AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್‌ಗೆ ಹೋಗುವವರು ತಪ್ಪದೇ ತಿಳಿಯಿರಿ: ವರ್ಕೌಟ್‌ ಮಾಡುವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?

ಕೆಲವರಿಗೆ, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಇದು ವ್ಯಾಯಾಮದ ಅವಧಿ, ತೀವ್ರತೆ, ದೇಹದ ಗಾತ್ರ, ವಾತಾವರಣ ಮತ್ತು ಬೆವರುವ ಪ್ರಮಾಣದ ಮೇಲೆ ನೀರಿನ ಅಗತ್ಯ ಬದಲಾಗುತ್ತದೆ. ಒಂದು ಗಂಟೆಯೊಳಗಿನ ಸಾಮಾನ್ಯ ವರ್ಕೌಟ್‌ಗೆ ನೀರು ಸಾಕಾಗಬಹುದು. ದೀರ್ಘಕಾಲದ ವ್ಯಾಯಾಮದಲ್ಲಿ ಎಲೆಕ್ಟ್ರೋಲೈಟ್‌ಗಳ ಅಗತ್ಯವೂ ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಜಿಮ್‌ಗೆ ಹೋಗುವವರು ತಪ್ಪದೇ ತಿಳಿಯಿರಿ: ವರ್ಕೌಟ್‌ ಮಾಡುವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?
Gym Workout And WaterImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 14, 2026 | 7:05 PM

Share

ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಬೆವರು ಬರುವುದು ಸಹಜ. ಆದರೆ ಬೆವರು ಬರುತ್ತಿದೆ ಎಂದು ಹೆಚ್ಚು ಹೆಚ್ಚು ನೀರು ಕುಡಿಯುವುದು ಕೂಡ ಸರಿಯಾದ ವಿಧಾನವಲ್ಲ. ಮತ್ತೊಂದೆಡೆ, ನೀರು ಕಡಿಮೆ ಕುಡಿದರೆ ಡೀಹೈಡ್ರೇಷನ್‌ ಉಂಟಾಗಿ ತಲೆತಿರುಗುವುದು, ಸುಸ್ತಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆ ಕಂಡುಬರಬಹುದು. ಹಾಗಾದರೆ ವ್ಯಾಯಾಮಕ್ಕೂ ಮೊದಲು, ವರ್ಕೌಟ್ ಮಾಡುವಾಗ ಮತ್ತು ನಂತರ ಎಷ್ಟು ನೀರು ಕುಡಿಯಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀರು ಯಾವಾಗ ಕುಡಿಯಬೇಕು?

ವ್ಯಾಯಾಮ ಆರಂಭಿಸುವಾಗಲೇ ದೇಹ ಡೀಹೈಡ್ರೇಟ್ ಆಗಿರದಂತೆ ನೋಡಿಕೊಳ್ಳುವುದು ಮುಖ್ಯ. ಸಾಮಾನ್ಯವಾಗಿ ವರ್ಕೌಟ್‌ಗೆ 2–3 ಗಂಟೆಗಳ ಮೊದಲು ಸುಮಾರು 400–600 ಮಿಲಿ ನೀರು ಕುಡಿಯಬಹುದು. ವ್ಯಾಯಾಮ ಆರಂಭಿಸುವ ಸಮಯ ಹತ್ತಿರವಾದಾಗ ಮತ್ತಷ್ಟು 200–300 ಮಿಲಿ ನೀರನ್ನು ತೆಗೆದುಕೊಳ್ಳಬಹುದು. ಆದರೆ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಹೊಟ್ಟೆ ಭಾರವಾಗಬಹುದು. ಆದ್ದರಿಂದ ದಿನವಿಡೀ ನಿಯಮಿತವಾಗಿ ನೀರು ಕುಡಿಯುವುದು ಉತ್ತಮ.

ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು?

ವ್ಯಾಯಾಮದ ಸಮಯದಲ್ಲಿ ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವ ಬದಲು ಸಣ್ಣ ಸಿಪ್‌ಗಳಾಗಿ ಕುಡಿಯುವುದು ಉತ್ತಮ. ಸಾಮಾನ್ಯವಾಗಿ ಪ್ರತಿ 15–20 ನಿಮಿಷಕ್ಕೆ 150–250 ಮಿಲಿ ನೀರು ತೆಗೆದುಕೊಳ್ಳಬಹುದು. ಆದರೆ ಇದು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ನಿಮ್ಮ ದೇಹದ ಗಾತ್ರ, ವರ್ಕೌಟ್‌ನ ತೀವ್ರತೆ, ಅವಧಿ, ವಾತಾವರಣದ ಉಷ್ಣತೆ ಮತ್ತು ಎಷ್ಟು ಬೆವರು ಬರುತ್ತದೆ ಎಂಬುದರ ಆಧಾರದ ಮೇಲೆ ನೀರಿನ ಅಗತ್ಯ ಬದಲಾಗುತ್ತದೆ.

ಸಾಮಾನ್ಯವಾಗಿ ತಂಪಾದ ಅಥವಾ ನಿಯಂತ್ರಿತ ವಾತಾವರಣದಲ್ಲಿ ಒಂದು ಗಂಟೆಯೊಳಗಿನ ಲಘು ಅಥವಾ ಮಧ್ಯಮ ಮಟ್ಟದ ವ್ಯಾಯಾಮಕ್ಕೆ ನೀರು ಸಾಕಾಗಬಹುದು. ಪ್ರತಿಯೊಂದು ವರ್ಕೌಟ್‌ಗೂ ಸ್ಪೋರ್ಟ್ಸ್ ಡ್ರಿಂಕ್ ಅಥವಾ ಎಲೆಕ್ಟ್ರೋಲೈಟ್ ಪಾನೀಯ ಅಗತ್ಯವಿಲ್ಲ. ಆದರೆ ಬಿಸಿಲು, ಹೆಚ್ಚಿನ ತೇವಾಂಶ ಅಥವಾ ಹೆಚ್ಚು ಬೆವರುವ ಪರಿಸ್ಥಿತಿಯಲ್ಲಿ ದ್ರವದ ಅಗತ್ಯ ಹೆಚ್ಚಾಗಬಹುದು.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಸೇಬು ತಿನ್ನುವ ಅಭ್ಯಾಸವಿದ್ದರೆ ನಿಮಗೆ ಈ ವಿಷಯಗಳು ತಿಳಿದಿರಲೇಬೇಕು!

ಹೆಚ್ಚು ಹೊತ್ತು ವ್ಯಾಯಾಮ ಮಾಡಿದರೆ ಎಲೆಕ್ಟ್ರೋಲೈಟ್ಸ್ ಬೇಕಾ?

ಒಂದು ಗಂಟೆಗೂ ಹೆಚ್ಚು ಕಾಲ ತೀವ್ರವಾಗಿ ವ್ಯಾಯಾಮ ಮಾಡುವಾಗ ಅಥವಾ ಹೆಚ್ಚು ಬೆವರುವ ಸಂದರ್ಭದಲ್ಲಿ ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್ಸ್‌ ನಷ್ಟವಾಗಬಹುದು. ಇಂತಹ ಸಂದರ್ಭಗಳಲ್ಲಿ ಸೂಕ್ತವಾದ ಎಲೆಕ್ಟ್ರೋಲೈಟ್ ಪಾನೀಯ ಸಹಾಯಕವಾಗಬಹುದು. ಆದರೆ ಕೇವಲ ನೀರನ್ನೇ ಅತಿಯಾಗಿ ಕುಡಿಯುವುದೂ ಅಪಾಯಕಾರಿ. ಅತಿಯಾದ ನೀರಿನ ಸೇವನೆಯಿಂದ ರಕ್ತದಲ್ಲಿನ ಸೋಡಿಯಂ ಪ್ರಮಾಣ ಕಡಿಮೆಯಾಗುವ ಹೈಪೋನಾಟ್ರೀಮಿಯಾ ಉಂಟಾಗುವ ಸಾಧ್ಯತೆಯಿದೆ.

ವರ್ಕೌಟ್ ನಂತರ ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು?

ವ್ಯಾಯಾಮ ಮುಗಿದ ತಕ್ಷಣ ಒಂದೇ ಬಾರಿಗೆ ಲೀಟರ್‌ಗಟ್ಟಲೆ ನೀರು ಕುಡಿಯುವ ಅಗತ್ಯವಿಲ್ಲ. ಸ್ವಲ್ಪ ಸ್ವಲ್ಪವೇ ಸೇವನೆ ಮಾಡುವುದು ಬಹಳ ಉತ್ತಮ. ವರ್ಕೌಟ್‌ಗೂ ಮೊದಲು ಮತ್ತು ನಂತರದ ತೂಕವನ್ನು ಗಮನಿಸುವುದರಿಂದ ಬೆವರಿನ ಮೂಲಕ ಎಷ್ಟು ನೀರಿನಂಶ ಕಡಿಮೆಯಾಗಿದೆ ಎಂಬುದನ್ನು ಅಂದಾಜಿಸಬಹುದು.

ಈ ಲಕ್ಷಣಗಳು ಕಂಡರೆ ಎಚ್ಚರ ವಹಿಸಿ!

ವರ್ಕೌಟ್ ವೇಳೆ ಅತಿಯಾದ ದಾಹ, ಬಾಯಿ ಒಣಗುವುದು, ಗಾಢ ಹಳದಿ ಮೂತ್ರ, ತಲೆತಿರುಗುವಿಕೆ, ತಲೆನೋವು, ಅಸಾಮಾನ್ಯ ದೌರ್ಬಲ್ಯ, ಹೃದಯ ಬಡಿತ ವೇಗವಾಗುವುದು ಅಥವಾ ಬೆವರು ಕಡಿಮೆಯಾಗುವುದು ಕಂಡುಬಂದರೆ ಎಚ್ಚರಿಕೆ ಅಗತ್ಯ. ಇಂತಹ ಸಂದರ್ಭದಲ್ಲಿ ವ್ಯಾಯಾಮವನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಿರಿ. ಲಕ್ಷಣಗಳು ತೀವ್ರವಾಗಿದ್ದರೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯ.

ವರ್ಕೌಟ್ ಮಾಡುವ ಪ್ರತಿಯೊಬ್ಬರೂ ಇಷ್ಟೇ ಮಿಲಿ ನೀರು ಕುಡಿಯಬೇಕು ಎಂಬ ಕಟ್ಟುನಿಟ್ಟಿನ ನಿಯಮವಿಲ್ಲ. ದೇಹದ ತೂಕ, ವ್ಯಾಯಾಮದ ಅವಧಿ ಮತ್ತು ತೀವ್ರತೆ, ವಾತಾವರಣ, ಬೆವರುವ ಪ್ರಮಾಣ ಹಾಗೂ ವೈಯಕ್ತಿಕ ಆರೋಗ್ಯ ಪರಿಸ್ಥಿತಿ ಇವೆಲ್ಲವನ್ನೂ ಪರಿಗಣಿಸಬೇಕು. ಮುಖ್ಯವಾಗಿ, ದಾಹವಾಗುವವರೆಗೆ ಕಾಯುವುದಕ್ಕಿಂತ ದಿನವಿಡೀ ಸಮರ್ಪಕವಾಗಿ ಹೈಡ್ರೇಟ್ ಆಗಿರುವುದು ಉತ್ತಮ. ನಿಮ್ಮ ವರ್ಕೌಟ್ ದೀರ್ಘವಾಗಿದ್ದರೆ ಅಥವಾ ತುಂಬಾ ಬೆವರು ಬರುತ್ತಿದ್ದರೆ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಅಗತ್ಯವನ್ನು ವೈಯಕ್ತಿಕವಾಗಿ ಹೊಂದಿಸಿಕೊಳ್ಳಿ.

ಗಮನಿಸಿ: ಈ ಲೇಖನ ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ವಿಶೇಷ ಆರೋಗ್ಯ ಸಮಸ್ಯೆಗಳು, ಮೂತ್ರಪಿಂಡ ಅಥವಾ ಹೃದಯ ಸಂಬಂಧಿತ ಕಾಯಿಲೆಗಳು ಇದ್ದರೆ ನೀರಿನ ಪ್ರಮಾಣವನ್ನು ವೈದ್ಯರ ಸಲಹೆಯಂತೆ ನಿರ್ಧರಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ