AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಕಿಂಗ್ ಮಾಡಲು ಸೂರ್ಯನ ಬೆಳಕು ಇಲ್ಲ: ಜಡ್ಜ್ ಎದುರು ದರ್ಶನ್ ಅಳಲು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಇನ್ನೂ ಕ್ವಾರೆಂಟೈನ್ ಸೆಲ್​​ನಲ್ಲಿಯೇ ಇದ್ದಾರೆ. ಸಾಮಾನ್ಯ ಸೆಲ್​​ಗೆ ಶಿಫ್ಟ್ ಮಾಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ವಾಕಿಂಗ್ ಮಾಡುವ ಜಾಗದಲ್ಲಿ ಸೂರ್ಯನ ಬೆಳಕು ಇಲ್ಲ ಎಂದು ವಿಚಾರಣೆ ವೇಳೆ ದರ್ಶನ್ ಹೇಳಿದ್ದಾರೆ.

ವಾಕಿಂಗ್ ಮಾಡಲು ಸೂರ್ಯನ ಬೆಳಕು ಇಲ್ಲ: ಜಡ್ಜ್ ಎದುರು ದರ್ಶನ್ ಅಳಲು
Darshan Thoogudeepa
ಶಿವಪ್ರಸಾದ್​ ಬಿ.
| Edited By: |

Updated on: Sep 25, 2025 | 4:54 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ದರ್ಶನ್ (Darshan Thoogudeepa), ಪವಿತ್ರಾ ಗೌಡ ಮುಂತಾದ ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇಂದು (ಸೆಪ್ಟೆಂಬರ್ 25) ಸಿಸಿಹೆಚ್-57ನೇ ಕೋರ್ಟ್​ಗೆ ಆರೋಪಿಗಳು ಹಾಜರಾಗಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ (Pavithra Gowda) ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾದರು. ಈ ವೇಳೆ ಜಡ್ಜ್ ಎದುರು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದರ್ಶನ್ (Darshan) ಪರ ವಕೀಲರು ವಾದ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್ ಅವರು ಬಿಳಿ ಬಣ್ಣದ ಜಾಕೆಟ್ ಧರಿಸಿದ್ದರು. ಉಳಿದ ಆರೋಪಿಗಳಾದ ಪುಟ್ಟಸ್ವಾಮಿ, ರಾಘವೇಂದ್ರ, ಧನರಾಜ್, ವಿನಯ್ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯಕ್ ಕೋರ್ಟ್​​ಗೆ ಖುದ್ದು ಹಾಜರಾಗಿದ್ದಾರೆ. ಆರೋಪಿ ನಂದೀಶ್ ನಂದೀಶ್ ಗೈರಾಗಿದ್ದಾನೆ. ಪ್ರಕರಣದಿಂದ ಕೈಬಿಡುವಂತೆ ಕೆಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್ ಪರ ವಕೀಲ ಸುನೀಲ್ ವಾದ ಮಾಡಿದ್ದಾರೆ. ‘ದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್​​ನಲ್ಲಿ ಇಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಜೈಲಿನಲ್ಲಿರುವ ಆರೋಪಿಗಳಿಗೆ ಕೆಲ ಸಮಸ್ಯೆಗಳಿವೆ’ ಎಂದಿರುವ ವಕೀಲರು, ಆರೋಪಿಗಳ ಸಮಸ್ಯೆ ಬಗ್ಗೆಆಲಿಸುವಂತೆ ಕೋರ್ಟ್​​ಗೆ ಮನವಿ ಮಾಡಿದ್ದಾರೆ. ಕ್ವಾರಂಟೈನ್ ಸೆಲ್​​ನಿಂದ ಸಾಮಾನ್ಯ ಸೆಲ್​​ಗೆ ಆರೋಪಿಗಳನ್ನು ಶಿಫ್ಟ್ ಮಾಡುವಂತೆ ಇತರೆ ಆರೋಪಿಗಳ ಪರ ವಕೀಲರು ಮನವಿ ಸಲ್ಲಿಸಿದ್ದಾರೆ.

ವಿಚಾರಣೆ ವೇಳೆ ದರ್ಶನ್​​ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ‘ಕೋರ್ಟ್ ಆದೇಶ ಪಾಲಿಸುತ್ತಿದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ, ‘ಇಲ್ಲ ಸರ್, ಯಾವ ಆದೇಶಗಳನ್ನೂ ಪಾಲಿಸುತ್ತಿಲ್ಲ. 25/3 ಫೀಟ್ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ. ಅಲ್ಲಿ ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುವುದಿಲ್ಲ’ ಎಂದು ದರ್ಶನ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಪತ್ನಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ

ಜೈಲು ಅಧಿಕಾರಿಗಳ ವಿರುದ್ದ ದರ್ಶನ್ ಪರ ವಕೀಲರು ಆರೋಪ ಮಾಡಿದ್ದಾರೆ. ‘20 ಬಾರಿ ಕೋರ್ಟ್ ಆರ್ಡರ್ ಕೇಳುತ್ತಾರೆ. ಗುಂಡಾ ರಾಜ್ಯವೇ ಇದು? ಕೋರ್ಟ್ ಆರ್ಡರ್​ಗೂ ಮಾನ್ಯತೆ ನೀಡುತ್ತಿಲ್ಲ’ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದಾರೆ. ಜೈಲಿನ ಸೂಪರಿಂಟೆಂಡೆಂಟ್ ಹಾಜರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್