ಯವನ್ನು ಗಡಿಗಳ ಆಚೆಗೆ, ವಿವಿಧ ಚಿತ್ರೋದ್ಯಮಗಳಿಗೆ ಮತ್ತು ಪ್ರತಿಯೊಬ್ಬರ ಹೃದಯಕ್ಕೆ ತಲುಪಿಸಲು ‘ಹೊಂಬಾಳೆ ಫಿಲ್ಮ್ಸ್’ ಈಗ ವಿದೇಶಿ ವಿತರಣಾ (Overseas Distribution) ಕ್ಷೇತ್ರಕ್ಕೆ ಹೆಜ್ಜೆ ಇಡುತ್ತಿದೆ. ಇನ್ನಷ್ಟು ವಿವರಗಳಿಗಾಗಿ ಅಥವಾ ಇದರಲ್ಲಿ ಯಾವುದಾದರೂ ನಿರ್ದಿಷ್ಟ ಪದ ಬದಲಾವಣೆ ಬೇಕಿದ್ದಲ್ಲಿ ಕೇಳಬಹುದು. ನಾನಿಲ್ಲಿ ಸಹಾಯಕ್ಕೆ ಸಿದ್ಧ’ ಎಂದು ಹೊಂಬಾಳೆ ಹೇಳಿದೆ.

ಇದನ್ನೂ ಓದಿ:2025ರ ಟಾಪ್ ಐದು ಸಿನಿಮಾಗಳ ಪಟ್ಟಿಯಲ್ಲಿ ಹೊಂಬಾಳೆಯ ಎರಡು ಚಿತ್ರಗಳಿಗೆ ಸ್ಥಾನ

ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯ ಸಿನಿಮಾಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ ವಿದೇಶದಲ್ಲಿ ಸರಿಯಾದ ವಿತರಣೆ ವ್ಯವಸ್ಥೆ ಇಲ್ಲ. ಒಮ್ಮೊಮ್ಮೆ ಸಿನಿಮಾಗಳ ನಿರ್ಮಾಪಕರೇ ವಿದೇಶಗಳಿಗೆ ಹೋಗಿ ಸಿನಿಮಾಗಳನ್ನು ವಿತರಣೆ ಮಾಡಿದ್ದೂ ಸಹ ಇದೆ. ಈ ಸಮಸ್ಯೆ ಗುರುತಿಸಿದಂತಿರುವ ಹೊಂಬಾಳೆ ವಿದೇಶಗಳಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಭಾರತದಲ್ಲಿ ಒಳ್ಳೆಯ ಸಿನಿಮಾ ವಿತರಣೆ ನೆಟ್​​ವರ್ಕ್ ಹೊಂದಿರುವ ಹೊಂಬಾಳೆ ಇದೀಗ ವಿದೇಶದಲ್ಲಿ ಅದೇ ಮಾದರಿಯ ನೆಟ್​​ವರ್ಕ್ ಸ್ಥಾಪನೆಗೆ ಮುಂದಾಗಿದೆ.

ಸಿನಿಮಾ ನಿರ್ಮಾಣದ ವಿಷಯಕ್ಕೆ ಬರುವುದಾದರೆ ಹೊಂಬಾಳೆ ಮುಂದಿನ ದಿನಗಳಲ್ಲಿ ‘ಸಲಾರ್ 2’ ಸಿನಿಮಾ ನಿರ್ಮಾಣ ಮಾಡಲಿದೆ. ಅದಾದ ಬಳಿಕ ಪ್ರಶಾಂತ್ ವರ್ಮಾ ನಿರ್ದೇಶಿಸಿ ಪ್ರಭಾಸ್ ನಟಿಸಲಿರುವ ಇನ್ನೊಂದು ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ‘ರಿಚರ್ಡ್ ಆಂಟೊನಿ’ ಬಹಳ ಹಿಂದೆಯೇ ಘೋಷಿಸಿದ್ದು, ಆ ಸಿನಿಮಾ ಶೀಘ್ರವೇ ಶೂಟಿಂಗ್ ಆರಂಭಿಸಲಿದೆ. ‘ಕಾಂತಾರ ಚಾಪ್ಟರ್ 2’ ಸಿನಿಮಾ ಸಹ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಇನ್ನು ‘ಕೆಜಿಎಫ್ 3’ ಸಹ ಲೈನಪ್​​ನಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us