ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್ ಮಾಡಿದ್ದು ಸರಿಯೇ? ಉತ್ತರಿಸಿದ ಪ್ರಥಮಾ ಪ್ರಸಾದ್
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಪ್ರಥಮಾ ಪ್ರಸಾದ್ ತಮ್ಮ ಪಯಣ, ಟಾಸ್ಕ್‌ಗಳ ಕುರಿತು ಮಾತನಾಡಿದ್ದಾರೆ. ವೈಷ್ಣವಿ ಅವರ ಉಡುಗೆ ಕುರಿತು ಮೂಡಿದ ಚರ್ಚೆಗೆ ಪ್ರತಿಕ್ರಿಯಿಸಿ, ಅದು ಅವರ ಅಭಿಪ್ರಾಯ, ಅಭಿರುಚಿ ಎಂದಿದ್ದಾರೆ. ಮೂರು ಬಾರಿ ಬಿಗ್ ಬಾಸ್ ಅವಕಾಶವನ್ನು ನಿರಾಕರಿಸಿದ್ದರೂ, ಈ ಬಾರಿ ಒಪ್ಪಿಕೊಂಡು ತಮ್ಮ ವೃತ್ತಿಜೀವನಕ್ಕೆ ವೇಗ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನಟಿ ಪ್ರಥಮಾ ಪ್ರಸಾದ್ ಅವರು ತಮ್ಮ ಬಿಗ್ ಬಾಸ್ ಅನುಭವ, ಕಾರ್ಯಗಳಲ್ಲಿನ ತಮ್ಮ ಸಾಮರ್ಥ್ಯ ಹಾಗೂ ವೈಷ್ಣವಿ ಅವರ ಉಡುಗೆ ಕುರಿತು ನಡೆದ ಚರ್ಚೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅವರ ಬಟ್ಟೆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ಅದು ಅವರ ಅಭಿಪ್ರಾಯ, ಅಭಿರುಚಿ” ಎಂದಿದ್ದಾರೆ.
ಇತ್ತೀಚೆಗೆ ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಅವರು ಕೆಲವು ಟಿಪ್ಸ್ ನೀಡಿದ್ದರು. ಈ ವೇಳೆ ಪ್ರಥಮಾ ಕೂಡ ಅಲ್ಲಿಯೇ ಇದ್ದರು. ಈ ಘಟನೆ ಬಗ್ಗೆ ಮಾತನಾಡಿರೋ ಪ್ರಥಮಾ, ‘ಹಾಗೆ ಹೇಳಿದ್ದು ಕೆಟ್ಟ ಉದ್ದೇಶದಿಂದ ಅಲ್ಲ ಎಂಬುದು ತಮ್ಮ ಅನಿಸಿಕೆ’ ಎಂದ ಪ್ರಥಮಾ ಅಭಿಪ್ರಾಯ ಪಟ್ಟಿದ್ದಾರೆ. ಬಿಗ್ ಬಾಸ್ ಅವಕಾಶವನ್ನು ಮೂರು ಬಾರಿ ನಿರಾಕರಿಸಿದ್ದ ಪ್ರಥಮಾ, ಈ ಬಾರಿ ತಮ್ಮ ವೃತ್ತಿಜೀವನಕ್ಕೆ ಇದು ವೇಗ ನೀಡಲಿದೆ ಎಂಬ ನಂಬಿಕೆಯಿಂದ ಒಪ್ಪಿಕೊಂಡಿದ್ದರು. ಆದರೆ, ಮೊದಲ ವಾರವೇ ಅವರು ಔಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

