ದರ್ಶನ್ಗೆ ನಿಜಕ್ಕೂ ಬೆನ್ನು ನೋವು ಇದೆಯಾ? ವೈರಲ್ ಆದ ವಿಡಿಯೋದಲ್ಲಿದೆ ಅಸಲಿಯತ್ತು
ದರ್ಶನ್ ಅವರು "ಡೆವಿಲ್" ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ವಿಡಿಯೋ ವೈರಲ್ ಆಗಿದೆ. ಚಿತ್ರತಂಡದ ಪ್ರಕಾರ, ಫೈಟ್ ದೃಶ್ಯದ ಸಮಯದಲ್ಲಿ ಅವರಿಗೆ ನೋವು ಉಲ್ಬಣಗೊಂಡಿತ್ತಂತೆ. ಅವರು ಡ್ಯೂಪ್ ಬಳಸಲು ನಿರಾಕರಿಸಿ ದೃಶ್ಯವನ್ನು ಪೂರ್ಣಗೊಳಿಸಿದರು. ಆದರೆ, ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ಅನುಮಾನಿಸುತ್ತಿದ್ದಾರೆ.

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದರು. ಆಗ ಅವರು ಬೆನ್ನು ನೋವಿನ ಕಾರಣ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದರು. ಈ ಅವಧಿಯಲ್ಲಿ ಅವರು ಆಸ್ಪತ್ರೆಯಲ್ಲೇ ಇದ್ದರು. ಆಪರೇಷನ್ ಅಗತ್ಯವಿದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದರು. ಆದರೆ, ಸಂಪೂರ್ಣ ಜಾಮೀನು ಸಿಕ್ಕ ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈವರೆಗೆ ಅವರು ಆಪರೇಷನ್ ಮಾಡಿಸಿಕೊಂಡಿಲ್ಲ. ಅವರು ಆ ಬಳಿಕ ಹಾಯಾಗಿ ಸುತ್ತಾಡಿಕೊಂಡಿದ್ದರು. ಕ್ಯಾಮೆರಾ ಕಂಡಾಗ ಅವರು ನಾಟಕ ಮಾಡುತ್ತಾರೆ ಎಂದೆಲ್ಲ ಹೇಳಲಾಯಿತು. ಈಗ ವಿಡಿಯೋ ಒಂದು ವೈರಲ್ ಆಗಿದೆ. ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ಮಾಡಿದ ವಿಡಿಯೋ ಇದಾಗಿದೆ.
ದರ್ಶನ್ ಅವರಿಗೆ ನಿಜಕ್ಕೂ ಬೆನ್ನು ನೋವು ಇದೆಯಂತೆ. ಅದನ್ನು ತೋರಿಸುವಂತಹ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶೂಟಿಂಗ್ ವೇಳೆ ಬೆನ್ನು ನೋವು ತಾಳಲಾರದೆ ಮಲಗಿರೋದು ಕಂಡು ಬರುತ್ತದೆ. ಅವರು ಶೂಟಿಂಗ್ ವೇಳೆ ಬೆನ್ನು ನೋವು ತಾಳಲಾರದೆ ನರಳಾಡಿದ್ದಾರೆ.
View this post on Instagram
ಈ ಬಗ್ಗೆ ‘ಕನ್ನಡ ಪಿಚ್ಚರ್’ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ‘ಡೆವಿಲ್’ ಬರಹಗಾರ ಕಾಂತರಾಜ್, ‘ಹುಡುಗಿಯನ್ನು ಎತ್ತಿಕೊಳ್ಳಬೇಕಿತ್ತು. ಅವರು ಎತ್ತಿಕೊಂಡರು. ಅವಳಿಗೆ ನೋವಾಗಬಾರದು ಎಂದು ನಿಧಾನಕ್ಕೆ ಕೆಳಕ್ಕೆ ಇಳಿಸಿ, ಆ ಬಳಿಕ ಬೆನ್ನು ಹಿಡಿದುಕೊಂಡರು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋರ್ಟ್ ಆದೇಶ ಕೊಟ್ಟರೂ ದರ್ಶನ್ಗೆ ಜೈಲಲ್ಲಿ ಸಿಗುತ್ತಿಲ್ಲ ಸೌಲಭ್ಯ; ಅಳಲು ತೋಡಿಕೊಂಡ ದಾಸ
‘ಫೈಟ್ ದೃಶ್ಯ ಇತ್ತು. ಬೆನ್ನು ನೋವು ಇತ್ತು. ಡ್ಯೂಪ್ ಹಾಕೋಣ ಎಂದು ಮಾಸ್ಟರ್ ಹೇಳಿದರು. ನಾನು ಮಾಡ್ತೀನಿ ಎಂದು ಸುಮಾರು ದೂರ ಹೋಗಿ ಬೆನ್ನು ಹಿಡಿದುಕೊಂಡರು. ಒಂದು ಶಾಟ್ ತೆಗೆದುಕೊಳ್ಳುತ್ತಾ ಇದ್ದೆವು. ಅವರು ಕೆಳಗೆ ಮಲಗಿ ಬೆನ್ನು ಹಿಡಿದುಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಕ್ಯಾಮೆರಾ ಕಂಡಾಗ ಬೆನ್ನು ಹಿಡಿದುಕೊಳ್ಳೋದು ಕಂಡು ಬರುತ್ತದೆ. ಅದು ಫೇಕ್ ಅಲ್ಲ, ಹತ್ತಿರದಿಂದ ನೋಡಿದ್ರೆ ಗೊತ್ತಾಗುತ್ತೆ, ಅವರಿಗೆ ನಿಜಕ್ಕೂ ಬೆನ್ನು ನೋವು ಇದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:10 am, Tue, 16 September 25








