ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ನಾಮಿನೇಷನ್ ಪ್ರಕ್ರಿಯೆ ತೀವ್ರಗೊಂಡಿದೆ. ಕಾವ್ಯ ಮತ್ತು ವೈಷ್ಣವಿ ಅವರು ಕಿರಣ್ ಶಾಸ್ತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾರ್ಥಕ್ಕಾಗಿ ಧ್ವನಿ ಎತ್ತುವುದು, ಕೆಲಸಗಳಲ್ಲಿ ಭಾಗವಹಿಸದೆ ನಿಂದನೆಗೆ ಒಳಗಾಗುವುದು, ಮತ್ತು ಸಾಮರ್ಥ್ಯದ ಕೊರತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಶಾಸ್ತ್ರಿ ಅವರು ತಮ್ಮನ್ನು ತಾವೇ ಹೀರೋ ಎಂದು ಭಾವಿಸಿದ್ದು, ಇತರರನ್ನು ವಿಲನ್ ಎಂದು ನೋಡುವ ಮನೋಭಾವದ ಬಗ್ಗೆ ಕಟು ಟೀಕೆ ಮಾಡಲಾಯಿತು.
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ವೇಳೆ ತೀವ್ರ ಚರ್ಚೆಗಳು ನಡೆದವು. ಈ ಬಾರಿ ಕಾವ್ಯ ಮತ್ತು ವೈಷ್ಣವಿ ಅವರು ಕೃಷ್ಣ ಶಾಸ್ತ್ರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾಮಿನೇಷನ್ ವೇಳೆ ಕಿರಣ್ ಶಾಸ್ತ್ರಿ ಅವರು ಕಾವ್ಯಾ ಅವರನ್ನು ನಾಮಿನೇಟ್ ಮಾಡಿದರು. ‘ಕಾವ್ಯಾ ಅವರು ಎಲ್ಲಿ ಅನುಕೂಲವೋ ಅಲ್ಲಿ ಮಾತ್ರ ಧ್ವನಿ ಎತ್ತುತ್ತಾರೆ’ ಎಂದು ಶಾಸ್ತ್ರಿ ಹೇಳಿದರು. ‘ನನ್ನ ತಲೆ ಗಟ್ಟಿಯಾಗಿದೆ ಎಂದು ನಾನು ಬಂಡೆಗೆ ಚಚ್ಚಿಕೊಳ್ಳುವ ಪಾತ್ರವಲ್ಲ. ನಾನು ಬಂಡೆ’ ಎಂದು ಕಾವ್ಯ ಹೇಳಿದ್ದಾರೆ. ಇನ್ನು ನಾಮಿನೇಷನ್ ವಿಷಯದಲ್ಲಿ ಶಾಸ್ತ್ರಿ ಹಾಗೂ ವೈಷ್ಣವಿ ನಡುವೆಯೂ ಕಿತ್ತಾಟ ನಡೆದಿದೆ. ವೈಷ್ಣವಿ ಅವರು ಕಿರಣ್ ಶಾಸ್ತ್ರಿಯನ್ನು ನಾಮಿನೇಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

