AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ ಖರ್ಗೆ ಗರಂ

ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ ಖರ್ಗೆ ಗರಂ

ರಮೇಶ್ ಬಿ. ಜವಳಗೇರಾ
|

Updated on: Sep 14, 2026 | 3:06 PM

Share

ಮಸೀದಿ ಮುಂದೆ ಮೆರವಣಿಗೆ ಮಾಡಿ ಪಟಾಕಿ ಹೊಡೆದ್ರೆ ನಿಮ್ ಗ್ರಹಚಾರ ಬಿಡಿಸ್ತೀನಿ ಎನ್ನುವ ಟಿ.ನರಸೀಪುರ ಇನ್ಸ್​​​ಪೆಕ್ಟರ್ ಧನಂಜಯ್ ದರ್ಪದ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇನ್ಸ್​​ಪೆಕ್ಟರ್​​ ಧನಂಜಯ್​​ನನ್ನು ಅಮಾನತು ಮಾಡಲೇಬೇಕೆಂದು ವಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಕ್ರಮ ಬಗ್ಗೆ ನೋಡೋಣ, ಬಿಜೆಪಿಯವರನ್ನು ಕೇಳಿ ಮಾಡಲು ಆಗಲ್ಲ. ಬಿಜೆಪಿಯವರು ಹೇಳಿದಂತೆ ನಾವು ಆಡಳಿತ, ಕೇಳುವುದಕ್ಕೆ ಆಗಲ್ಲ. ಅಶೋಕ್ ಗೃಹ ಸಚಿವರಿದ್ದಾಗ ಸಭೆ ಮಾಡಿಲ್ವಾ, ಸೂಚನೆ ಕೊಟ್ಟಿಲ್ವಾ? ಅಶೋಕ್​ ಇದ್ದಾಗ ಏನು ನಿಯಮ ಇತ್ತೋ ಈಗಲೂ ಅದೇ ನಿಯಮ. ಮೈಸೂರಿನ ನಿರುದ್ಯೋಗಿ ರಾಜಕಾರಣಿಗೆ ಕೆಲಸ ಇಲ್ಲ.

ಬೆಂಗಳೂರು, (ಸೆಪ್ಟೆಂಬರ್ 14): ಮಸೀದಿ ಮುಂದೆ ಮೆರವಣಿಗೆ ಮಾಡಿ ಪಟಾಕಿ ಹೊಡೆದ್ರೆ ನಿಮ್ ಗ್ರಹಚಾರ ಬಿಡಿಸ್ತೀನಿ ಎನ್ನುವ ಟಿ.ನರಸೀಪುರ ಇನ್ಸ್​​​ಪೆಕ್ಟರ್ ಧನಂಜಯ್ ದರ್ಪದ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇನ್ಸ್​​ಪೆಕ್ಟರ್​​ ಧನಂಜಯ್​​ನನ್ನು ಅಮಾನತು ಮಾಡಲೇಬೇಕೆಂದು ವಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಕ್ರಮ ಬಗ್ಗೆ ನೋಡೋಣ, ಬಿಜೆಪಿಯವರನ್ನು ಕೇಳಿ ಮಾಡಲು ಆಗಲ್ಲ. ಬಿಜೆಪಿಯವರು ಹೇಳಿದಂತೆ ನಾವು ಆಡಳಿತ, ಕೇಳುವುದಕ್ಕೆ ಆಗಲ್ಲ. ಅಶೋಕ್ ಗೃಹ ಸಚಿವರಿದ್ದಾಗ ಸಭೆ ಮಾಡಿಲ್ವಾ, ಸೂಚನೆ ಕೊಟ್ಟಿಲ್ವಾ? ಅಶೋಕ್​ ಇದ್ದಾಗ ಏನು ನಿಯಮ ಇತ್ತೋ ಈಗಲೂ ಅದೇ ನಿಯಮ. ಮೈಸೂರಿನ ನಿರುದ್ಯೋಗಿ ರಾಜಕಾರಣಿಗೆ ಕೆಲಸ ಇಲ್ಲ. ಪೊಲೀಸ್​ ಸ್ಟೇಷನ್​ಗೆ ನುಗ್ಗುತ್ತೇನೆ ಅಂತಾರಲ್ಲ, ಸರಿನಾ? ಇವರ ಸರ್ಕಾರದಲ್ಲಿ ಠಾಣೆಗೆ ನುಗ್ತೀನಿ ಅಂದ್ರೆ ಸುಮ್ಮನಿರುತ್ತೀರಾ? ಎಸ್‌ಪಿ ವರದಿ ಕೊಡಲಿ, ವರದಿ ನೋಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯವರು ಅಮಾನತು ಮಾಡಿ ಅಂದ್ರೆ ಮಾಡಿಬಿಡಬೇಕಾ? ಎಂದು ಪ್ರಶ್ನಿಸಿದರು. ಈ ಮೂಲಕ ಇನ್ಸ್​​ಪೆಕ್ಟರ್​​​ ಧನಂಜಯ್​​ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More