ಕಾಮನ್ ಮ್ಯಾನ್ ಆಟಕ್ಕೆ ಬೇಸತ್ತ ಜನಸಾಮಾನ್ಯರು; ಕಿಚ್ಚನ ಎಂಟ್ರಿಗೆ ಕಾದ ವೀಕ್ಷಕರು
ಬಿಗ್ ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ಸ್ಪರ್ಧಿಗಳ ಆಟ ದಿಕ್ಕು ತಪ್ಪಿದ್ದು, ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಸಹ-ಸ್ಪರ್ಧಿಗಳು ಹಾಗೂ ವೀಕ್ಷಕರ ಆಕ್ರೋಶಕ್ಕೆ ಈಡಾಗಿದ್ದಾರೆ. ಧನುಷ್, ಲಿಖಿತ್, ಮಂಜು ಹಾಗೂ ಕಿರಣ್ ವರ್ತನೆಗೆ ಬೇಸತ್ತ ವೀಕ್ಷಕರು ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಇವರಿಗೆ ಸರಿಯಾಗಿ ಕ್ಲಾಸ್ ತಗೋಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಮುಖ್ಯಾಂಶಗಳು
- ಬೇರೆಯವರ ಆಹಾರ ಕದ್ದು ತಿಂದು ಉದ್ಧಟತನ
- ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ
- ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕ್ಲಾಸ್?
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ನಾಲ್ವರು ಕಾಮನ್ ಮ್ಯಾನ್ಗಳ ಎಂಟ್ರಿ ಆಗಿದೆ. ಸೆಲೆಬ್ರಿಟಿಗಳು ವೈಯಕ್ತಿಕ ಆಟಕ್ಕೆ ಒತ್ತು ನೀಡಿದರೆ, ಕಾಮನ್ ಮ್ಯಾನ್ಗಳು ತಮ್ಮದೇ ಒಂದು ಗುಂಪು ಕಟ್ಟಿಕೊಂಡು ಆಟ ಆಡುತ್ತಿದ್ದಾರೆ. ಈಗ ಅವರ ಆಟ ದಿಕ್ಕು ತಪ್ಪಿದೆ. ಮಾತಿಗೆ ಕಡಿವಾಣ ಇಲ್ಲದಂತೆ ಆಗಿದೆ. ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಎಲ್ಲರಿಗೂ ತೊಂದರೆ ಕೊಡುತ್ತಾ ಇದ್ದಾರೆ. ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಅವರು ನಡೆದುಕೊಳ್ಳುತ್ತಿರುವ ರೀತಿ ಸಹ ಸ್ಪರ್ಧಿಗಳಿಗೆ ಮಾತ್ರವಲ್ಲ ಬಿಗ್ ಬಾಸ್ ವೀಕ್ಷಕರಿಗೂ ಹೇಸಿಗೆ ಹುಟ್ಟುವಂತೆ ಆಗಿದೆ.
ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್ ಹಾಗೂ ಮಾಡರ್ನ್ ಮಹಾಕವಿ ಮಂಜು ಅವರು ಕಾಮನ್ ಮ್ಯಾನ್ ಕೆಟಗರಿಯಲ್ಲಿ ಬಿಗ್ ಬಾಸ್ ಮನೆ ಸೇರಿದವರು. ಇವರ ಪೈಕಿ ಧನುಷ್ ಅವರಿಗೆ ಮಾತಿನ ಮೇಲೆ ನಿಗಾ ಇದೆ. ಅಷ್ಟೇ ಅಲ್ಲ, ಟಾಸ್ಕ್ಗಳನ್ನು ಉತ್ತಮವಾಗಿ ಹೇಗೆ ಆಡಬೇಕು ಎಂಬ ಸ್ಪಷ್ಟ ಅರಿವು ಇದೆ. ಆದರೆ, ಸಹವಾಸದಿಂದ ಸನ್ಯಾಸಿ ಹಾಳಾದ ಎಂಬ ಗಾದೆ ಮಾತಿನಂತೆ ಉಳಿದ ಮೂವರ ಜೊತೆ ಸೇರಿ ಇವರ ಆಟ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್; ಮಂಜನ ವರ್ತನೆಯೇ ಕಾರಣ
ಮಾಡಿದ ತೊಂದರೆ ಏನು?
ಮಾಡರ್ನ್ ಮಹಾಕವಿ ಮಂಜು ಅವರು ಉದ್ದೇಶಪೂರ್ವಕವಾಗಿ ಎಲ್ಲರನ್ನೂ ಟ್ರಿಗರ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾರಾದರೂ ಸ್ವಲ್ಪ ಕೆರಳುತ್ತಾರೆ ಎನಿಸಿದರೆ ಅವರನ್ನು ಮತ್ತಷ್ಟು ಟ್ರಿಗರ್ ಮಾಡುತ್ತಾರೆ. ಈಗ ಆಗಿದ್ದೂ ಅದೇ. ಹಿಂದಿನ ದಿನ ಬೇರೆಯವರಿಗೋಸ್ಕರ ಇಟ್ಟ ಮೊಟ್ಟೆ ಹಾಲನ್ನು ಲಿಖಿತ್, ಮಂಜು ಕದ್ದಿದ್ದೂ ಅಲ್ಲದೆ, ತಮ್ಮ ತಪ್ಪೇ ಇಲ್ಲ ಎಂಬ ರೀತಿಯಲ್ಲಿ ಅವರುಗಳು ನಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ತಮ್ಮ ತಪ್ಪೇ ಇಲ್ಲ ಎಂಬ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ. ಅಲ್ಲದೆ, ಅವಿನಾಶ್ ಹಾಗೂ ಇತರ ಸ್ಪರ್ಧಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.
Sunday aa cringe comedy content torsilla andru parwagilla Expecting 2 days episode of belt treatment for these bloody commoners – all the chaos they’ve created this week
Lekka tappi hogo ashtu topics discuss madodide. Plz don’t disappoint the viewers#BBK13
— InMyView (@ItsMyConviction) September 17, 2026
ಕಾಮನ್ ಮ್ಯಾನ್ಗಳು ನಡೆದುಕೊಳ್ಳುತ್ತಿರುವ ರೀತಿಗೆ ವೀಕ್ಷಕರು ಬೇಸರ ಹೊರಹಾಕಿದ್ದಾರೆ. ‘ಈವರೆಗೆ ಬಿಗ್ ಬಾಸ್ ಮನೆ ಸೇರಿದ ಅತ್ಯಂತ ಕೆಟ್ಟ ಸ್ಪರ್ಧಿಗಳು ಇವರು’ ಎಂದು ಅಸಮಾಧಾನ ಹೊರಹಾಕುತ್ತಾ ಇದ್ದಾರೆ. ವೀಕೆಂಡ್ನ ಎರಡೂ ಎಪಿಸೋಡ್ಗಳು ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕೋರಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:53 am, Fri, 18 September 26




