ಸಾಯಿ ಪಲ್ಲವಿ ಪಡಿಯಚ್ಚು ಪೂಜಾ ಕಣ್ಣನ್; ಕನ್ಫ್ಯೂಸ್ ಆಗೋದು ಗ್ಯಾರಂಟಿ
ಸಾಯಿ ಪಲ್ಲವಿ ಹಾಗೂ ಪೂಜಾ ಕಣ್ಣನ್ ಸಹೋದರಿಯರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಹೀಗಿರುವಾಗಲೇ ಇವರಿಬ್ಬರೂ ಒಟ್ಟಿಗೆ ಇರುವ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Updated on: Sep 24, 2025 | 7:30 AM

ಸಾಯಿ ಪಲ್ಲವಿ ಅವರ ಇತ್ತೀಚಿಗಿನ ವೆಕೇಶನ್ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಅವರು ಸಹೋದರಿ ಪೂಜಾ ಕಣ್ಣನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಪೂಜಾ ಕಣ್ಣನ್ ಅವರು ಚಿತ್ರರಂಗದಲ್ಲಿ ಮಿಂಚಲು ಪ್ರಯತ್ನಿಸಿದ್ದಾರೆ. ಆದರೆ, ಸಾಯಿ ಪಲ್ಲವಿ ಅಷ್ಟು ಜನಪ್ರಿಯತೆ ಸಿಕ್ಕಿಲ್ಲ. 2024ರಲ್ಲಿ ಪೂಜಾ ವಿವಾಹ ನೆರವೇರಿದೆ. ಈ ವೇಳೆ ಸಾಯಿ ಪಲ್ಲವಿ ಖುಷಿಯಿಂದ ಡ್ಯಾನ್ಸ್ ಕೂಡ ಮಾಡಿದ್ದರು. ಊಟಿಯಲ್ಲಿ ವಿವಾಹ ನೆರವೇರಿತು.

ಪೂಜಾ ಅವರು ಕುಟುಂಬದ ಕೆಲಸಗಳಲ್ಲಿ ಬ್ಯುಸಿ ಇದ್ದರು. ಸಾಯಿ ಪಲ್ಲವಿ ಅವರು ಸಿನಿಮಾ ಮಾಡುತ್ತಿದ್ದರು. ಹೀಗಾಗಿ ಇವರ ಭೇಟಿ ಸಂಭವಿಸಿರಲಿಲ್ಲ. ಈಗ ಅವರು ಸಮಯ ಮಾಡಿಕೊಂಡು ಸುತ್ತಾಟ ನಡೆಸಿದ್ದಾರೆ. ಈ ಫೋಟೋನ ಪೂಜಾ ಹಂಚಿಕೊಂಡಿದ್ದಾರೆ.

ಸಾಯಿ ಪಲ್ಲವಿ ಹಾಗೂ ಪೂಜಾ ಕಣ್ಣನ್ ನೋಡೋಕೆ ಒಂದೇ ರೀತಿ ಇದ್ದಾರೆ ಎಂದು ಅನೇಕರು ಹೇಳಿದ್ದು ಇದೆ. ಪೂಜಾ ಕಣ್ಣನ್ ನೋಡೋಕೆ ಥೇಟ್ ಪಲ್ಲವಿ ರೀತಿಯೇ ಇದ್ದಾರೆ. ಒಮ್ಮೊಮ್ಮೆ ಪೂಜಾ ಅವರೇ ಸಾಯಿ ಪಲ್ಲವಿ ರೀತಿ ಕಾಣಿಸೋದು ಇದೆ. ಅಂದಹಾಗೆ ಈ ಫೋಟೋದಲ್ಲಿ ಇರೋದು ಸಾಯಿ ಪಲ್ಲವಿ ಅಲ್ಲ, ಪೂಜಾ.

ಸಾಯಿ ಪಲ್ಲವಿ ಅವರು ಸದ್ಯ ರಾಮಾಯಣ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ರಾಮನ ಪಾತ್ರ ಮಾಡಿದರೆ, ಯಶ್ ರಾವಣ.




