ನರೇಂದ್ರ ಮೋದಿ ಹುಟ್ಟುಹಬ್ಬ: ಪವನ್-ಕಮಲ್ ಸಹಿತ ಹಲವು ಸೆಲೆಬ್ರಿಟಿಗಳಿಂದ ಶುಭಾಶಯ
ಬಿಜೆಪಿಯ ಹಲವು ಮುಖಂಡರು, ನಾಯಕರು ದೇವಸ್ಥಾನಗಳಲ್ಲಿ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆಗಳನ್ನು ಸಹ ಮಾಡಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಹೇಳಿದ್ದಾರೆ. ಯಾರು ಯಾವ ರೀತಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. ಮಾಹಿತಿ ಇಲ್ಲಿದೆ...

ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 17). ಮೋದಿ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪ್ರಧಾನಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಬಿಜೆಪಿಯ ಹಲವು ಮುಖಂಡರು, ನಾಯಕರು ದೇವಸ್ಥಾನಗಳಲ್ಲಿ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆಗಳನ್ನು ಸಹ ಮಾಡಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಹೇಳಿದ್ದಾರೆ. ಯಾರು ಯಾವ ರೀತಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. ಮಾಹಿತಿ ಇಲ್ಲಿದೆ…
ಪವನ್ ಕಲ್ಯಾಣ್ ಶುಭಾಶಯ
ಸ್ಟಾರ್ ನಟ, ಆಂಧ್ರ ಪ್ರದೇಶ ಉಪಮುಖ್ಯ ಮಂತ್ರಿಯೂ ಆಗಿರುವ ಪವನ್ ಕಲ್ಯಾಣ್, ಸುದೀರ್ಘವಾದ ಸಂದೇಶವನ್ನು ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹಂಚಿಕೊಂಡಿದ್ದಾರೆ. ಮೋದಿ ಅವರು ಜೀವನವನ್ನೇ ಭಾರತಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಭಾರತ ಪ್ರಗತಿ ಸಾಧಿಸಿದೆ ಎಂದಿರುವ ಪವನ್ ಕಲ್ಯಾಣ್, ಆಂಧ್ರ ಪ್ರದೇಶಕ್ಕೆ ಅಪಾರ ನೆರವನ್ನು ಮೋದಿ ನೀಡಿದ್ದಾರೆ ಎಂದಿದ್ದಾರೆ. ಜೊತೆಗೆ 2047ಕ್ಕೆ ವಿಕಸಿತ ಭಾರತ ನಮ್ಮದಾಗಲಿದೆ’ ಎಂದಿದ್ದಾರೆ. ಪವನ್ ಅವರ ಟ್ವಿಟ್ಟರ್ ಪೋಸ್ಟ್ ಇಲ್ಲಿದೆ…
A life dedicated to Bharat. A journey of service that continues to shape the aspirations of a Nation. 25 years of selfless service, with many more years of dedicated service to Bharat ahead.
On the birthday of Hon’ble Prime Minister Shri @narendramodi Ji, I extend my heartfelt… pic.twitter.com/agCto7jew8
— Pawan Kalyan (@PawanKalyan) September 17, 2026
ಅಕ್ಷಯ್ ಕುಮಾರ್
ಬಾಲಿವುಡ್ ನಟ ಮತ್ತು ಮೋದಿ ಅವರಿಗೆ ಆಪ್ತರೆಂದೇ ಹೇಳಲಾಗುವ ಅಕ್ಷಯ್ ಕುಮಾರ್ ಅವರು ಮೋದಿ ಅವರ ಹುಟ್ಟುಹಬ್ಬಕ್ಕೆ ಹಿಂದಿಯಲ್ಲಿ ಶುಭಾಶಯ ಕೋರಿದ್ದು, ‘ಇಂದು ಪ್ರಧಾನಿ ಅವರ ಹುಟ್ಟುಹಬ್ಬ, ಈ ದಿನವನ್ನು ಸೇವಾ ಸಂಕಲ್ಪ ದಿನ’ ಎಂದು ಆಚರಿಸಲಾಗುತ್ತಿದ್ದು, ಹುಟ್ಟುಹಬ್ಬವನ್ನು ಆಚರಿಸಲು ಇದಕ್ಕಿಂತಲೂ ಉತ್ತಮ ದಿನ ಇರಲು ಸಾಧ್ಯವಿಲ್ಲ’ ಎಂದಿದ್ದಾರೆ.
आज हमारे प्रधानमंत्री जी का जन्मदिन है और इस दिन को सेवा संकल्प के साथ मनाया जा रहा है। मुझे लगता है जन्मदिन मनाने का इससे खूबसूरत कोई और तरीका नहीं हो सकता। हम किसी और के काम आएँ, किसी ज़रूरतमंद की मदद करें, किसी चेहरे पर मुस्कान लाएँ… बस इतना सा संकल्प। Happy Birthday…
— Akshay Kumar (@akshaykumar) September 17, 2026
ನಟ ಮೋಹನ್ಲಾಲ್
ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಸಹ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು, ‘ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇಶದ ಪ್ರಗತಿಗಾಗಿ ನಿಮ್ಮ ಅವಿರತ ಬದ್ಧತೆಯು ಕೋಟ್ಯಂತರ ಜನರಿಗೆ ಸ್ಫೂರ್ತಿಯನ್ನು ನೀಡುತ್ತಲೇ ಬಂದಿದೆ. ಈ ವರ್ಷವು ನಿಮಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ರಾಷ್ಟ್ರ ಸೇವೆಯಲ್ಲಿ ನಿರಂತರ ಯಶಸ್ಸನ್ನು ತಂದುಕೊಡಲಿ’ ಎಂದಿದ್ದಾರೆ.
Wishing our Honourable Prime Minister, Shri Narendra Modi Ji, a very happy birthday. Your tireless commitment to the progress of our country continues to inspire millions. May this year bring you good health, strength and continued success in your service to the nation.… pic.twitter.com/y9xzAMlaXS
— Mohanlal (@Mohanlal) September 17, 2026
ಕಮಲ್ ಹಾಸನ್
ನಟ ಕಮಲ್ ಹಾಸನ್ ಸಹ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ಮುಂಬರುವ ವರ್ಷವು ನಿಮಗೆ ಉತ್ತಮ ಆರೋಗ್ಯ, ಶಕ್ತಿ ಹಾಗೂ ನಮ್ಮ ಮಹಾನ್ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನಿರಂತರ ಅವಕಾಶಗಳನ್ನು ತರಲಿ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಸರಳವಾಗಿ ವಿಶ್ ಮಾಡಿದ್ದಾರೆ ಕಮಲ್ ಹಾಸನ್.
My warmest wishes to Hon’ble Prime Minister Thiru @narendramodi ji on his birthday.
May the year ahead bring you good health, strength and continued opportunities to serve our great nation. @PMOindia
— Kamal Haasan (@ikamalhaasan) September 17, 2026
ಅನುಪಮ್ ಖೇರ್
ತಮ್ಮನ್ನು ತಾವು ‘ಮೋದಿಯ ಭಕ್ತ’ ಎಂದೇ ಕರೆದುಕೊಳ್ಳುವ ಬಾಲಿವುಡ್ ನಟ ಅನುಪಮ್ ಖೇರ್ ಅವರು ಸಹ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದು, ‘ಮೋದಿ ಅವರು ಕೇವಲ ಭಾರತೀಯರಿಗೆ ಮಾತ್ರವೇ ಅಲ್ಲ, ವಿಶ್ವದ ಹಲವು ರಾಷ್ಟ್ರಗಳ ಜನರಿಗೆ ಮಾದರಿ ಹಾಗೂ ಸ್ಪೂರ್ತಿ ಆಗಿದ್ದಾರೆ. ಮೊದಲ ಬಾರಿಗೆ ಅಹಮದಾಬಾದ್ನಲ್ಲಿ ಮೋದಿ ಅವರನ್ನು ಭೇಟಿ ಆದ ಬಗ್ಗೆಯೂ ಸಹ ಅವರು ಬರೆದುಕೊಂಡಿದ್ದಾರೆ. ಅನುಪಮ್ ಅವರ ಟ್ವೀಟ್ ಇಲ್ಲಿದೆ…
भारत के माननीय एवं अत्यंत प्रिय प्रधानमंत्री श्री नरेंद्र मोदी जी को जन्मदिन की हार्दिक शुभकामनाएँ!🙏🕉 ईश्वर आपको लंबा, स्वस्थ और आनंदमय जीवन प्रदान करे। आप केवल करोड़ों भारतीयों के लिए ही नहीं, बल्कि विश्वभर में विभिन्न देशों के असंख्य लोगों के लिए भी प्रेरणा का स्रोत हैं।🫡… pic.twitter.com/kDY9v1Uein
— Anupam Kher (@AnupamPKher) September 17, 2026




