AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ

ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ

ರಾಮ್​, ಮೈಸೂರು
| Edited By: |

Updated on: Sep 14, 2026 | 4:26 PM

Share

ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ನಡೆದ ಗಣೇಶೋತ್ಸವ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾಯಿತು. ಗಜ ಪಡೆ ಯುವಕರ ಬಳಗ ಆಯೋಜಿಸಿದ್ದ ಈ ಉತ್ಸವದಲ್ಲಿ ಸ್ಥಳೀಯ ಮುಸ್ಲಿಂ ಯುವಕರು ಉತ್ಸಾಹದಿಂದ ಭಾಗವಹಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಜಾತಿ ಧರ್ಮಗಳಾಚೆಗಿನ ಸ್ನೇಹ ಮತ್ತು ಸಹೋದರತೆಯನ್ನು ಮೆರೆದರು. ಈ ಕಾರ್ಯಕ್ರಮವು ಸೌಹಾರ್ದ ಮತ್ತು ಸಾಮಾಜಿಕ ಐಕ್ಯತೆಗೆ ಮಾದರಿಯಾಯಿತು.

ಮೈಸೂರು, ಸೆಪ್ಟೆಂಬರ್​​ 14: ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ‘ಗಜ ಪಡೆ ಯುವಕರ ಬಳಗ’ದ ವತಿಯಿಂದ ಪ್ರತಿಷ್ಠಾಪಿಸಲಾದ ಗೌರಿ ಗಣೇಶ ಮೂರ್ತಿಯ ಉತ್ಸವವು ಹಿಂದೂ-ಮುಸ್ಲಿಂ ಸೌಹಾರ್ದತೆ ಹಾಗೂ ಜಾತಿ-ಧರ್ಮಗಳಾಚೆಗಿನ ಸ್ನೇಹಕ್ಕೆ ಸಾಕ್ಷಿಯಾಯಿತು. ಯುವಕರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ ಈ ಉತ್ಸವದಲ್ಲಿ ಗುಲ್ಜನ್, ಮಹಮ್ಮದ್ ಸಾಹಿದ್, ಸಲ್ಮಾನ್, ಶರೀಫ್, ಅಲ್ತಾಫ್, ಇಮ್ರಾನ್ ಸೇರಿದಂತೆ ಸ್ಥಳೀಯ ಮುಸ್ಲಿಂ ಯುವಕರು ಪಾಲ್ಗೊಂಡು ಹಿಂದೂ ಬಾಂಧವರಿಗೆ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸಿದ ಯುವಕರು ಸ್ನೇಹ ಮತ್ತು ಸಹೋದರತೆಯ ಸಂದೇಶವನ್ನು ಸಾರಿದ್ದು, ಈ ಗಣೇಶೋತ್ಸವವು ಸಾಮಾಜಿಕ ಐಕ್ಯತೆ, ಸಾಮರಸ್ಯ ಹಾಗೂ ಭಾವೈಕ್ಯತೆಗೆ ಮಾದರಿಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us