‘ಮಾರ್ಕ್’ ಚಿತ್ರದ ನಿರ್ದೇಶಕನಿಗೆ ಪ್ರೀತಿಯಿಂದ ಕಾರ್ ಗಿಫ್ಟ್ ಕೊಟ್ಟ ಸುದೀಪ್; ಬೆಲೆ ಎಷ್ಟು?
‘ಮಾರ್ಕ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಒಂದು ಐಷಾರಾಮಿ Skoda Kylaq ಕಾರನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಈ ಉಡುಗೊರೆ ನೀಡಲಾಗಿದೆ ಎನ್ನಲಾಗುತ್ತಿದೆ. ಸುದೀಪ್ ಅವರ ಉದಾರತೆ ಮತ್ತು ನಿರ್ದೇಶಕರೊಂದಿಗಿನ ಅವರ ಬಾಂಧವ್ಯ ಇದರಿಂದ ಸ್ಪಷ್ಟವಾಗುತ್ತದೆ.

‘ಮ್ಯಾಕ್ಸ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ ಸುದೀಪ್. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ವಿಜಯ್ ಕಾರ್ತಿಕೇಯ. ಈ ಚಿತ್ರದ ಬಳಿಕ ಸುದೀಪ್ ಅವರು ಮತ್ತೆ ಅದೇ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ. ‘ಮಾರ್ಕ್’ ಎಂಬುದು ಚಿತ್ರದ ಟೈಟಲ್. ಈಗಾಗಲೇ ಸಿನಿಮಾ ಶೂಟ್ ಕೂಡ ಪೂರ್ಣಗೊಳ್ಳುತ್ತಾ ಬಂದಿದೆ ಎನ್ನಲಾಗಿದೆ. ಇದಾದ ಬೆನ್ನಲ್ಲೇ ವಿಜಯ್ಗೆ ಸುದೀಪ್ ಪ್ರೀತಿಯಿಂದ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಸುದೀಪ್ ಅವರಿಗೆ ಯಾರಾದರೂ ಇಷ್ಟ ಆದರೆ ಅವರನ್ನು ಆತ್ಮೀಯವಾಗಿ ನಡೆಸಿಕೊಳ್ಳುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಬಿಗ್ ಬಾಸ್ ನಡೆಸಿಕೊಡುವಾಗ ತಾವು ಧರಿಸೋ ಜಾಕೆಟ್, ಕಿವಿಗೆ ಹಾಕೋ ಚಿನ್ನದ ಸಸ್ಟಡ್ಗಳನ್ನು ಸ್ಪರ್ಧಿಗಳಿಗೆ ಗಿಫ್ಟ್ ಆಗಿ ಕೊಟ್ಟ ಉದಾಹರಣೆ ಇದೆ. ಈಗ ‘ಮಾರ್ಕ್’ ನಿರ್ದೇಶಕನಿಗೆ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸುದೀಪ್ ಅವರನ್ನು ಟ್ರೋಲ್ ಮಾಡಲು ಹೋದ್ರೆ ಹುಶಾರ್; ಬೀಳುತ್ತೆ ಕೇಸ್
ಜುಲೈ ತಿಂಗಳಲ್ಲಿ ‘ಮಾರ್ಕ್’ ಸಿನಿಮಾ ಅನೌನ್ಸ್ ಆಯಿತು. ಕೇವಲ 7 ತಿಂಗಳಲ್ಲಿ ಸಿನಿಮಾ ಶೂಟ್ ಮಾಡಿ, ಜನರ ಎದುರು ತಂದಿಡುವ ಆಲೋಚನೆ ಸುದೀಪ್ ಹಾಗೂ ತಂಡಕ್ಕೆ ಇದೆ. ಈ ಕಾರಣದಿಂದಲೇ ವೇಗವಾಗಿ ಸಿನಿಮಾ ಶೂಟ್ ಮಾಡಲಾಗಿದೆ. ಇದಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ವೇಗ ಕೂಡ ಕಾರಣ. ಇದು ಸುದೀಪ್ಗೆ ಇಷ್ಟ ಆಗಿದೆ. ಹೀಗಾಗಿ, ಸ್ಕೋಡಾ ಕಂಪನಿಯ Kylaqನ ‘ಕಾರ್ಬನ್ ಸ್ಟೀಲ್’ (ಕಪ್ಪು) ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
#Kicchasudeep Gifts a Skoda Car to director #VijayKarthikeya pic.twitter.com/dX09PuLL5f
— Filmy Feed (@filmy_feed_) September 24, 2025
Kichcha Boss Gifted Car Vijay Karthikeya 🔥@KicchaSudeep Boss😍@KicchaSudeep #MarkTheFilm#KicchaSudeep𓃵 #brbfirstlook pic.twitter.com/UrGG2Q95x7
— ಕಿಚ್ಚ ಸುದೀಪ ಸ್ಟೂಡೆಂಟ್ಸ್ ಫ್ಯಾನ್ಸ್ ಅಸೋಸಿಯೇಷನ್ 16K (@KicchaKSSFC) September 24, 2025
ಸ್ಕೋಡಾ Kylaq ಭಾರತದಲ್ಲಿ ಪರಿಚಯಗೊಂಡಿದ್ದು ಕಳೆದ ವರ್ಷ ನವೆಂಬರ್ನಲ್ಲಿ. ಈ ಕಾರು ಮೊದಲು ರಸ್ತೆಗೆ ಇಳಿದಿದ್ದು ಈ ವರ್ಷ ಜನವರಿಯಲ್ಲಿ. ಈ ಕಾರಿನ ಆನ್ ರೋಡ್ ಬೆಲೆ ಬೆಂಗಳೂರಿನಲ್ಲಿ ಬೆಸಿಕ್ ವರ್ಷನ್ಗೆ 9.10 ಲಕ್ಷ ರೂಪಾಯಿಯಿಂದ ಆರಂಭ ಆಗಿ, ಹೈ ಎಂಡ್ಗೆ 15.80 ಲಕ್ಷ ರೂಪಾಯಿವರೆಗೆ ಇದೆ. ಸುದೀಪ್ ನೀಡಿದ್ದು ಹೈ ಎಂಡ್ ವರ್ಷನ್ ಎನ್ನಲಾಗುತ್ತಿದೆ. ಇದರಲ್ಲಿ ಮ್ಯಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ಮೀಷನ್ ಎರಡೂ ಕೂಡ ಲಭ್ಯವಿದೆ. ಪ್ರತಿ ಲೀಟರ್ ಪೆಟ್ರೋಲ್ಗೆ 17 ಕಿಲೋಮೀಟರ್ ಮೈಲೇಜ್ನ ಈ ಕಾರು ನೀಡಬಲ್ಲದು. ಈ ಕಾರು ಆರು ಬಣ್ಣಗಳಲ್ಲಿ ಲಭ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








