AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬಾರದು ಏಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬಾರದು ಎಂದು ಮನೆಯ ಹಿರಿಯರು ಹೇಳುವುದನ್ನು ಕೇಳಿರಬಹುದು. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಕಡಿಮೆ ತಾಪಮಾನದಲ್ಲಿ ಆಲೂಗಡ್ಡೆಯಲ್ಲಿರುವ ಪಿಷ್ಟ ಸಕ್ಕರೆಯಾಗಿ ಬದಲಾಗಬಹುದು. ಇದರಿಂದ ರುಚಿ ಮತ್ತು ಅಡುಗೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾದರೆ ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸಬೇಕು?.

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬಾರದು ಏಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ
Potato
ಮಾಲಾಶ್ರೀ ಅಂಚನ್​
| Edited By: |

Updated on: Sep 16, 2026 | 11:10 AM

Share

ಮುಖ್ಯಾಂಶಗಳು

  • ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಏಕೆ ಇಡಬಾರದು?
  • ಫ್ರಿಜ್‌ನಲ್ಲಿಟ್ಟ ಆಲೂಗಡ್ಡೆಗೆ ಏನಾಗುತ್ತದೆ?
  • ಆಲೂಗಡ್ಡೆ ಸಂಗ್ರಹಿಸುವ ಸರಿಯಾದ ವಿಧಾನ ಯಾವುದು?

ತರಕಾರಿಗಳನ್ನು ಹೆಚ್ಚು ದಿನ ತಾಜಾವಾಗಿ ಇಡಲು ನಾವು ಸಾಮಾನ್ಯವಾಗಿ ಫ್ರಿಜ್‌ ಬಳಸುತ್ತೇವೆ. ಕ್ಯಾರೆಟ್‌, ಬೀನ್ಸ್‌, ಹಸಿರು ಸೊಪ್ಪು (Green Leafy) ಸೇರಿದಂತೆ ಹಲವು ತರಕಾರಿಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸುವುದು ಸಾಮಾನ್ಯ. ಆದರೆ ಆಲೂಗಡ್ಡೆಯನ್ನು ಮಾತ್ರ ಸಾಮಾನ್ಯವಾಗಿ ಫ್ರಿಜ್‌ನೊಳಗೆ ಇಡುವುದಿಲ್ಲ. ಇದಕ್ಕೆ ಕೇವಲ ಹಳೆಯ ಪದ್ಧತಿಯಷ್ಟೇ ಕಾರಣವಲ್ಲ. ಆಲೂಗಡ್ಡೆಯ ರುಚಿ ಮತ್ತು ವಿನ್ಯಾಸದ ಮೇಲೆ ತಂಪಾದ ವಾತಾವರಣ ಪರಿಣಾಮ ಬೀರುವುದೇ ಪ್ರಮುಖ ಕಾರಣವಾಗಿದೆ.

ಫ್ರಿಜ್‌ನಲ್ಲಿ ಇಟ್ಟರೆ ಏನಾಗುತ್ತದೆ?

ಆಲೂಗಡ್ಡೆಯಲ್ಲಿ ಪಿಷ್ಟ ಅಂಶ ಹೆಚ್ಚಾಗಿರುತ್ತದೆ. ಫ್ರಿಜ್‌ನಲ್ಲಿರುವ ಕಡಿಮೆ ತಾಪಮಾನದಲ್ಲಿ ಈ ಪಿಷ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಪಿಷ್ಟದ ಒಂದು ಭಾಗ ಸಕ್ಕರೆಯಾಗಿ ಪರಿವರ್ತನೆಯಾಗುವುದರಿಂದ ಆಲೂಗಡ್ಡೆಯಲ್ಲಿ ಸಿಹಿ ರುಚಿ ಹೆಚ್ಚಾಗಬಹುದು. ಪರಿಣಾಮವಾಗಿ ಅದರ ಮೂಲ ರುಚಿ ಮತ್ತು ವಿನ್ಯಾಸ ಬದಲಾಗುತ್ತದೆ. ಫ್ರಿಜ್‌ನಲ್ಲಿ ಇಟ್ಟ ಆಲೂಗಡ್ಡೆ ಬೇಯಿಸಿದಾಗ ಅಥವಾ ಕರಿದಾಗ ಸಾಮಾನ್ಯ ಆಲೂಗಡ್ಡೆಗಿಂತ ಸ್ವಲ್ಪ ವಿಭಿನ್ನವಾಗಿ ಕಾಣಿಸಬಹುದು ಮತ್ತು ತಿನ್ನುವಾಗಲೂ ವ್ಯತ್ಯಾಸ ಗೊತ್ತಾಗಬಹುದು.

ಇದರಿಂದ ಆಲೂಗಡ್ಡೆ ತಕ್ಷಣವೇ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಎಂದರ್ಥವಲ್ಲ. ಆದರೆ ಅದರ ರುಚಿ ಮತ್ತು ಅಡುಗೆಯ ಗುಣಮಟ್ಟದಲ್ಲಿ ಬದಲಾವಣೆ ಉಂಟಾಗಬಹುದು. ವಿಶೇಷವಾಗಿ ಕರಿದ ಆಲೂಗಡ್ಡೆ ಅಥವಾ ಕೆಲವು ನಿರ್ದಿಷ್ಟ ಅಡುಗೆಗಳಲ್ಲಿ ಈ ಬದಲಾವಣೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಆಲೂಗಡ್ಡೆ ಸಂಗ್ರಹಿಸುವ ಸರಿಯಾದ ವಿಧಾನ ಯಾವುದು?

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿಡುವ ಬದಲು ತಂಪಾದ, ಕತ್ತಲೆಯ ಮತ್ತು ಗಾಳಿ ಸರಿಯಾಗಿ ಹರಿದಾಡುವ ಸ್ಥಳದಲ್ಲಿ ಇಡುವುದು ಸೂಕ್ತ. ಕಾಗದದ ಚೀಲ, ಜಾಲರಿಯ ಚೀಲ, ಬುಟ್ಟಿ ಅಥವಾ ಗಾಳಿಯಾಡುವ ರಟ್ಟಿನ ಪೆಟ್ಟಿಗೆಯಲ್ಲಿ ಸಂಗ್ರಹಿಸಬಹುದು. ಪ್ಲಾಸ್ಟಿಕ್‌ ಚೀಲದಲ್ಲಿ ಆಲೂಗಡ್ಡೆಯನ್ನು ಮುಚ್ಚಿಡುವುದನ್ನು ತಪ್ಪಿಸುವುದು ಉತ್ತಮ. ಗಾಳಿ ಸರಿಯಾಗಿ ಹರಿಯದಿದ್ದರೆ ಅವು ಬೇಗ ಹಾಳಾಗುವ ಸಾಧ್ಯತೆಯಿದೆ.

ನೂರು ವರ್ಷ ಆರೋಗ್ಯವಾಗಿರಲು 5 ಪ್ರಾಚೀನ ಸೂತ್ರಗಳು; ನೀರು ಕುಡಿಯುವುದರಿಂದ ಉಪವಾಸದವರೆಗೆ

ಸಂಗ್ರಹಿಸುವ ಮೊದಲು ಆಲೂಗಡ್ಡೆಯನ್ನು ಒಮ್ಮೆ ಪರಿಶೀಲಿಸುವುದೂ ಮುಖ್ಯ. ಕೀಟಗಳಿಂದ ಹಾನಿಯಾಗಿರುವ, ಕೊಳೆತಿರುವ ಅಥವಾ ಗಾಯಗೊಂಡಿರುವ ಆಲೂಗಡ್ಡೆಯನ್ನು ಉಳಿದವುಗಳೊಂದಿಗೆ ದೀರ್ಘಕಾಲ ಇಡಬಾರದು. ಹಾನಿಗೊಳಗಾದ ಭಾಗವನ್ನು ತೆಗೆದುಹಾಕಿ, ಉತ್ತಮ ಭಾಗವನ್ನು ಸಾಧ್ಯವಾದಷ್ಟು ಬೇಗ ಬಳಸುವುದು ಸೂಕ್ತ.

ಬೆಳಕಿನಿಂದಲೂ ದೂರವಿಡಿ

ಆಲೂಗಡ್ಡೆಯನ್ನು ಕೇವಲ ತಂಪಾದ ಸ್ಥಳದಲ್ಲಿ ಇಡುವುದಷ್ಟೇ ಸಾಕಾಗುವುದಿಲ್ಲ. ನೇರ ಬೆಳಕು ಬೀಳದಂತೆ ನೋಡಿಕೊಳ್ಳಬೇಕು. ಹೆಚ್ಚು ಬೆಳಕಿಗೆ ಒಡ್ಡಿಕೊಂಡಾಗ ಆಲೂಗಡ್ಡೆಯ ಹೊರಭಾಗ ಹಸಿರು ಬಣ್ಣಕ್ಕೆ ತಿರುಗಬಹುದು. ಇದು ಕ್ಲೋರೊಫಿಲ್‌ ಉತ್ಪಾದನೆಯಿಂದ ಉಂಟಾಗುತ್ತದೆ. ಇದೇ ಪ್ರಕ್ರಿಯೆಯೊಂದಿಗೆ ಗ್ಲೈಕೋಆಲ್ಕಲಾಯ್ಡ್ಸ್‌ ಎಂಬ ಸಂಯುಕ್ತಗಳ ಪ್ರಮಾಣವೂ ಹೆಚ್ಚಾಗಬಹುದು. ಇವು ಹೆಚ್ಚಿನ ಪ್ರಮಾಣದಲ್ಲಿ ಸೇವನೆಯಾದರೆ ವಿಷಕಾರಿ ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಬಳಸುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!