- TV9 Kannada Photo gallery Cricket photos Shubman Gill Joins Share-e-Punjab T20 League to Maintain Form for Team India
ಟೆಸ್ಟ್ ಸರಣಿ ನಂತರ ಹೊಸ ಟಿ20 ಲೀಗ್‌ನಲ್ಲಿ ಕಣಕ್ಕಿಳಿಯಲಿರುವ ಶುಭ್ಮನ್ ಗಿಲ್
Shubman Gill Joins Share-e-Punjab T20 League: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ಪಂಜಾಬ್‌ನ ಹೊಸ ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಆಗಸ್ಟ್ 30ಕ್ಕೆ ಆರಂಭವಾಗುವ ಈ ಲೀಗ್‌ನಲ್ಲಿ ಅರ್ಷದೀಪ್ ಸಿಂಗ್ ಮತ್ತು ಅಭಿಷೇಕ್ ಶರ್ಮಾ ಕೂಡ ಭಾಗವಹಿಸಲಿದ್ದಾರೆ. ಯುವ ಪ್ರತಿಭೆಗಳಿಗೆ ವೇದಿಕೆ ಎಂದು ಗಿಲ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟು ಆರು ತಂಡಗಳಿದ್ದು, ಆಗಸ್ಟ್ 9ರಂದು ಹರಾಜು ನಡೆಯಲಿದೆ.
Updated on: Aug 03, 2026 | 7:04 PM

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಆಡಿ ಮುಗಿಸಿದ ಬಳಿಕ ಟೀಂ ಇಂಡಿಯಾ ಪ್ರಸ್ತುತ ಯಾವುದೇ ಸರಣಿಯನ್ನು ಆಡುತ್ತಿಲ್ಲ. ತಂಡದ ಮುಂದಿನ ಸರಣಿ ಶ್ರೀಲಂಕಾ ವಿರುದ್ಧ ಇದೆ. ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದ್ದು, ನಾಯಕ ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ(PC-PTI).

ಈ ಪ್ರವಾಸ ಮುಗಿದ ಬಳಿಕ ಶುಭ್ಮನ್ ಗಿಲ್ ಮತ್ತೆ ಕಣಕ್ಕಿಳಿಯುವುದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ. ಈ ಸರಣಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಅಲ್ಲಿಯವರೆಗೂ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ತಮ್ಮ ಲಯವನ್ನು ಹಾಗೆಯೇ ಕಾಪಾಡಿಕೊಳ್ಳಲು ಟಿ20 ಲೀಗ್‌ನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ(PC-PTI).

ಪ್ರಾರಂಭಿಸಲಾಗುತ್ತಿದೆ. ಭಾರತದ ಶ್ರೀಲಂಕಾ ಪ್ರವಾಸ ಮುಗಿದ ಎರಡು ದಿನಗಳ ನಂತರ ಅಂದರೆ ಆಗಸ್ಟ್ 30 ರಿಂದ ಈ ಪಂದ್ಯಾವಳಿ ಆರಂಭವಾಗಲಿದೆ. ಶುಭಮನ್ ಗಿಲ್ ಮತ್ತು ಗುರ್ನೂರ್ ಬ್ರಾರ್ ತಮ್ಮ ರಾಷ್ಟ್ರೀಯ ತಂಡದ ಕರ್ತವ್ಯಗಳನ್ನು ಪೂರ್ಣಗೊಳಿಸಿದ ನಂತರ ಈ ಲೀಗ್‌ನಲ್ಲಿ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ(PC-PTI).

ಈ ಇಬ್ಬರ ಜೊತೆಗೆ, ಭಾರತೀಯ ಟಿ20 ತಂಡದ ಭಾಗವಾಗಿರುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಸೆಪ್ಟೆಂಬರ್ 13 ರಂದು ಮುಕ್ತಾಯಗೊಳ್ಳುವ ಈ ಪಂದ್ಯಾವಳಿಯಲ್ಲಿ ಆಡುವ ನಿರೀಕ್ಷೆಯಿದೆ(PC-PTI).

ಶೇರ್-ಎ-ಪಂಜಾಬ್ ಟಿ20 ಲೀಗ್‌ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಿಲ್, ‘ಶೇರ್-ಎ-ಪಂಜಾಬ್ ಟಿ20 ಲೀಗ್ ಯುವ ಕ್ರಿಕೆಟಿಗರಿಗೆ ಪಂಜಾಬ್ ಮತ್ತು ಭಾರತಕ್ಕಾಗಿ ಆಡುವತ್ತ ತಮ್ಮ ಪ್ರತಿಭೆ ಮತ್ತು ಪ್ರಗತಿಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಪಂಜಾಬ್ ಯಾವಾಗಲೂ ಅತ್ಯುತ್ತಮ ಕ್ರಿಕೆಟಿಗರನ್ನು ಉತ್ಪಾದಿಸಿದೆ, ಮತ್ತು ಈ ಲೀಗ್ ಇನ್ನೂ ಅನೇಕರನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ(PC-PTI).

ಈ ಟಿ20 ಲೀಗ್ನ ಮೆಗಾ ಹರಾಜು ಆಗಸ್ಟ್ 9 ರಂದು ನಡೆಯಲಿದೆ. ಒಟ್ಟು ಆರು ತಂಡಗಳು ಭಾಗವಹಿಸುವ ಈ ಲೀಗ್‌ನಲ್ಲಿ 27 ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯನ್ನು ರೌಂಡ್-ರಾಬಿನ್ ಸ್ವರೂಪದಲ್ಲಿ ಆಡಲಾಗುತ್ತದೆ. ಪ್ರತಿ ಫ್ರಾಂಚೈಸಿಯು ಒಬ್ಬ ಮಾರ್ಕ್ಯೂ ಆಟಗಾರ ಮತ್ತು ಕನಿಷ್ಠ ಇಬ್ಬರು ಐಕಾನ್ ಆಟಗಾರರನ್ನು ಹೊಂದಿರುತ್ತದೆ(PC-PTI).




