AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದಾಖಲೆಗಳಿದ್ರೆ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ವಿಳಾಸ ಬದಲಾವಣೆ ಸುಲಭ

ಪ್ರತಿಯೊಬ್ಬರ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಇದ್ದೆ ಇರುತ್ತದೆ. ಆದರೆ ನೀವೇನಾದ್ರೂ ಬೇರೆ ಏರಿಯಾಕ್ಕೆ ಅಥವಾ ನಗರಕ್ಕೆ ಸ್ಥಳಾಂತರಗೊಳ್ಳುತ್ತಿದ್ದರೆ ಗ್ಯಾಸ್ ಕನೆಕ್ಷನ್‌ ವಿಳಾಸವನ್ನು ಬದಲಾಯಿಸುವುದು ಅಗತ್ಯ. ಈ ಬದಲಾವಣೆಗೆ ನಿಮ್ಮ ಬಳಿ ಹೊಸ ವಿಳಾಸದ ಪುರಾವೆ, ಆಧಾರ್ ಕಾರ್ಡ್, ಬಾಡಿಗೆ ಮನೆ ಒಪ್ಪಂದ ಪತ್ರ, ಹಳೆಯ ಗ್ಯಾಸ್ ದಾಖಲೆಗಳು ನಿಮ್ಮ ಬಳಿ ಇರಲೇ ಬೇಕು. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಈ ದಾಖಲೆಗಳಿದ್ರೆ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ವಿಳಾಸ ಬದಲಾವಣೆ ಸುಲಭ
ಗ್ಯಾಸ್‌ ಸಿಲಿಂಡರ್‌ Image Credit source: Getty Images
ಸಾಯಿನಂದಾ
|

Updated on:Sep 17, 2026 | 7:10 PM

Share

ಮುಖ್ಯಾಂಶಗಳು

  • ಪ್ರತಿಯೊಬ್ಬರ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಇದ್ದೆ ಇರುತ್ತದೆ
  • ನಿಮ್ಮ ಗ್ಯಾಸ್ ಕನೆಕ್ಷನ್ ವಿಳಾಸ ಬದಲಾಯಿಸಲು ಅವಕಾಶವಿದೆ
  • ಈ ದಾಖಲೆಗಳಿದ್ರೆ ಎಲ್‌ಪಿಜಿ ಗ್ಯಾಸ್ ಕನೆಕ್ಷನ್‌ ವಿಳಾಸ ಬದಲಾವಣೆ ಸುಲಭ

ಗ್ಯಾಸ್ ಇಲ್ಲದೇ ಹೋದರೆ ಅಡುಗೆನೇ ಆಗಲ್ಲ. ಹೌದು, ಎಲ್‌ಪಿಜಿ ಗ್ಯಾಸ್ (LPG Gas) ಪ್ರತಿಯೊಬ್ಬರ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಗೃಹಬಳಕೆಗೆ ಮಾತ್ರವಲ್ಲ, ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನೇ ಬಳಸುತ್ತಾರೆ. ನಿಮ್ಮ ಗ್ಯಾಸ್ ಕನೆಕ್ಷನ್ ವಿಳಾಸ ಬದಲಾಯಿಸಲು ಅವಕಾಶವಿದೆ. ಪ್ರಸ್ತುತ ವಿತರಕರು ಹೊಸ ವಿಳಾಸಕ್ಕೂ ಗ್ಯಾಸ್ ಸಿಲಿಂಡರ್ ತಲುಪಿಸುತ್ತಾರೆ ಎಂದಾದರೆ ವಿಳಾಸ ಬದಲಾವಣೆ ಪ್ರಕ್ರಿಯೆ ತುಂಬಾ ಸುಲಭ. ಈ ಕೆಲವು ದಾಖಲೆಗಳು ನಿಮ್ಮ ಬಳಿಯಿದ್ದರೆ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದು.

ವಿಳಾಸ ಬದಲಾವಣೆಗೆ ಬೇಕಾಗುವ ಅಗತ್ಯ ದಾಖಲೆಗಳು

  • ಹೊಸ ವಿಳಾಸದ ಪುರಾವೆ: ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದ ಪತ್ರ, ನೀರಿನ ಬಿಲ್, ವಿದ್ಯುತ್ ಬಿಲ್ ಅಥವಾ ಪಾಸ್‌ಪೋರ್ಟ್.
  • ಹಳೆಯ ಗ್ಯಾಸ್ ದಾಖಲೆಗಳು: ಗ್ಯಾಸ್ ಪಾಸ್‌ಬುಕ್ ಹಾಗೂ ಗ್ರಾಹಕ ಸಂಖ್ಯೆ.
  • ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ.

ಬೇರೆ ಏರಿಯಾಕ್ಕೆ ಶಿಫ್ಟ್ ಆಗುತ್ತಿದ್ದರೆ ಗ್ಯಾಸ್ ಕಲೆಕ್ಷನ್ ವಿಳಾಸ ಬದಲಾಯಿಸುವುದು ಹೇಗೆ?

ಹಂತ 1: ನೀವು ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಟ್ರಾನ್ಸ್‌ಫರ್ ಟರ್ಮಿನೇಷನ್ ವೋಚರ್ ಅಥವಾ ವರ್ಗಾವಣೆ ವಿನಂತಿ ಫಾರ್ಮ್‌ ಪಡೆದುಕೊಳ್ಳಿ.

ಹಂತ 2: ನಿಮ್ಮ ಹೊಸ ಏರಿಯಾದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಟ್ರಾನ್ಸ್‌ಫರ್ ಟರ್ಮಿನೇಷನ್ ವೋಚರ್ ಸಲ್ಲಿಸಿ.

ಹಂತ 3: ನಿಮ್ಮ ಹೊಸ ವಿಳಾಸದ ದಾಖಲೆ ಹಾಗೂ ಕೆವೈಸಿ ಫಾರ್ಮ್ ಸಲ್ಲಿಸಿದರೆ, ಹೊಸ ವಿಳಾಸ ಅಪ್‌ಡೇಟ್ ಆಗುತ್ತದೆ. ಸಿಲಿಂಡರ್ ಬುಕ್ ಮಾಡಿದಾಗ ಹೊಸ ವಿಳಾಸಕ್ಕೆ ಸಿಲಿಂಡರ್ ಬರುತ್ತದೆ.

ಇದನ್ನೂ ಓದಿ: ಗ್ರಾಮೀಣ ಭಾಗದಲ್ಲಿ ಎಲ್​ಪಿಜಿ ರೀಫಿಲ್ ಬುಕಿಂಗ್​ಗಳ ನಡುವಿನ ಅಂತರ 45 ರಿಂದ 25 ದಿನಗಳಿಗೆ ಇಳಿಕೆ; ದೇಶದೆಲ್ಲೆಡೆ ಏಕರೀತಿಯ ಬುಕಿಂಗ್ ನಿಯಮ

ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುತ್ತಿದ್ದರೆ ಗ್ಯಾಸ್ ಕಲೆಕ್ಷನ್ ವಿಳಾಸ ಬದಲಾವಣೆ ಹೇಗೆ?

ಹಂತ 1: ಮೊದಲಿಗೆ ನಿಮ್ಮ ಹಳೆಯ ಸಿಲಿಂಡರ್ ಹಾಗೂ ಪ್ರೆಶರ್ ರೆಗ್ಯುಲೇಟರ್ ಏಜೆನ್ಸಿಗೆ ಹಿಂದಿರುಗಿಸಿ ನೀವಿಟ್ಟ ಡೆಪಾಸಿಟ್ ಹಣ ಪಡೆದುಕೊಳ್ಳಿ.

ಹಂತ 2: ನಿಮಗೆ ಸಿಗುವ ಟರ್ಮಿನೇಷನ್ ವೋಚರ್ ಬಳಸಿಕೊಂಡು ನೀವು ಶಿಫ್ಟ್ ಆದ ನಗರದ ಗ್ಯಾಸ್ ಏಜೆನ್ಸಿಯಲ್ಲಿ ಹೊಸ ಕನೆಕ್ಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ.

ಹಂತ 3: ಗ್ಯಾಸ್ ಏಜೆನ್ಸಿಯಲ್ಲಿ ಹೊಸ ಕನೆಕ್ಷನ್ ಪ್ರಕ್ರಿಯೆಗೆ ನೀವು ಮೇಲೆ ಹೇಳಿದ ದಾಖಲೆಗಳನ್ನು ನೀಡುವುದು ಅಗತ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Thu, 17 September 26

Follow Us
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ