ಕಿಮ್ ಕರ್ದಾಶಿಯನ್ ಕಳೆದುಕೊಂಡಿದ್ದು 53 ಕೋಟಿ, ಪರಿಹಾರ ಸಿಕ್ಕಿದ್ದು 105 ರೂಪಾಯಿ
ಕಿಮ್ ಕರ್ದಾಶಿಯನ್ ಅಮೆರಿಕದ ಖ್ಯಾತ ಉದ್ಯಮಿ, ಜಾಗತಿಕ ಫ್ಯಾಷನ್ ಇನ್ಫ್ಲಯೆನ್ಸರ್, ಉದ್ಯಮಿ, ಪ್ರಭಾವಿ ಮಹಿಳೆ. ಕಿಮ್ ಕರ್ದಾಶಿಯನ್ ಕೆಲ ವರ್ಷಗಳ ಹಿಂದೆ ನಡೆದ ಭಯಾನಕ ಘಟನೆಯೊಂದನ್ನು 53 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದ್ದರು. ಆದರೆ ಅವರಿಗೆ ಪರಿಹಾರವಾಗಿ 105 ರೂಪಾಯಿಗಳನ್ನು ಮಾತ್ರವೇ ನೀಡಲಾಗಿದೆ.

ಮುಖ್ಯಾಂಶಗಳು
- ಫ್ಯಾಷನ್ ಐಕಾನ್ ಕಿಮ್ ಕರ್ದಾಶಿಯನ್
- ಕಿಮ್ ಕರ್ದಾಶಿಯನ್ 53 ಕೋಟಿ ಕಳೆದುಕೊಂಡಿದ್ದರು.
- ಆದರೆ ಪರಿಹಾರ ಸಿಕ್ಕಿದ್ದು 105 ರೂಪಾಯಿ
‘ಕಾರ್ದಾಶಿಯನ್ಸ್’ ಎಂದರೆ ಐಶಾರಾಮಿ ಜೀವನ ಶೈಲಿ, ಫ್ಯಾಷನ್ ಐಕಾನ್ಗಳೆಂದು ಜನಪ್ರಿಯರು. ಕಾರ್ದಾಶಿಯನ್ಗಳ ಹೆಸರಲ್ಲಿ ಶೋಗಳು ಸಹ ಬಂದಿವೆ. ಫ್ಯಾಷನ್ ಜಗತ್ತಿನ ಟಾಪ್ ಮಾಡೆಲ್ಗಳು, ಫ್ಯಾಷನ್ ಜಗತ್ತಿನ ಟಾಪ್ ಇನ್ಫ್ಲ್ಯುಯೆನ್ಸರ್ಗಗಳು. ಅವರಲ್ಲಿ ಪ್ರಮುಖರು ಕಿಮ್ ಕಾರ್ದಾಶಿಯನ್. ಕಿಮ್ ಕಾರ್ದಾಶಿಯನ್ ಅವರ ಮೇಲೆ ಕೆಲ ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ಭಯಾನಕ ದಾಳಿಯೊಂದು ನಡೆದಿತ್ತು. ಅದರಿಂದಾಗಿ ಅವರು 53 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ನ್ಯಾಯಾಲಯವು ಈಗ ಅವರಿಗೆ 105 ರೂಪಾಯಿಯನ್ನು ಪರಿಹಾರವಾಗಿ ನೀಡಿದೆ.
ಏನದು ಘಟನೆ?
2016ರ ಅಕ್ಟೋಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಕಿಮ್ ಕಾರ್ದಾಶಿಯನ್ ಭಾಗಿ ಆಗಿದ್ದರು. ಕಿಮ್ ತಂಗಿದ್ದ ಹೋಟೆಲ್ಗೆ ಕೆಲ ದುಷ್ಕರ್ಮಿಗಳು ಪೊಲೀಸರ ವೇಷದಲ್ಲಿ ನುಗ್ಗಿ, ಕಿಮ್ ಇದ್ದ ಕೊಠಡಿಗೆ ಹೋಗಿ ಕಿಮ್ ಕಾರ್ದಾಶಿಯನ್ ಅವರಿಗೆ ಬಂದೂಕು ತೋರಿಸಿ ಹೆದರಿಸಿ, ಅವರನ್ನು ಕಟ್ಟಿಹಾಕಿ ಅವರ ಬಳಿ ಇದ್ದ 53 ಕೋಟಿ ರೂಪಾಯಿ ಮೌಲ್ಯದ ಒಡವೆಗಳನ್ನು ದರೋಡೆ ಮಾಡಿದ್ದರು. ಆ ಸಮಯದಲ್ಲಿ ಇದು ಭಾರಿ ದೊಡ್ಡ ಸುದ್ದಿ ಆಗಿತ್ತು. ಅದು ನನ್ನ ಜೀವನದ ಅತ್ಯಂತ ಭಯಾನಕ ಅನುಭವವಾಗಿತ್ತು ಎಂದು ಕಿಮ್ ಈ ಹಿಂದೆ ಹೇಳಿಕೊಂಡಿದ್ದರು.
ಘಟನೆಯ ಬಳಿಕ ಸಹಜವಾಗಿಯೇ ಕಿಮ್ ಕಾರ್ದಾಶಿಯನ್ ದೂರು ದಾಖಲಿಸಿದ್ದರು. ಪೊಲೀಸರು ಸತತ ಪ್ರಯತ್ನ ನಡೆಸಿದರು, ಹಲವರ ವಿಚಾರಣೆ ನಡೆಸಲಾಯ್ತು, ಹಲವರ ಬಂಧನವೂ ಆಯ್ತು. ಇದೀಗ ಪ್ರಕರಣದ ವಿಚಾರಣೆ ಅಂತ್ಯವಾಗಿದ್ದು, ಪ್ಯಾರಿಸ್ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, 10 ಮಂದಿ ಆರೋಪಿಗಳಲ್ಲಿ 8 ಮಂದಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ. ಜೊತೆಗೆ ಕಿಮ್ ಕಾರ್ದಾಶಿಯನ್ಗೆ ಕೇವಲ ಒಂದು ಯೂರೋ (ಭಾರತೀಯ ರೂಪಾಯಿ ಲೆಕ್ಕದಲ್ಲಿ 105 ರೂಪಾಯಿ) ಪರಿಹಾರ ನೀಡಿದೆ.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾದ ಪ್ರಚಾರ ಹೇಗಿರಲಿದೆ? ಮೀಸಲಿಟ್ಟಿರುವ ಬಜೆಟ್ ಎಷ್ಟು?
ಕೇವಲ 105 ರೂಪಾಯಿ ಏಕೆ?
ಆದರೆ ಕೇವಲ ಒಂದು ಯೂರೋ ಪರಿಹಾರ ನೀಡುವುದಕ್ಕೆ ಕಾರಣವೂ ಇದೆ. ತಮಗೆ ಕೇವಲ ಒಂದು ಯೂರೋ ಪರಿಹಾರ ನೀಡಬೇಕು ಎಂದು ಖುದ್ದು ಕಿಮ್ ಕಾರ್ದಾಶಿಯನ್ ಅವರೇ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ತಪ್ಪಿತಸ್ಥರ ವ್ಯಕ್ತಿತ್ವ ಮತ್ತು ಹೊಣೆಗಾರಿಕೆಯನ್ನು ಪ್ರಶ್ನಿಸಲು ಹಾಗೂ ಘಟನೆಯಿಂದ ತಮಗೆ ಆದ ಮಾನಸಿಕ ಆಘಾತವನ್ನು ನ್ಯಾಯಾಂಗದ ಮೂಲಕ ಅಧಿಕೃತವಾಗಿ ಗುರುತಿಸಲ್ಪಡುವುದು ನನ್ನ ಉದ್ದೇಶ ಆಗಿತ್ತು. ಪರಿಹಾರಕ್ಕಾಗಿ ನಾನು ಪ್ರಕರಣ ದಾಖಲಿಸಿರಲಿಲ್ಲ ಎಂದು ಕಿಮ್ ಹೇಳಿದ್ದರು. ಅವರ ಇಚ್ಛೆಯಂತೆಯೇ ಈಗ ಕೇವಲ ಒಂದು ಯೂರೋ ಪರಿಹಾರವನ್ನಾಗಿ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




