AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಕ್​ಮ್ಯಾನ್… ಅನಗತ್ಯ ವಿಶ್ವ ದಾಖಲೆ ಬರೆದ ದಸುನ್ ಶಾನಕ

Dasun Shanaka Record: ಏಷ್ಯಾಕಪ್​ ಟೂರ್ನಿಯ ಸೂಪರ್-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ದಸುನ್ ಶಾನಕ ಶೂನ್ಯಕ್ಕೆ ಔಟಾಗಿದ್ದಾರೆ. ಅದು ಕೂಡ ಗೋಲ್ಡನ್ ಡಕ್ ಆಗುವ ಮೂಲಕ. ಈ ಡಕ್​ ಔಟ್​ನೊಂದಿಗೆ ಶಾನಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಳಪೆ ದಾಖಲೆ ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Sep 24, 2025 | 10:04 AM

Share
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್​ನ 15ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಶ್ರೀಲಂಕಾ ವಿರುದ್ಧ ಸೋಲನುಭವಿಸಿದೆ. ಈ ಸೋಲಿನ ನಡುವೆ ಲಂಕಾ ತಂಡದ ಸ್ಟಾರ್ ಆಟಗಾರ ದಸುನ್ ಶಾನಕ (Dasun Shanaka) ಅನಗತ್ಯ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

1 / 5
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಸುನ್ ಶಾನಕ (0) ಮೊದಲ ಎಸೆತದಲ್ಲೇ ಔಟಾಗಿದ್ದರು. ಹೀಗೆ ಝೀರೋಗೆ ವಿಕೆಟ್ ಒಪ್ಪಿಸುವ ಮೂಲಕ ಲಂಕಾ ಬ್ಯಾಟರ್ ಟಿ20 ಕ್ರಿಕೆಟ್​ನ ಡಕ್​ಮ್ಯಾನ್ ಎನಿಸಿಕೊಂಡಿದ್ದಾರೆ.

2 / 5
ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದು ದಸುನ್ ಶಾನಕ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ಬೇಡದ ವಿಶ್ವ ದಾಖಲೆ ಬಾಂಗ್ಲಾದೇಶ್ ತಂಡದ ಸೌಮ್ಯ ಸರ್ಕಾರ್ ಹಾಗೂ ಐರ್ಲೆಂಡ್​ನ ಪಾಲ್ ಸ್ಟಿರ್ಲಿಂಗ್​ ಹೆಸರಿನಲ್ಲಿತ್ತು.

3 / 5
ಬಾಂಗ್ಲಾದೇಶ್ ಪರ 86 ಟಿ20 ಇನಿಂಗ್ಸ್ ಆಡಿರುವ ಸೌಮ್ಯ ಸರ್ಕಾರ್ ಒಟ್ಟು 13 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಈ ಹೀನಾಯ ದಾಖಲೆ ಬರೆದಿದ್ದರು. ಇನ್ನು ಐರ್ಲೆಂಡ್​ನ ಪಾಲ್ ಸ್ಟಿರ್ಲಿಂಗ್​ 150 ಟಿ20 ಇನಿಂಗ್ಸ್​ಗಳಲ್ಲಿ 13 ಬಾರಿ ರನ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ ಸೌಮ್ಯ ಸರ್ಕಾರ್ ಹಾಗೂ ಪಾಲ್ ಸ್ಟಿರ್ಲಿಂಗ್ ಟಿ20 ಕ್ರಿಕೆಟ್​ನ ಡಕ್​ಮ್ಯಾನ್ ಎನಿಸಿಕೊಂಡಿದ್ದರು.

4 / 5
ಇದೀಗ ಈ ಹೀನಾಯ ದಾಖಲೆಯನ್ನು ದಸುನ್ ಶಾನಕ ತಮ್ಮದಾಗಿಸಿಕೊಂಡಿದ್ದಾರೆ. ಶ್ರೀಲಂಕಾ ಪರ 102 ಟಿ20 ಇನಿಂಗ್ಸ್ ಆಡಿರುವ ಶಾನಕ ಒಟ್ಟು 14 ಬಾರಿ ಡಕ್​ ಔಟ್ ಆಗಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎಂಬ ಬೇಡದ ವಿಶ್ವ ದಾಖಲೆಗೆ ಕೊರೊಳೊಡ್ಡಿದ್ದಾರೆ.

5 / 5
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ

‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು

ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ

ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?

ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ

ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್

ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು

ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ

ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​