AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಅಂಗಳದ ನಿತ್ಯಪುಷ್ಪ ಹೂವು ನಿಜಕ್ಕೂ ಶುಗರ್, ಬಿಪಿಗೆ ಮನೆಮದ್ದಾಗಿ ಉಪಯೋಗವಾಗುತ್ತದೆಯೇ ತಿಳಿದುಕೊಳ್ಳಿ

ಮನೆಯ ಅಂಗಳದಲ್ಲಿ ಕಾಣಸಿಗುವ ನಿತ್ಯಪುಷ್ಪ ಅಥವಾ ಸದಾಪುಷ್ಪ ಕೇವಲ ಅಲಂಕಾರಿಕ ಹೂವಲ್ಲ. ಇದರಲ್ಲಿ ಔಷಧೀಯ ಸಂಯುಕ್ತಗಳಿವೆ ಎಂಬ ಕಾರಣಕ್ಕೆ ಶುಗರ್ ಮತ್ತು ಬಿಪಿಗೆ ಕಂಟ್ರೋಲ್ ಮಾಡಲು ಬಳಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ನಿತ್ಯಪುಷ್ಪದ ಎಲೆ ಅಥವಾ ಹೂವನ್ನು ಕಷಾಯ ಮಾಡಿ ಸೇವಿಸುವುದರಿಂದ ಶುಗರ್, ಬಿಪಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆಯೇ, ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಮನೆಯ ಅಂಗಳದ ನಿತ್ಯಪುಷ್ಪ ಹೂವು ನಿಜಕ್ಕೂ ಶುಗರ್, ಬಿಪಿಗೆ ಮನೆಮದ್ದಾಗಿ ಉಪಯೋಗವಾಗುತ್ತದೆಯೇ ತಿಳಿದುಕೊಳ್ಳಿ
Nityapushpa Flower BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 15, 2026 | 9:18 PM

Share

ಮನೆಯ ಅಂಗಳದಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಿತ್ಯಪುಷ್ಪ ಅಥವಾ ಸದಾಪುಷ್ಪ ಅಥವಾ ಬಿಳ್ಳೆ ಗನ್ನೇರು ಹೂವು ನೋಡಲು ಸುಂದರವಾಗಿರುತ್ತದೆ. ಆದರೆ ಇದೇ ಸಸ್ಯವನ್ನು ಆಯುರ್ವೇದದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತದೆ. ವಿಶೇಷವಾಗಿ ಮಧುಮೇಹ, ರಕ್ತದೊತ್ತಡ ಮತ್ತು ಚರ್ಮದ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ನಿತ್ಯಪುಷ್ಪ ಎಲೆ ಅಥವಾ ಹೂವನ್ನು ಕಷಾಯ ಮಾಡಿ ಕುಡಿದರೆ ಶುಗರ್, ಬಿಪಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆಯೇ, ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ನಿತ್ಯಪುಷ್ಪದಲ್ಲಿ ಏನಿದೆ?

ಸಾಮಾನ್ಯವಾಗಿ ನಿತ್ಯಪುಷ್ಪ ಸಸ್ಯವನ್ನು ವೈಜ್ಞಾನಿಕವಾಗಿ Catharanthus roseus ಎಂದು ಕರೆಯಲಾಗುತ್ತದೆ. ಇದರ ವಿವಿಧ ಭಾಗಗಳಲ್ಲಿ ವಿಂಕ್ರಿಸ್ಟಿನ್ ಮತ್ತು ವಿನ್‌ಬ್ಲಾಸ್ಟಿನ್ ಸೇರಿದಂತೆ ಹಲವು ಆಲ್ಕಲಾಯ್ಡ್‌ಗಳು ಕಂಡುಬರುತ್ತವೆ. ಈ ಸಂಯುಕ್ತಗಳಿಗೆ ಔಷಧೀಯ ಮಹತ್ವವಿದೆ. ಆದರೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಶುದ್ಧೀಕರಿಸಿದ ಔಷಧೀಯ ಸಂಯುಕ್ತಗಳನ್ನು ಮನೆಯಲ್ಲಿ ಸಸ್ಯದ ಎಲೆ ಅಥವಾ ಹೂವನ್ನು ಸೇವಿಸುವುದಕ್ಕೆ ಹೋಲಿಕೆ ಮಾಡಬಾರದು.

ಶುಗರ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆಯೇ?

ನಿತ್ಯಪುಷ್ಪ ಸಸ್ಯದ ಕೆಲವು ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್‌ ಮೇಲೆ ಪರಿಣಾಮ ಬೀರಬಹುದು. ಆದರೆ ಮಧುಮೇಹಕ್ಕೆ ಔಷಧಿಯಲ್ಲ. ಎಲೆ ಅಥವಾ ಹೂವನ್ನು ಕಷಾಯ ಮಾಡಿ ಕುಡಿಯುವುದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚುತ್ತದೆ ಮತ್ತು ಶುಗರ್ ಖಚಿತವಾಗಿ ನಿಯಂತ್ರಣವಾಗುತ್ತದೆ ಎಂದು ಹೇಳಲು ಸಾಕಷ್ಟು ಪುರಾವೆ ಇಲ್ಲ. ಆದ್ದರಿಂದ ವೈದ್ಯರು ಸೂಚಿಸಿರುವ ಮಧುಮೇಹದ ಔಷಧಿಗಳನ್ನು ಈ ಹೂವನ್ನು ಪರ್ಯಾಯವಾಗಿ ಬಳಸಬಾರದು.

ಇದನ್ನೂ ಓದಿ: ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳು: ರಕ್ತಹೀನತೆ ಇರುವವರು ಈ ತಪ್ಪು ಮಾಡಬೇಡಿ

ಬಿಪಿಯನ್ನು ನಿಯಂತ್ರಿಸಲು ಸಹಕಾರಿಯೇ?

ನಿತ್ಯಪುಷ್ಪ ಹೂವು ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಕುರಿತು ಕೆಲವು ಅಧ್ಯಯನಗಳಿವೆ. ಆದರೆ ಇದನ್ನು ಬಿಪಿ ಕಡಿಮೆ ಮಾಡಲು ಮನೆಮದ್ದಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು ಸ್ವಯಂಪ್ರೇರಿತವಾಗಿ ಈ ಹೂವನ್ನು ಸೇವಿಸುವುದರಿಂದ ರಕ್ತದೊತ್ತಡದಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.

ಚರ್ಮಕ್ಕೆ ಹಚ್ಚಬಹುದೇ?

ನಿತ್ಯಪುಷ್ಪ ಹೂವಿನಲ್ಲಿ ಕೆಲವು ಸಸ್ಯ ಸಂಯುಕ್ತಗಳಿಗೆ ಉತ್ಕರ್ಷಣ ನಿರೋಧಕ ಮತ್ತು ಇತರ ಜೈವಿಕ ಗುಣಗಳಿವೆ ಎಂದು ಅಧ್ಯಯನಗಳು ಸೂಚಿಸಿವೆ. ಆದರೆ ಮೊಡವೆ, ಕಪ್ಪು ಕಲೆ ಅಥವಾ ಚರ್ಮದ ಸಮಸ್ಯೆಗಳಿಗೆ ಇದರ ಎಲೆ ಅಥವಾ ಹೂವಿನ ಪೇಸ್ಟ್‌ನ್ನು ನೇರವಾಗಿ ಹಚ್ಚುವುದು ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಎಂದು ಹೇಳಲು ಸಾಧ್ಯವಿಲ್ಲ. ಇದರ ಪೇಸ್ಟ್‌ನ್ನು ಮುಖಕ್ಕೆ ಹಚ್ಚುವುದರಿಂದ ಕೆಲವರಲ್ಲಿ ಚರ್ಮದ ಕಿರಿಕಿರಿ ಅಥವಾ ಅಲರ್ಜಿ ಉಂಟಾಗಬಹುದು.

ನಿತ್ಯಪುಷ್ಪ ಔಷಧೀಯ ಸಾಮರ್ಥ್ಯ ಹೊಂದಿರುವ ಸಸ್ಯವಾಗಿದ್ದರೂ, ಎಲ್ಲರಿಗೂ ಸುರಕ್ಷಿತ ಎಂದು ಭಾವಿಸಬಾರದು. ಮಧುಮೇಹ ಅಥವಾ ಬಿಪಿ ನಿಯಂತ್ರಣಕ್ಕೆ ವೈದ್ಯರು ಸೂಚಿಸಿದ ಔಷಧಿ, ಆಹಾರ ಕ್ರಮ, ವ್ಯಾಯಾಮ ಮತ್ತು ನಿಯಮಿತ ತಪಾಸಣೆಗಳೇ ಮುಖ್ಯ. ನಿತ್ಯಪುಷ್ಪವನ್ನು ಔಷಧಿಯಾಗಿ ಬಳಸುವ ಯೋಚನೆ ಇದ್ದರೆ ಅರ್ಹ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಗಮನಿಸಿ: ಈ ಲೇಖನದಲ್ಲಿರುವ ವಿಷಯಗಳು ಸಾಮಾನ್ಯ ಆರೋಗ್ಯ ಮಾಹಿತಿಯಾಗಿದ್ದು, ಯಾವುದೇ ಸಸ್ಯ ಅಥವಾ ಮನೆಮದ್ದನ್ನು ವೈದ್ಯರ ಸಲಹೆಯಿಲ್ಲದೆ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬೇಡಿ.

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು