AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳುವ ಅಭ್ಯಾಸ ಅಪಾಯಕಾರಿಯೇ ತಿಳಿದುಕೊಳ್ಳಿ!

ಕಾಲು ಮಡಚಿ ಅಥವಾ ಕಾಲು ಮೇಲೆ ಕಾಲು ಕುಳಿತುಕೊಳ್ಳುವುದು ಸಾಮಾನ್ಯವಾಗಿ ಎಲ್ಲರಿಗೂ ಅಪಾಯಕಾರಿ ಅಲ್ಲ. ಆದರೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮೊಣಕಾಲು, ಸೊಂಟ ಮತ್ತು ಬೆನ್ನಿನಲ್ಲಿ ಬಿಗಿತ ಅಥವಾ ಅಸ್ವಸ್ಥತೆ ಉಂಟಾಗಬಹುದು. ಈಗಾಗಲೇ ಸಂಧಿವಾತ ಅಥವಾ ಮೊಣಕಾಲಿನ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಹಾಗಾದರೆ ಕಾಲು ಮಡಚಿ ಕುಳಿತುಕೊಂಡಾಗ ಮೊಣಕಾಲಿಗೆ ತೊಂದರೆ ಉಂಟಾಗುತ್ತದೆಯೇ, ಈ ಅಭ್ಯಾಸ ಬೆನ್ನು ನೋವಿಗೆ ಕಾರಣವೇ ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.

ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳುವ ಅಭ್ಯಾಸ ಅಪಾಯಕಾರಿಯೇ ತಿಳಿದುಕೊಳ್ಳಿ!
Sitting Cross LeggedImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 17, 2026 | 6:43 PM

Share

ಮನೆಯಲ್ಲೋ, ನೆಲದಲ್ಲೋ ಕಾಲು ಮಡಚಿಕೊಂಡು ಅಥವಾ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ನಮ್ಮಲ್ಲಿ ಸಾಮಾನ್ಯ ಅಭ್ಯಾಸ. ಆದರೆ ಗಂಟೆಗಟ್ಟಲೆ ಅದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಎಲ್ಲರಿಗೂ ಆರಾಮದಾಯಕವಾಗಿರಬೇಕೆಂದಿಲ್ಲ. ವಿಶೇಷವಾಗಿ ಈಗಾಗಲೇ ಮೊಣಕಾಲು ನೋವು, ಸಂಧಿವಾತ, ಕಾರ್ಟಿಲೇಜ್ ಸಮಸ್ಯೆ, ಸೊಂಟದ ಬಿಗಿತ ಇರುವವರಲ್ಲಿ ಇಂತಹ ಭಂಗಿಗಳು ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಹಾಗಾದರೆ ಕಾಲು ಮಡಚಿ ಕುಳಿತುಕೊಂಡಾಗ ಮೊಣಕಾಲಿಗೆ ತೊಂದರೆ ಉಂಟಾಗುತ್ತದೆಯೇ, ಈ ಅಭ್ಯಾಸ ಬೆನ್ನು ನೋವಿಗೆ ಕಾರಣವೇ ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.

ಮೊಣಕಾಲಿನ ಮೇಲೆ ಉಂಟಾಗುವ ಪರಿಣಾಮ?

ಕಾಲು ಮಡಚಿ ಅಥವಾ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವಾಗ ಮೊಣಕಾಲುಗಳು ಹೆಚ್ಚಿನ ಪ್ರಮಾಣದಲ್ಲಿ ಬಾಗಿರುತ್ತವೆ. ಸ್ವಲ್ಪ ಸಮಯ ಹೀಗೆ ಕುಳಿತುಕೊಳ್ಳುವುದು ಆರೋಗ್ಯವಂತ ವ್ಯಕ್ತಿಗೆ ಸಾಮಾನ್ಯವಾಗಿ ಸಮಸ್ಯೆಯಾಗುವುದಿಲ್ಲ. ಆದರೆ ದೀರ್ಘಕಾಲ ಒಂದೇ ಭಂಗಿಯಲ್ಲಿ ಇದ್ದರೆ ಮೊಣಕಾಲಿನಲ್ಲಿ ಬಿಗಿತ, ಅಸ್ವಸ್ಥತೆ ಅಥವಾ ನೋವು ಕಾಣಿಸಿಕೊಳ್ಳಬಹುದು. ಈಗಾಗಲೇ ಮೊಣಕಾಲಿನ ಸಮಸ್ಯೆ ಇರುವವರಲ್ಲಿ ಇಂತಹ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರಬಹುದು.

ಸೊಂಟದ ಮೇಲೂ ಪರಿಣಾಮ ಬಿರಬಹುದು

ನೆಲದ ಮೇಲೆ ಕಾಲು ಮಡಚಿ ಅಥವಾ ಕಾಲ ಮೇಲೆ ಕಾಲು ಹಾಕಿ ಚೇರ್ ಮೇಲೆ ಕುಳಿತಾಗ ಮೊಣಕಾಲುಗಳ ಜೊತೆಗೆ ಸೊಂಟದ ಸಂಧಿಗಳೂ ನಿರ್ದಿಷ್ಟ ಕೋನದಲ್ಲಿ ಇರುತ್ತವೆ. ಸೊಂಟದಲ್ಲಿ ಬಿಗಿತ ಇರುವವರಿಗೆ ಹೆಚ್ಚು ಹೊತ್ತು ಹೀಗೆ ಕುಳಿತುಕೊಳ್ಳುವುದು ನೋವು ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು. ಆದ್ದರಿಂದ ಮೊಣಕಾಲಿನ ಜೊತೆಗೆ ಸೊಂಟದಲ್ಲೂ ನೋವು ಅಥವಾ ಬಿಗಿತ ಉಂಟಾಗುತ್ತಿದೆಯೇ ಎಂಬುದನ್ನು ಗಮನಿಸುವುದು ಮುಖ್ಯ.

ಇದನ್ನೂ ಓದಿ: ಜಿಮ್‌ಗೆ ಹೋಗುವವರು ತಪ್ಪದೇ ತಿಳಿಯಿರಿ: ವರ್ಕೌಟ್‌ ಮಾಡುವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?

ಬೆನ್ನು ನೋವಿಗೂ ಕಾರಣವಾಗಬಹುದೇ?

ಕಾಲು ಮಡಚಿಕೊಂಡು ಕುಳಿತುಕೊಂಡಾಗ ಕೆಲವರು ತಿಳಿಯದೆ ಮುಂದೆ ಬಾಗುತ್ತಾರೆ. ಇದೇ ಸಮಯದಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸಿದರೆ ಕುತ್ತಿಗೆ, ಭುಜ ಮತ್ತು ಸೊಂಟದ ಭಾಗದ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವ ಬದಲು ಆಗಾಗ ಭಂಗಿ ಬದಲಿಸುವುದು ಮತ್ತು ಮಧ್ಯದಲ್ಲಿ ಎದ್ದು ನಡೆಯುವುದು ಉತ್ತಮ ಅಭ್ಯಾಸ.

ಮೊಣಕಾಲಿನ ಸಮಸ್ಯೆ ಇರುವವರು ಎಚ್ಚರ ವಹಿಸಬೇಕು

ಸಂಧಿವಾತ, ಕಾರ್ಟಿಲೇಜ್ ಸಮಸ್ಯೆ, ನಿರಂತರ ಮೊಣಕಾಲು ನೋವು, ಬಿಗಿತ ಇರುವವರು ನೆಲದ ಮೇಲೆ ಹೆಚ್ಚು ಹೊತ್ತು ಕಾಲು ಮಡಚಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಆರಾಮದಾಯಕವಾಗಬಹುದು. ಕುಳಿತ ನಂತರ ಎದ್ದು ನಿಲ್ಲಲು ಕಷ್ಟವಾಗುವುದು, ಮೆಟ್ಟಿಲು ಹತ್ತುವಾಗ ನೋವು, ಮೊಣಕಾಲಿನಲ್ಲಿ ಊತ ಅಥವಾ ಚಲಿಸುವಾಗ ನೋವು ಹೆಚ್ಚಾಗುವುದು ಕಂಡುಬಂದರೆ ನಿರ್ಲಕ್ಷಿಸಬಾರದು.

ಪ್ರತಿ 30 ನಿಮಿಷಕ್ಕೊಮ್ಮೆ ಎದ್ದೇಳಿ

ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವ ಬದಲು ಸಾಧ್ಯವಾದಷ್ಟು ನಿಯಮಿತವಾಗಿ ಸ್ಥಾನ ಬದಲಿಸಿ. ಸುಮಾರು 30 ನಿಮಿಷಗಳಿಗೊಮ್ಮೆ ಎದ್ದು ಕೆಲವು ನಿಮಿಷ ನಡೆಯುವುದು ಸಹಾಯಕವಾಗಬಹುದು. ಆದರೆ ಎಲ್ಲರಿಗೂ 30 ನಿಮಿಷ ಎಂಬ ಒಂದೇ ನಿಯಮ ಅನ್ವಯಿಸುವುದಿಲ್ಲ. ನೋವು ಅಥವಾ ಬಿಗಿತ ಆರಂಭವಾಗುವ ಮೊದಲೇ ಭಂಗಿ ಬದಲಿಸುವುದು ಉತ್ತಮ.

ಕಾಲು ಮಡಚಿ ಕುಳಿತುಕೊಳ್ಳುವುದನ್ನು ಸಂಪೂರ್ಣ ಬಿಡಬೇಕೇ?

ಅಗತ್ಯವಿಲ್ಲ. ಮೊಣಕಾಲು ಮತ್ತು ಸೊಂಟ ಆರೋಗ್ಯವಾಗಿದ್ದು ಯಾವುದೇ ನೋವು ಇಲ್ಲದಿದ್ದರೆ ಕೆಲಕಾಲ ಕಾಲು ಮಡಚಿ ಕುಳಿತುಕೊಳ್ಳುವುದರಿಂದಲೇ ಮೊಣಕಾಲು ಹಾಳಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮುಖ್ಯವಾದದ್ದು ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಚಲನೆಯಿಲ್ಲದೆ ಕುಳಿತುಕೊಳ್ಳದಿರುವುದು. ಅಸ್ವಸ್ಥತೆ ಕಂಡುಬಂದರೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಅಥವಾ ಕಾಲುಗಳನ್ನು ಆರಾಮದಾಯಕವಾಗಿ ಚಾಚುವುದು ಉತ್ತಮ.

ಮೊಣಕಾಲಿನ ಆರೋಗ್ಯ ಕಾಪಾಡಲು ಏನು ಮಾಡಬೇಕು?

ನಿಯಮಿತವಾಗಿ ನಡೆಯುವುದು, ಕಾಲು ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಮಾಡುವುದು, ದೇಹದ ತೂಕ ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಮತ್ತು ದಿನವಿಡೀ ಚಟುವಟಿಕೆಯಿಂದಿರುವುದು ಮೊಣಕಾಲಿನ ಆರೋಗ್ಯಕ್ಕೆ ಸಹಾಯಕ. ನೋವು ಉಂಟುಮಾಡುವ ಭಂಗಿಯನ್ನು ಬಲವಂತವಾಗಿ ಮುಂದುವರಿಸಬಾರದು.

ಈ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ

ನಿರಂತರ ಮೊಣಕಾಲು ನೋವು, ಊತ, ಮೊಣಕಾಲು ಲಾಕ್ ಆಗುವ ಅನುಭವ, ನಡೆಯಲು ಅಥವಾ ಮೆಟ್ಟಿಲು ಹತ್ತಲು ಕಷ್ಟವಾಗುವುದು, ನೆಲದಿಂದ ಅಥವಾ ಕುರ್ಚಿಯಿಂದ ಎದ್ದು ನಿಲ್ಲಲು ತೊಂದರೆ ಇತ್ಯಾದಿ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಮುಖ್ಯವಾಗಿ, ಕಾಲು ಮಡಚಿ ಕುಳಿತುಕೊಳ್ಳುವುದೇ ಮೊಣಕಾಲು ಹಾಳಾಗಲು ಏಕೈಕ ಕಾರಣವಲ್ಲ. ಆದರೆ ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಈಗಾಗಲೇ ಕೀಲು ಸಮಸ್ಯೆ ಇರುವವರಲ್ಲಿ ಅಸ್ವಸ್ಥತೆಯನ್ನು ಹೆಚ್ಚಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!