ಸಿಎಂ ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ಬಣ್ಣ ಬಣ್ಣದ ದೀಪಗಳಲ್ಲಿ ಕಂಗೊಳಿಸಿದ ವಿಧಾನಸೌಧ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರ ಯಶಸ್ವಿ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ದೃಢ ಕರ್ನಾಟಕದ ಸಂಕಲ್ಪ, ಶತಕದ ಪಥ, ಪ್ರಗತಿಯ ರಥ ಅಭಿಯಾನದ ಭಾಗವಾಗಿ ವಿಧಾನಸೌಧಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಲೇಸರ್ ಪ್ರದರ್ಶನದ ಮೂಲಕ ಸರ್ಕಾರದ 100 ದಿನಗಳ ಸಾಧನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಯಶಸ್ಸನ್ನು ಬಿಂಬಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 14: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರವು ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ದೃಢ ಕರ್ನಾಟಕದ ಸಂಕಲ್ಪ, ಶತಕದ ಪಥ, ಪ್ರಗತಿಯ ರಥ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಭಾಗವಾಗಿ ಬೆಂಗಳೂರಿನ ಹೆಮ್ಮೆಯ ವಿಧಾನಸೌಧ ಕಟ್ಟಡಕ್ಕೆ ಭವ್ಯವಾದ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. ಲೇಸರ್ ಪ್ರದರ್ಶನದ ಮೂಲಕ ಸರ್ಕಾರದ 100 ದಿನಗಳ ಸಾಧನೆಯನ್ನು ಬಿಂಬಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 14, 2026 03:02 PM
Follow Us

