AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ, ವಿಡಿಯೋ ವೈರಲ್

ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ, ವಿಡಿಯೋ ವೈರಲ್

ಅಕ್ಷಯ್​ ಪಲ್ಲಮಜಲು​​
|

Updated on:Feb 27, 2026 | 3:05 PM

Share

ಸಮವಸ್ತ್ರದಲ್ಲಿ ವಿದ್ಯಾರ್ಥಿಗಳ ವೈರಲ್ ವಿಡಿಯೋ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಶಾಲಾ ಸಮವಸ್ತ್ರವು ಶಿಸ್ತು ಮತ್ತು ಸಮಾನತೆಯ ಸಂಕೇತವಾಗಿದ್ದು, ಇಂತಹ ವರ್ತನೆಗಳು ಶಾಲಾ ಗೌರವಕ್ಕೆ ಕುಂದು ತರುತ್ತವೆ ಎಂಬ ವಾದವಿದೆ. ಸಾಮಾಜಿಕ ಮಾಧ್ಯಮದಲ್ಲಿ 'ಲೈಕ್ಸ್'ಗಾಗಿ ಮಾಡುವ ಇಂತಹ ನೃತ್ಯಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಶಾಲಾ ಮೌಲ್ಯಗಳ ಮೇಲೆ ಪರಿಣಾಮ ಬೀರುತ್ತವೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಕಾಪಾಡುವ ಬಗ್ಗೆ ಗಂಭೀರ ಚಿಂತನೆ ಅಗತ್ಯ.

ಶಾಲಾ-ಕಾಲೇಜುಗಳು ಜ್ಞಾನದ ದೇಗುಲಗಳು ಮತ್ತು ಶಿಸ್ತಿನ ತಳಹದಿ ಎಂಬ ನಂಬಿಕೆ ಇದೆ. ಆದರೆ ಇದೀಗ ವೈರಲ್​​ ಆಗಿರುವ ವಿಡಿಯೋದಲ್ಲಿ ಇಬ್ಬರು ಕಾಲೇಜು ಹುಡುಗಿಯರು ಮತ್ತು ಒಬ್ಬ ಹುಡುಗ ಸಮವಸ್ತ್ರದಲ್ಲೇ ಪರಸ್ಪರ ಅಪ್ಪಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸಮವಸ್ತ್ರ ಧರಿಸಿಯೇ ಸಿನೆಮಾ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕೇವಲ ‘ಲೈಕ್ಸ್’ ಮತ್ತು ‘ಶೇರ್’ಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಶಾಲೆಗಳು ಮಕ್ಕಳ ವ್ಯಕ್ತಿತ್ವ ರೂಪಿಸುವ ಮತ್ತು ಉತ್ತಮ ಭವಿಷ್ಯ ಕಟ್ಟಿಕೊಡುವ ಜಾಗ. ಸಮವಸ್ತ್ರ ಧರಿಸಿದಾಗ ಆ ಶಾಲೆಯ ಗೌರವವನ್ನು ಕಾಪಾಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲವೇ? ಎಂಬುದು ಅನೇಕರ ಪ್ರಶ್ನೆ. ಶಾಲಾ ಸಮವಸ್ತ್ರವು ಸಮಾನತೆ ಮತ್ತು ಶಿಸ್ತಿನ ಸಂಕೇತ. ಅಂತಹ ಸಮವಸ್ತ್ರದಲ್ಲೇ ಇಂತಹ ವರ್ತನೆಗಳು ಶಾಲಾ ಮರ್ಯಾದೆಗೆ ಕುಂದು ತರುತ್ತವೆ ಎಂಬ ವಾದ ಕೇಳಿಬರುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 27, 2026 03:04 PM

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More