ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುತ್ತಿದೆಯೇ ಅಳತೆ ವಂಚನೆ? ‘ಟಿವಿ9’ ರಿಯಾಲಿಟಿ ಚೆಕ್‌ನಲ್ಲಿ ಕಾಣಿಸಿದ್ದೇನು ನೋಡಿ
ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಅಳತೆ ಮೋಸದ ಜಾಲ ಪತ್ತೆಯಾಗಿದೆ ಎಂಬ ಸಚಿವ ರಿಜ್ವಾನ್ ಅರ್ಷದ್ ಹೇಳಿಕೆ ಬೆನ್ನಲ್ಲೇ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಟಿವಿ9 ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ, ಬೆಂಗಳೂರಿನಲ್ಲಿ ವ್ಯಾಪಕ ವ್ಯತ್ಯಾಸಗಳು ಕಂಡುಬಂದರೆ, ಹುಬ್ಬಳ್ಳಿಯ ಒಂದು ಬಂಕ್‌ನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಗಳು ತನಿಖೆ ನಡೆಸಿ, 101 ಬಂಕ್‌ಗಳಿಗೆ ನೋಟಿಸ್ ನೀಡಿವೆ.
ಬೆಂಗಳೂರು, ಹುಬ್ಬಳ್ಳಿ, ಸೆಪ್ಟೆಂಬರ್ 17: ಕರ್ನಾಟಕದ 805 ಬಂಕ್‌ಗಳನ್ನು ಪರಿಶೀಲನೆಗೆ ಒಳಪಡಿಸಿದಾಗ 768 ಕಡೆ ಅಳತೆ ವ್ಯತ್ಯಯ ಕಂಡುಬಂದಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಬುಧವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಜನರಲ್ಲಿ ಆತಂಕ ಮನೆಮಾಡಿತ್ತು. ಸದ್ಯ, ಈ ಬಗ್ಗೆ ‘ಟಿವಿ9’ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ರಿಯಾಲಿಟಿ ಚೆಕ್ ನಡೆಸಿದೆ. ಈ ವೇಳೆ, ಗ್ರಾಹಕರಿಗೆ ತಲುಪುವ ಇಂಧನದ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಬಹಿರಂಗವಾಗಿದೆ.
ರಾಜ್ಯಾದ್ಯಂತ ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 101 ಪೆಟ್ರೋಲ್ ಬಂಕ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ತನಿಖೆಗೊಳಪಡಿಸಿದ 5946 ಪೆಟ್ರೋಲ್ ಬಂಕ್‌ಗಳಲ್ಲಿ 768 ಬಂಕ್‌ಗಳಲ್ಲಿ ಅಳತೆ ವ್ಯತ್ಯಯ ಕಂಡುಬಂದಿದ್ದು, ಶೇಕಡ 85ರಷ್ಟು ಬಂಕ್‌ಗಳಲ್ಲಿ ಇಂಧನ ಕಡಿಮೆಯಾಗಿರುವುದು ಖಚಿತಪಟ್ಟಿದೆ. 3071 ಪೆಟ್ರೋಲ್ ವಿತರಣಾ ಗನ್ಗಳನ್ನು ಪರಿಶೀಲಿಸಿದಾಗ, 2618ರಲ್ಲಿ ಕಡಿಮೆ ಪ್ರಮಾಣದ ಇಂಧನ ವಿತರಿಸಲಾಗುತ್ತಿತ್ತು. ಇದು ಮಧ್ಯಮ ವರ್ಗದ ಗ್ರಾಹಕರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.
ಬೆಂಗಳೂರಿನ ಕೆಲವು ಬಂಕ್‌ಗಳಲ್ಲಿ ‘ಟಿವಿ9’ ರಿಯಾಲಿಟಿ ಚೆಕ್ ನಡೆಸಿದಾಗ ತುಸು ವ್ಯತ್ಯಾಸ ಕಂಡುಬಂದಿದೆ. ಆದರೆ, ಹುಬ್ಬಳ್ಳಿಯ ಹಳೆ ಕಾಟಾ ಮಾರ್ಕೆಟ್‌ನಲ್ಲಿ ‘ಟಿವಿ9’ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ 5 ಲೀಟರ್ ಪೆಟ್ರೋಲ್ ಅಳತೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ವಾರ್ಷಿಕ ತಪಾಸಣೆ ಮತ್ತು ಯಾಂತ್ರಿಕೃತ ವ್ಯವಸ್ಥೆ ಇರುವ ಕಾರಣ ಮೋಸ ಸಾಧ್ಯವಿಲ್ಲ ಎಂದು ಬಂಕ್ ಸಿಬ್ಬಂದಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಿಎಂ ಬರಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಎಸ್ಎಫ್ಐ ಮುಖಂಡರು ವಶಕ್ಕೆ
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್ಪೆಕ್ಟರ್!
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ

