ಪೊಲೀಸ್ ಅಂದ್ರೆ ಭಕ್ತಿನೂ ಇರಬೇಕು, ಭಯನೂ ಇರಬೇಕು: ಟಿ.ನರಸೀಪುರ ಇನ್ಸ್ಪೆಕ್ಟರ್ ಪರ ಡಿಕೆಶಿ ಬ್ಯಾಟಿಂಗ್
ವಿರೋಧ ಪಕ್ಷದ ನಾಯಕರು ಕರೆದುಕೊಂಡು ಹೋಗಿ ಪಾಪಾ ಮಹಾರಾಜರನ್ನು ಕರೆದುಕೊಂಡು ಹೋಗಿ ರಸ್ತೆಯಲ್ಲಿ ಇಳಿಸಿದ್ದಾರೆ. ಯಾಕೆ ಇಂತಹ ಮಟ್ಟಕ್ಕೆ ನಮ್ಮ ವಿಪಕ್ಷ ನಾಯಕರು ಇಳಿದ್ರು . ಇವೆಲ್ಲಾ ಪಂಚಾಯತಿ ಲೆವೆಲ್ ನಲ್ಲಿ ನಡೆಯೋ ಕೆಲಸಗಳು. ವಿಪಕ್ಷ ನಾಯಕ ಅನ್ನೋದು ಸಾಂವಿಧಾನಿಕ ಹುದ್ದೆ. ನಾನು ಅವರಿಂದ ಇನ್ನು ಎತ್ತರವಾಗಿ ನಾನು ನಿರೀಕ್ಷೆ ಮಾಡುತ್ತಿದ್ದೇವೆ. ಇದಕ್ಕೆಲ್ಲ ಅವರು ಇಳಿಯಬಾರದು ಎಂದು ಆರ್ ಅಶೋಕ್ಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಇನ್ಸ್ಪೆಕ್ಟರ್ ಧನಂಜಯ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 15): ಗಣೇಶ ಮೆರವಣಿಗೆ ವಿಚಾರವಾಗಿ ಮೈಸೂರಿನ ಟಿ. ನರಸೀಪುರ ಇನ್ಸ್ಪೆಕ್ಟರ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದು ಆಯೋಜನರಿಗೆ ಅವಾಜ್ ಹಾಕಿದ ಇನ್ಸ್ಪೆಕ್ಟರ್ ಧನಂಜಯ್ ನನ್ನು ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದಿದೆ. ಇನ್ನು ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಪೊಲೀಸ್ ಅಂದ್ರೆ ಭಕ್ತಿನೂ ಇರಬೇಕು ಭಯನೂ ಇರಬೇಕು. ಪೊಲೀಸರು ಅಂತ ತಪ್ಪು ಏನು ಮಾತನಾಡಿದ್ರು. ಪೊಲೀಸ್ ಭಾಷೆಯಲ್ಲಿ ಹೇಳಿದ್ರು. ಮುಂದಕ್ಕೆ ಗಲಾಟೆ ಆಗಬಾರದು ಅಂತ ಎಚ್ಚರಿಕೆ ಮಾತು ಹೇಳಿದ್ದಾರೆ. ಅಲ್ಲಿಗೆ ಇಲ್ಲಿಂದ ವಿರೋಧ ಪಕ್ಷದ ನಾಯಕರು ಕರೆದುಕೊಂಡು ಹೋಗಿ ಪಾಪಾ ಮಹಾರಾಜರನ್ನು ಕರೆದುಕೊಂಡು ಹೋಗಿ ರಸ್ತೆಯಲ್ಲಿ ಇಳಿಸಿದ್ದಾರೆ. ಯಾಕೆ ಇಂತಹ ಮಟ್ಟಕ್ಕೆ ನಮ್ಮ ವಿಪಕ್ಷ ನಾಯಕರು ಇಳಿದ್ರು . ಇವೆಲ್ಲಾ ಪಂಚಾಯತಿ ಲೆವೆಲ್ ನಲ್ಲಿ ನಡೆಯೋ ಕೆಲಸಗಳು. ವಿಪಕ್ಷ ನಾಯಕ ಅನ್ನೋದು ಸಾಂವಿಧಾನಿಕ ಹುದ್ದೆ. ನಾನು ಅವರಿಂದ ಇನ್ನು ಎತ್ತರವಾಗಿ ನಾನು ನಿರೀಕ್ಷೆ ಮಾಡುತ್ತಿದ್ದೇವೆ. ಇದಕ್ಕೆಲ್ಲ ಅವರು ಇಳಿಯಬಾರದು ಎಂದು ಆರ್ ಅಶೋಕ್ಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಇನ್ಸ್ಪೆಕ್ಟರ್ ಧನಂಜಯ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

