ರಿಂಗ್ ಕೊಡಿಸಲು ರಮ್ಯಾ ಜೊತೆ ಜ್ಯುವೆಲರಿ ಶಾಪ್ಗೆ ಹೋದ ವಿನಯ್; ಟ್ವಿಸ್ಟ್ ಮೇಲೆ ಟ್ವಿಸ್ಟ್
ವಿನಯ್ ರಾಜ್ ಕುಮಾರ್ ಮತ್ತು ರಮ್ಯಾ ಅವರ ನಡುವಿನ ಡೇಟಿಂಗ್ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಇತ್ತೀಚೆಗೆ ವೈರಲ್ ಆದ ಒಂದು ವಿಡಿಯೋದಲ್ಲಿ ಅವರಿಬ್ಬರು ಆಭರಣ ಅಂಗಡಿಯಲ್ಲಿ ರಿಂಗ್ ಖರೀದಿಸುವ ದೃಶ್ಯವಿದೆ. ಆದರೆ ವಿಡಿಯೋದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡೋ ಕೆಲಸ ಆಗಿದೆ.

ವಿನಯ್ ರಾಜ್ಕುಮಾರ್ (Vinay Rajkumar) ಹಾಗೂ ರಮ್ಯಾ ಮಧ್ಯೆ ಸಾಕಷ್ಟು ವಯಸ್ಸಿ ಅಂತರ ಇದೆ. ರಮ್ಯಾಗೆ ವಿನಯ್ ತಮ್ಮನಂತೆ. ಆದರೆ, ಈ ಸಂಬಂಧವನ್ನು ಕೆಲವರು ತಪ್ಪಾಗಿ ಕಲ್ಪಿಸಿಕೊಂಡಿದ್ದರು. ರಮ್ಯಾ ಹಾಗೂ ವಿನಯ್ ಸುತ್ತಾಡುತ್ತಿರುವುದನ್ನು ನೋಡಿ ಇವರಿಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂದೆಲ್ಲ ಹೇಳಲಾಯಿತು. ಇದಕ್ಕೆ ರಮ್ಯಾ ಸ್ಪಷ್ಟನೆ ಕೂಡ ನೀಡಿದ್ದರು. ಆದರೆ, ಇದನ್ನು ಯಾರೂ ಒಪ್ಪಿಕೊಂಡಿಲ್ಲ. ಈಗ ಭಿನ್ನವಾಗಿ ಇದಕ್ಕೆ ಸ್ಪಷ್ಟನೆ ಕೊಡೋ ಕೆಲಸ ಆಗಿದೆ. ಈ ವಿಡಿಯೋ ಸದ್ಯ ಸಾಕಷ್ಟು ಲೈಕ್ಸ್ ಪಡೆದಿದೆ.
‘ರಿಂಗ್ ಕೊಡಸ್ತೀನಿ ಬಾ’ ಅಂತ ರಮ್ಯಾಗೆ ಮೆಸೇಜ್ ಮಾಡಿದ್ದರು ವಿನಯ್ ರಾಜ್ಕುಮಾರ್. ಆ ಬಳಿಕ ಇಬ್ಬರೂ ಜ್ಯುವೆಲರಿ ಶಾಪ್ಗೆ ತೆರಳುತ್ತಾರೆ. ಅಲ್ಲಿ ರಿಂಗ್ ಹುಡುಕುವಾಗ, ‘ಯಾಕೆ ರಿಂಗ್ ಕೊಡಬೇಕು ಎಂದು ಅನಿಸಿತು’ ಎಂದು ರಮ್ಯಾ ಪ್ರಶ್ನೆ ಮಾಡುತ್ತಾರೆ. ‘ಅವಳನ್ನು ಮೀಟ್ ಮಾಡಿ ಮೂರು ವರ್ಷ ಆಯ್ತು. ಅದಕ್ಕೆ ಏನಾದರೂ ಸ್ಪೆಷಲ್ ಆಗಿ ಗಿಫ್ಟ್ ಕೊಡೋಣ ಅನಿಸಿತು’ ಎಂಬುದು ವಿನಯ್ ಉತ್ತರ.
ಕೊನೆಗೂ ಇಬ್ಬರೂ ಸೇರಿ ಒಂದು ರಿಂಗ್ ಫೈನಲ್ ಮಾಡುತ್ತಾರೆ. ಆಗ ರಿಂಗ್ ತೋರಿಸುತ್ತಿದ್ದ ವ್ಯಕ್ತಿ, ‘ಕಂಗ್ರಾಜ್ಯುಲೇಷನ್ ಸರ್, ಕಂಗ್ರ್ಯಾಜ್ಯುಲೇಷನ್ ಮ್ಯಾಮ್’ ಎಂದು ಹೇಳುತ್ತಾನೆ. ಆಗ ರಮ್ಯಾ, ‘ಇವನಿಗೆ ಓಕೆ, ನನಗೆ ಯಾಕೆ’ ಎಂದು ಕೇಳುತ್ತಾರೆ. ‘ಎಲ್ಲರೂ ಹಾಗೆಯೇ ಅಂದುಕೊಳ್ಳುತ್ತಾರೆ, ಆದರೆ ನಾವು ಜಸ್ಟ್ ಫ್ರೆಂಡ್ಸ್’ ಎಂದು ರಮ್ಯಾ ಹೇಳುತ್ತಾರೆ. ಈ ಮೂಲಕ ತಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂಬುದನ್ನು ಕ್ಲಿಯರ್ ಕಟ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ: ರಮ್ಯಾ ಜೊತೆ ಡೈಮಂಡ್ ರಿಂಗ್ ಖರೀದಿಸಿದ ವಿನಯ್ ರಾಜ್ಕುಮಾರ್
ಇದು ಜ್ಯುವೆಲರಿ ಶಾಪ್ನ ಜಾಹೀರಾತು. ಆದರೆ, ಇದನ್ನು ಭಿನ್ನವಾಗಿ ಕಟ್ಟಿಕೊಡಲಾಗಿದೆ. ಜಾಹೀರಾತಿನ ಜೊತೆಗೆ ತಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂಬುದನ್ನು ರಮ್ಯಾ-ವಿನಯ್ ಹೇಳಿದಂತೆ ಆಗಿದೆ. ಇದೇ ವೇಳೆ ‘ವಿನಯ್ ರಾಜ್ಕುಮಾರ್ ಮನದರಸಿ ಯಾರು’ ಎಂಬ ಪ್ರಶ್ನೆಯೂ ಮೂಡಿದೆ.
ರಮ್ಯಾ-ವಿನಯ್ ವಿಡಿಯೋ
View this post on Instagram
ಪುನೀತ್ ಹಾಗೂ ರಮ್ಯಾ ಒಟ್ಟಾಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವೇಳೆ ಸೆಟ್ಗೆ ವಿನಯ್ ಕೂಡ ಬರುತ್ತಿದ್ದರು ಎನ್ನಲಾಗಿದೆ. ಆಗಿನಿಂದಲೇ ವಿನಯ್ ಹಾಗೂ ರಮ್ಯಾ ಮಧ್ಯೆ ಒಳ್ಳೆಯ ಗೆಳೆತನ ಮೂಡಿದ್ದು, ಅದನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Thu, 25 September 25








