SS Rajamouli
ರಾಜಮೌಳಿ
ಎಸ್. ಎಸ್. ರಾಜಮೌಳಿ ಪೂರ್ಣ ಹೆಸರು ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ. ಇವರು ಜನಿಸಿದ್ದು1973ರ ಅಕ್ಟೋಬರ್ 10ರಂದು. ಕರ್ನಾಟಕದ ರಾಯಚೂರಿನ ಮಾನ್ವಿಯಲ್ಲಿ ಅವರು ಜನಿಸಿದರು. ಅವರದ್ದು ತೆಲುಗು ಕುಟುಂಬ. ಅವರ ತಂದೆ ಪ್ರಸಿದ್ಧ ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಮತ್ತು ಅವರ ತಾಯಿ ರಾಜ ನಂದಿನಿ. ರಾಜಮೌಳಿ ರಮಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ದತ್ತು ಮಕ್ಕಳಿದ್ದಾರೆ. ರಾಜಮೌಳಿ ಭವ್ಯವಾಗಿ ಸಿನಿಮಾ ನಿರ್ದೇಶಿಸಲು ಹೆಸರುವಾಸಿಯಾಗಿದ್ದಾರೆ. ‘ಮಗಧೀರ’, ‘ಬಾಹುಬಲಿ’, ‘ಬಾಹುಬಲಿ 2, ‘ಆರ್ಆರ್’ ರೀತಿಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈಗ ಅವರು ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2027ರಲ್ಲಿ ತೆರೆಗೆ ಬರಲಿದೆ. ಮಹೇಶ್ ಬಾಬು ಈ ಚಿತ್ರಕ್ಕೆ ಹೀರೋ ಆದರೆ, ಪ್ರಿಯಾಂಕಾ ಚೋಪ್ರಾ ಅವರು ನಾಯಕಿ.
ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ರಾಜಮೌಳಿಗೆ ದೊಡ್ಡ ಗೆಲುವು ಸಿಕ್ಕಿದೆ: ಆರ್ಜಿವಿ ಬೆಂಬಲ
‘ವಾರಾಣಸಿ’ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ದೇವರ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದೆ. ಈ ವಿಚಾರದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ರಾಜಮೌಳಿ ಪರವಾಗಿ ವಾದ ಮುಂದಿಟ್ಟಿದ್ದಾರೆ. ದೇವರನ್ನು ನಂಬದೇ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಅಭಿಪ್ರಾಯವನ್ನು ದೀರ್ಘವಾಗಿ ತಿಳಿಸಿದ್ದಾರೆ.
- Madan Kumar
- Updated on: Nov 21, 2025
- 7:25 pm
ಗ್ರ್ಯಾಂಡ್ ಟೈಟಲ್ ಲಾಂಚ್ ಈವೆಂಟ್ ವ್ಯರ್ಥ; ಬದಲಾಗಲಿದೆ ‘ವಾರಣಾಸಿ’ ಟೈಟಲ್?
ಎಸ್‌ಎಸ್ ರಾಜಮೌಳಿ ಅವರ 'ವಾರಣಾಸಿ' ಸಿನಿಮಾದ ಶೀರ್ಷಿಕೆ ವಿವಾದ ಸೃಷ್ಟಿ ಮಾಡಿದೆ. ಸಿಎಚ್ ಸುಬ್ಬಾ ರೆಡ್ಡಿ 'ವಾರಣಾಸಿ' (Vaaranasi) ಟೈಟಲ್ ನೋಂದಾಯಿಸಿದ್ದರೆ, ರಾಜಮೌಳಿ 'ವಾರಣಾಸಿ' (Varanasi) ಟೈಟಲ್ ನೋಂದಾಯಿಸಿದ್ದಾರೆ. ಶೀರ್ಷಿಕೆ ಬದಲಾದರೆ ₹27 ಕೋಟಿ ನಷ್ಟವಾಗುವ ಸಾಧ್ಯತೆಯಿದೆ. ಈಗ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮಾತುಕತೆ ನಡೆಯುತ್ತಿದೆ.
- Rajesh Duggumane
- Updated on: Nov 20, 2025
- 3:11 pm
ಹಿಂದೂ ಭಾವನೆಗೆ ಧಕ್ಕೆ; ರಾಜಮೌಳಿ ವಿರುದ್ಧ ದಾಖಲಾಯ್ತು ದೂರು
ನಿರ್ದೇಶಕ ಎಸ್.ಎಸ್. ರಾಜಮೌಳಿ 'ವಾರಣಾಸಿ' ಚಿತ್ರದ ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷದಿಂದ ಹನುಮಂತ ದೇವರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದು ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ವಾನರ ಸೇನಾ ದೂರು ದಾಖಲಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
- Rajesh Duggumane
- Updated on: Nov 18, 2025
- 2:57 pm
‘ವಾರಣಾಸಿ’ ಈವೆಂಟ್ ಹಣದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಖರ್ಚಾಗಿದ್ದು ಇಷ್ಟೊಂದಾ?
ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬರೋಬ್ಬರಿ ಸಾಕಷ್ಟು ಖರ್ಚಾದಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ನಡೆದ ಈವೆಂಟ್ಗೆ ಪ್ರಿಯಾಂಕಾ ಚೋಪ್ರಾ, ಶ್ರುತಿ ಹಾಸನ್ ಮುಂತಾದವರು ಭಾಗವಹಿಸಿದ್ದರು. ಒಂದು ಸಣ್ಣ ಚಿತ್ರವನ್ನೇ ನಿರ್ಮಿಸುವಷ್ಟು ಹಣವನ್ನು ರಾಜಮೌಳಿ ತಮ್ಮ ಸಿನಿಮಾದ ಪ್ರಚಾರಕ್ಕೆ ಸುರಿದಿರುವುದು ಅಚ್ಚರಿ ಮೂಡಿಸಿದೆ.
- Rajesh Duggumane
- Updated on: Nov 18, 2025
- 8:39 am
‘ವಾರಣಾಸಿ’ ಚಿತ್ರಕ್ಕಾಗಿ ಹಾಲಿವುಡ್ ದೃಶ್ಯಗಳ ಕಾಪಿ ಮಾಡಿದ್ರಾ ರಾಜಮೌಳಿ? ಶುರುವಾಗಿದೆ ಚರ್ಚೆ
ರಾಜಮೌಳಿ ಅವರ ಬಹುನಿರೀಕ್ಷಿತ 'ವಾರಣಾಸಿ' ಸಿನಿಮಾದ ಟೀಸರ್ ಕೃತಿ ಚೌರ್ಯದ ಆರೋಪ ಎದುರಿಸುತ್ತಿದೆ. ನೆಟ್ಟಿಗರು ಟೀಸರ್ನ ದೃಶ್ಯಗಳನ್ನು ಹಾಲಿವುಡ್ ಚಿತ್ರಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದು ಹಿಂದೆ ಕೂಡ ರಾಜಮೌಳಿ ಎದುರಿಸಿದ ಟೀಕೆಯಾಗಿತ್ತು. ಮಹೇಶ್ ಬಾಬು ಅಭಿನಯದ ಈ ಚಿತ್ರ 2027ಕ್ಕೆ ಬಿಡುಗಡೆಯಾಗಲಿದೆ.
- Rajesh Duggumane
- Updated on: Nov 17, 2025
- 1:08 pm
ಮಹೇಶ್ ಬಾಬು vs ಪ್ರಿಯಾಂಕಾ ಚೋಪ್ರಾ; ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
‘ಬಾಹುಬಲಿ' ಮತ್ತು ‘ಆರ್‌ಆರ್‌ಆರ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ನಂತರ, ಈಗ ಎಸ್‌ಎಸ್ ರಾಜಮೌಳಿ ‘ವಾರಣಾಸಿ' ಎಂಬ ಹೊಸ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಇಬ್ಬರು ತಾರೆಯರ ಒಟ್ಟು ಸಂಪತ್ತನ್ನು ಈ ಲೇಖನದಲ್ಲಿ ಹೋಲಿಸಲಾಗಿದೆ.
- Shreelaxmi H
- Updated on: Nov 17, 2025
- 8:08 am
‘ವಾರಣಾಸಿ’ ಈವೆಂಟ್ನಲ್ಲಿ ಹಿಂದೂ ದೇವರ ಬಗ್ಗೆ ರಾಜಮೌಳಿ ಟೀಕೆ; ಸಿನಿಮಾ ಬ್ಯಾನ್ ಮಾಡಲು ಆಗ್ರಹ
SS Rajamouli: ರಾಜಮೌಳಿ-ಮಹೇಶ್ ಬಾಬು ಅವರ ಹೊಸ ಚಿತ್ರ ‘ವಾರಣಾಸಿ’ 2027ಕ್ಕೆ ಬಿಡುಗಡೆಯಾಗಲಿದ್ದು, ಅದ್ದೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಸಿಟ್ಟಿಗೆದ್ದ ರಾಜಮೌಳಿ ಹನುಮಂತನ ಬಗ್ಗೆ ಆಡಿದ ಮಾತುಗಳು ಭಾರಿ ವಿವಾದ ಸೃಷ್ಟಿಸಿವೆ. ಅವರ ಕ್ಷಮೆಗೆ ಸಾರ್ವಜನಿಕವಾಗಿ ಒತ್ತಾಯ ಕೇಳಿಬರುತ್ತಿದೆ .
- Rajesh Duggumane
- Updated on: Nov 17, 2025
- 8:51 am