AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು ಜನ್ಮದಿನಕ್ಕೆ ‘ವಾರಣಾಸಿ’ ಗ್ಲಿಂಪ್ಸ್ ಸಿಗಲ್ವಾ? ಸಿಕ್ಕಿದೆ ಬಿಗ್ ಅಪ್‌ಡೇಟ್

ಆಗಸ್ಟ್ 9ರಂದು ಸೂಪರ್‌ಸ್ಟಾರ್ ಮಹೇಶ್ ಬಾಬು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಗ್ಲಿಂಪ್ಸ್ ಸಿಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಲಿದ್ದು, ಚಿತ್ರತಂಡ ಕೇವಲ ಪೋಸ್ಟರ್ ರಿಲೀಸ್ ಮಾಡಲು ಸಜ್ಜಾಗಿದೆ. ಸಿನಿಮಾ 2027ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

ಮಹೇಶ್ ಬಾಬು ಜನ್ಮದಿನಕ್ಕೆ 'ವಾರಣಾಸಿ' ಗ್ಲಿಂಪ್ಸ್ ಸಿಗಲ್ವಾ? ಸಿಕ್ಕಿದೆ ಬಿಗ್ ಅಪ್‌ಡೇಟ್
ರಾಜಮೌಳಿ-ಮಹೇಶ್ ಬಾಬು
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 05, 2026 | 11:17 AM

Share

ಮುಖ್ಯಾಂಶಗಳು

  • ಮಹೇಶ್ ಬಾಬು ಬರ್ತ್‌ಡೇಗೆ 'ವಾರಣಾಸಿ' ಟೀಸರ್ ಇಲ್ಲ
  • ಫ್ಯಾನ್ಸ್‌ಗೆ ಕಾದಿದೆ ಸಣ್ಣ ನಿರಾಸೆ
  • 2027ರ ಏಪ್ರಿಲ್ 7ಕ್ಕೆ 'ವಾರಣಾಸಿ' ಧಮಾಕಾ

ಸ್ಟಾರ್ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಹಾಗೂ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ‘ವಾರಣಾಸಿ’ ಸಿನಿಮಾ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಆಗಸ್ಟ್ 9ರಂದು ಮಹೇಶ್ ಬಾಬು ಜನ್ಮದಿನ ಇದೆ. ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಸಿನಿಮಾ ತಂಡ ದೊಡ್ಡ ಗಿಫ್ಟ್ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ವಾರಣಾಸಿ 80 ಶೇಕಡಾ ಶೂಟಿಂಗ್ ಕಂಪ್ಲೀಟ್

ರಾಜಮೌಳಿ ಅವರ ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಈಗಾಗಲೇ ಶೇಕಡಾ 80ರಷ್ಟು ಪೂರ್ಣಗೊಂಡಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಸಿನಿಮಾದ ಟೀಸರ್ ಅಥವಾ ಸಣ್ಣ ಗ್ಲಿಂಪ್ಸ್ ಬರಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಚಿತ್ರತಂಡ ಕೇವಲ ಒಂದು ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಪಕ್ಕಾ ಪ್ಲಾನ್ ಮಾಡಿರುವ ರಾಜಮೌಳಿ

ರಾಜಮೌಳಿ ಪ್ರಚಾರದ ವಿಷಯದಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ. ಪ್ರತಿಯೊಂದು ಅಪ್‌ಡೇಟ್ ಸರಿಯಾದ ಸಮಯಕ್ಕೆ ನೀಡಬೇಕು ಎಂಬುದು ಅವರ ಲೆಕ್ಕಾಚಾರವಾಗಿದೆ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಅವರು ಸಿದ್ಧರಿಲ್ಲ. ಆದ್ದರಿಂದಲೇ ಗ್ಲಿಂಪ್ಸ್ ಬದಲಿಗೆ ಕೇವಲ ಪೋಸ್ಟರ್ ರಿಲೀಸ್ ಮಾಡಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ

2027ರಲ್ಲಿ ವಿಶ್ವದಾದ್ಯಂತ ಸಿನಿಮಾ ರಿಲೀಸ್

ಈ ಚಿತ್ರವನ್ನು 2027ರ ಏಪ್ರಿಲ್ 7ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇದಕ್ಕಾಗಿ ರಾಜಮೌಳಿ ಮತ್ತು ತಂಡ ಹಗಲಿರುಳು ಶ್ರಮಿಸುತ್ತಿದೆ. ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಎಲ್ ನಾರಾಯಣ್ ಮತ್ತು ಎಸ್‌ಎಸ್ ಕಾರ್ತಿಕೇಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರ ರಾಮಾಯಣವನ್ನು ಆಧರಿಸಿದೆ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ