- Kannada News Photo gallery Cricket photos Ravichandran Ashwin's base price in the ILT20 auction will be 1.06cr INR
ಬರೋಬ್ಬರಿ 1.06 ಕೋಟಿ ರೂ. ಮೂಲ ಬೆಲೆ ಘೋಷಿಸಿದ ಅಶ್ವಿನ್
ILT20: ಇಂಟರ್ನ್ಯಾಷನಲ್ ಲೀಗ್ ಟಿ20 ಯುಎಇ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಲೀಗ್. ದುಬೈನಲ್ಲಿ ನಡೆಯುವ ಈ ಲೀಗ್‌ಗಾಗಿ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅದು ಸಹ ಗರಿಷ್ಠ ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ
Updated on:Sep 24, 2025 | 7:55 AM

ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (IPL) ಗುಡ್ ಬೈ ಹೇಳಿರುವ ರವಿಚಂದ್ರನ್ ಅಶ್ವಿನ್ (R Ashwin) ಅವರ ಮುಂದಿನ ನಡೆಯೇನು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಶ್ವಿನ್ ಮುಂಬರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಮ್ಮ ಮೂಲ ಬೆಲೆಯನ್ನು ಸಹ ಘೋಷಿಸಿದ್ದಾರೆ.

ಹೌದು, ಯುಎಇ ಕ್ರಿಕೆಟ್ ಬೋರ್ಡ್ ಆಯೋಜಿಸುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಗಾಗಿ ರವಿಚಂದ್ರನ್ ಅಶ್ವಿನ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಸಹ 120,000 ಯುಎಸ್ ಡಾಲರ್ ಮೂಲ ಬೆಲೆಯೊಂದಿಗೆ. ಅಂದರೆ ಅಶ್ವಿನ್ ಅವರ ಆರಂಭಿಕ ಹರಾಜು ಮೊತ್ತ ಬರೋಬ್ಬರಿ 1.06 ಕೋಟಿ ರೂ.

1.06 ಕೋಟಿ ರೂ. ಮೂಲ ಬೆಲೆಯೊಂದಿಗೆ ಅಶ್ವಿನ್ ಯುಎಇ ಟಿ20 ಲೀಗ್‌ಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದು, ಈ ಮೂಲಕ ಹೊಸ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದಾರೆ. ಅದರಂತೆ ಅಕ್ಟೋಬರ್ 1 ರಂದು ನಡೆಯಲಿರುವ ಹರಾಜಿನಲ್ಲಿ ಗರಿಷ್ಠ ಮೂಲ ಬೆಲೆಯೊಂದಿಗೆ ಅಶ್ವಿನ್ ಹೆಸರು ಸಹ ಕಾಣಿಸಿಕೊಳ್ಳಲಿದೆ.

ಅಂದಹಾಗೆ ರವಿಚಂದ್ರನ್ ಅಶ್ವಿನ್ ಐಪಿಎಲ್ 2025ರ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಖರೀದಿಗೆ ಉತ್ತಮ ಪೈಪೋಟಿ ಸಹ ಕಂಡು ಬಂದಿತ್ತು. ಅಂತಿಮವಾಗಿ ಚೆನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 9.75 ಕೋಟಿ ರೂ. ನೀಡಿ ಖರೀದಿಸಿದ್ದರು.

ಇದೀಗ 1.06 ಕೋಟಿ ರೂ. ಬೇಸ್ ಪ್ರೈಸ್ ನೊಂದಿಗೆ ರವಿಚಂದ್ರನ್ ಅಶ್ವಿನ್ ಇಂಟರ್ನ್ಯಾಷನಲ್ ಲೀಗ್ ಟಿ20 ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ. 120,000 ಯುಎಸ್ ಡಾಲರ್ ಮೂಲ ಬೆಲೆಯೊಂದಿಗೆ ಶುರುವಾಗಲಿರುವ ಬಿಡ್ಡಿಂಗ್ನಲ್ಲಿ 39 ವರ್ಷದ ಹಿರಿಯ ಸ್ಪಿನ್ನರ್ ನನ್ನು ಯಾವ ಫ್ರಾಂಚೈಸಿ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 7:54 am, Wed, 24 September 25
