2025ರ ಟಾಪ್ ಐದು ಸಿನಿಮಾಗಳ ಪಟ್ಟಿಯಲ್ಲಿ ಹೊಂಬಾಳೆಯ ಎರಡು ಚಿತ್ರಗಳಿಗೆ ಸ್ಥಾನ
2025ರ ಕೊನೆಯಲ್ಲಿ, IMDb ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ವೆಬ್ ಸೀರೀಸ್ ಪಟ್ಟಿ ಬಿಡುಗಡೆ ಮಾಡಿದೆ. ಸೈಯಾರಾ ಚಲನಚಿತ್ರಕ್ಕೆ ಮೊದಲ ಸ್ಥಾನ ಸಿಕ್ಕರೆ, 'ಕಾಂತಾರ: ಚಾಪ್ಟರ್ 1' 4ನೇ ಸ್ಥಾನದಲ್ಲಿದೆ. ಇದರೊಂದಿಗೆ ‘ಮಹಾವತಾರ ನರಸಿಂಹ’ ಮತ್ತು ‘ಛಾವಾ’ ಚಿತ್ರಗಳು ಕೂಡಾ ಜನಪ್ರಿಯತೆ ಗಳಿಸಿವೆ. ಜನಪ್ರಿಯ ವೆಬ್ ಸೀರೀಸ್ ಪಟ್ಟಿಯನ್ನೂ ಸೇರಿಸಲಾಗಿದೆ.

2025ರ ಕೊನೆಯ ತಿಂಗಳಲ್ಲಿ ನಾವಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2026 ಅನ್ನು ನಾವು ಸ್ವಾಗತಿಸಲಿದ್ದೇವೆ. ಈಗ ಈ ವರ್ಷದ ಅತ್ಯಂತ ಜನಪ್ರಿಯ ಸಿನಿಮಾ ಹಾಗೂ ವೆಬ್ ಸೀರಿಸ್ಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಐಎಂಡಿಬಿ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿರೋ 10 ಭಾರತೀಯ ಸಿನಿಮಾಗಳು ಮತ್ತು 10 ವೆಬ್ ಸೀರಿಸ್ಗಳು ಪಟ್ಟಿಯಲ್ಲಿದೆ. ಇದರಲ್ಲಿ ಕನ್ನಡದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೂಡ ಇದೆ.
ಒಂದನೇ ಸ್ಥಾನದಲ್ಲಿ ಹಿಂದಿಯ ‘ಸೈಯಾರ’ ಸಿನಿಮಾ ಇದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, ಹೊಸ ಪ್ರತಿಭೆಗಳಾದ ಅನೀತ್ ಪಡ್ಡ ಹಾಗೂ ಅಹಾನ್ ಪಾಂಡೆ ನಟನೆಯ ಈ ಸಿನಿಮಾ ಈ ಬಾರಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಬಾಲಿವುಡ್ನಲ್ಲೂ ಸಿನಿಮಾ ಗಮನ ಸೆಳೆದಿತ್ತು. ಚಿತ್ರದ ಗಳಿಕೆ ಹಿಂದಿಯಲ್ಲೇ 550 ಕೋಟಿ ರೂಪಾಯಿ ದಾಟಿದೆ.
ಹೊಂಬಾಳೆ ಫಿಲ್ಮ್ಸ್ ಅರ್ಪಿತ ಅನಿಮೇಟೆಡ್ ಸಿನಿಮಾ ‘ಮಹಾವತಾರ ನರಸಿಂಹ’ ಚಿತ್ರಕ್ಕೆ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದೆ. ವಿಕ್ಕಿ ಕೌಶಲ್ ಹಾಗೂ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಚಿತ್ರಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಕಾಂತಾರ:ಚಾಪ್ಟರ್ 1’ ಸಿನಿಮಾ ಇದೆ. ರಿಷಬ್, ರುಕ್ಮಿಣಿ ವಸಂತ್ ನಟನೆಯ ಈ ಚಿತ್ರಕ್ಕೆ ಹೊಂಬಾಳೆ ನಿರ್ಮಾಣ ಮಾಡಿದೆ.
ರಜನಿಕಾಂತ್ ನಟನೆಯ ‘ಕೂಲಿ’ (ಐದನೇ ಸ್ಥಾನ), ತಮಿಳಿನ ‘ಡ್ರ್ಯಾಗನ್’(ಆರನೇ ಸ್ಥಾನ), ಆಮಿರ್ ಖಾನ್ ಅವರ ‘ಸಿತಾರೆ ಜಮೀನ್ ಪರ್’(ಏಳನೇ ಸ್ಥಾನ) ಪಡೆದಿದೆ. ‘ದೇವ’, ‘ರೈಡ್ 2’ ಹಾಗೂ ಮಲಯಾಳಂನ ‘ಲೋಕಃ’ ಅನುಕ್ರಮವಾಗಿ ಎಂಟು, ಒಂಭತ್ತು ಹಾಗೂ 10ನೇ ಸ್ಥಾನ ಪಡೆದಿವೆ.
IMDb 2025 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಸರಣಿಗಳು
- ದಿ ಬಾರ್ಡ್ಸ್ ಆಫ್ ಬಾಲಿವುಡ್
- ಬ್ಲಾಕ್ ವಾರಂಟ್
- ಪಾತಾಳ್ ಲೋಕ್ ಸೀಸನ್ 2
- ಪಂಚಾಯತ್ ಸೀಸನ್ 4
- ಮಂಡಲ ಮರ್ಡರ್ಸ್
- ಖೌಫ್
- ಸ್ಪೆಷಲ್ ಆಪ್ಸ್ ಸೀಸನ್ 2
- ಖಾಕಿ: ದಿ ಬೆಂಗಾಲ್ ಚಾಪ್ಟರ್
- ದಿ ಫ್ಯಾಮಿಲಿ ಮ್ಯಾನ್ ಸೀಸನ್ 3
- ಕ್ರಿಮಿನಲ್ ಜಸ್ಟೀಸ್: ಎ ಫ್ಯಾಮಿಲಿ ಮ್ಯಾಟರ್
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




