AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6000 ರನ್..! ಹೊಸ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 32 ಎಸೆತಗಳಲ್ಲಿ 82 ರನ್ ಬಾರಿಸಿ ಭಾರತಕ್ಕೆ ಸುಲಭ ಗೆಲುವು ತಂದರು. 22 ಎಸೆತಗಳಲ್ಲಿ ಅಬ್ಬರದ ಅರ್ಧಶತಕ ಗಳಿಸಿ ದಾಖಲೆ ಬರೆದರು. ಅವರು 6000 ಟಿ20 ರನ್ ಪೂರೈಸಿದ ವೇಗದ ಏಷ್ಯನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು ಮತ್ತು 250+ ಸ್ಟ್ರೈಕ್ ರೇಟ್‌ನೊಂದಿಗೆ ಅತಿ ಹೆಚ್ಚು 50+ ಸ್ಕೋರ್‌ಗಳ ಭಾರತೀಯ ದಾಖಲೆ ಮುರಿದರು.

ಪೃಥ್ವಿಶಂಕರ
|

Updated on: Sep 14, 2026 | 5:17 PM

Share
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ ದಾಖಲೆಯ ಇನ್ನಿಂಗ್ಸ್ ಆಡಿದರು. 157 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಒರ ಅಭಿಷೇಕ್ ಕೇವಲ 22 ಎಸೆತಗಳಲ್ಲಿ ತಮ್ಮ ಅಬ್ಬರದ ಅರ್ಧಶತಕ ಪೂರೈಸಿದರು. ಅಂತಿಮವಾಗಿ 32 ಎಸೆತಗಳಲ್ಲಿ 82 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು(PC-PTI).

1 / 5
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 250 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ಅರ್ಧಶತಕವನ್ನು ಪೂರೈಸುವ ಮೂಲಕ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಈ ಸಾಧನೆ ಮಾಡಿದರು. ಅಭಿಷೇಕ್ ಈಗ 250 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ಭಾರತದ ಪರ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಹೊಂದಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೂಲಕ ಎರಡು ಬಾರಿ ಈ ಸಾಧನೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ(PC-PTI).

2 / 5
ಹಾಗೆಯೇ ಈ ಅರ್ಧಶತಕದ ಮೂಲಕ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್​ನಲ್ಲಿ 6000 ರನ್‌ಗಳನ್ನು ಸಹ ಪೂರ್ಣಗೊಳಿಸಿದರು. ಕೇವಲ 3420 ಎಸೆತಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ಅಭಿಷೇಕ್ ಇದರೊಂದಿಗೆ ಅತಿ ಕಡಿಮೆ ಎಸೆತಗಳಲ್ಲಿ 6000 ಟಿ20 ರನ್‌ಗಳನ್ನು ಪೂರೈಸಿದ ಮೊದಲ ಏಷ್ಯನ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ(PC-PTI).

3 / 5
ಈ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಸಿಕ್ಸ್ ಹೊಡೆಯುವ ತಮ್ಮ ಟ್ರೇಡ್‌ಮಾರ್ಕ್ ಸರಣಿಯನ್ನು ಮುಂದುವರಿಸಿದರು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಇದೀಗ ಅಭಿಷೇಕ್ ಶರ್ಮಾ ಜಂಟಿಯಾಗಿ ಪ್ರಥಮ ಸ್ಥಾನದಲ್ಲಿದ್ದಾರೆ(PC-PTI).

4 / 5
ಅಭಿಷೇಕ್ ಶರ್ಮಾ 12 ನೇ ಬಾರಿಗೆ ಈ ಸಾಧನೆ ಮಾಡಿದ್ದರೆ, ರೋಹಿತ್ ಶರ್ಮಾ ಕೂಡ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ 12 ಬಾರಿ ಸಿಕ್ಸರ್ ಬಾರಿಸಿದ್ದಾರೆ. ಕುತೂಹಲಕಾರಿಯಾಗಿ, ರೋಹಿತ್ ಶರ್ಮಾ ತಮ್ಮ 12 ಸಿಕ್ಸರ್‌ಗಳಿಗಾಗಿ 401 ಎಸೆತಗಳನ್ನು ಎದುರಿಸಿದ್ದರೆ, ಅಭಿಷೇಕ್ ಕೇವಲ 152 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ

ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ

ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ

ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು

ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು

ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ

SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್