‘ವಾರಣಾಸಿ’ ಸಿನಿಮಾದಲ್ಲಿ ಕನ್ನಡದ ಖ್ಯಾತ ಹೀರೋಗೆ ಅವಕಾಶ ಕೊಟ್ಟ ರಾಜಮೌಳಿ
ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಮಹೇಶ್ ಬಾಬು ನಾಯಕತ್ವದಲ್ಲಿ 2027ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕನ್ನಡದ ಹೀರೋ ಪ್ರಮುಖ ಪಾತ್ರದಲ್ಲಿ, ಮಹೇಶ್ ಬಾಬು ಅವರ ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಕೂಡ ನಟಿಸುತ್ತಿರುವ ಈ ಬಹುಭಾಷಾ ಚಿತ್ರವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಖ್ಯಾತ ನಿರ್ದೇಶಕ ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾ (Varanasi Movie) ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಈ ಸಿನಿಮಾ 2027ರಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ಜೊತೆಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಪ್ರಕಾಶ್ ರೈ ಕೂಡ ನಟಿಸಲಿದ್ದಾರೆ ಎಂದು ವರದಿ ಆಗಿದೆ.
ರಾಜಮೌಳಿ ಅವರು ಮಾಡೋ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ‘ವಾರಣಾಸಿ’ ಸಿನಿಮಾ ಬಗ್ಗೆಯೂ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅದ್ದೂರಿ ಈವೆಂಟ್ ಮಾಡಿ ‘ವಾರಣಾಸಿ’ ಟೈಟಲ್ ಅನೌನ್ಸ್ ಮಾಡಲಾಯಿತು. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ತಂಡ ಮೌನವಹಿಸಿದೆ. ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಏನೆಂದರೆ ಪ್ರಕಾಶ್ ರೈ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಪ್ರಕಾಶ್ ರೈ ತಮ್ಮ ಮಾತುಗಳಿಂದ ಯಾವಾಗಲೂ ವಿವಾದಕ್ಕೆ ಈಡಾಗುತ್ತಾರೆ. ಅವರ ಸಿದ್ಧಾಂತಗಳನ್ನು ಹಲವರು ಒಪ್ಪದೇ ಇರಬಹುದು. ಆದರೆ, ಓರ್ವ ನಟನಾಗಿ ಅವರು ಎಲ್ಲರಿಗೂ ಇಷ್ಟ ಆಗುತ್ತಾರೆ. ಅಂತಹ ಅದ್ಭುತ ನಟನೆ ಅವರದ್ದು. ಈಗ ಅವರು ‘ವಾರಣಾಸಿ’ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಮಹೇಶ್ ಬಾಬು ತಂದೆ ಪಾತ್ರದಲ್ಲಿ ಪ್ರಕಾಶ್ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೊದಲು ನಾನಾ ಪಾಟೇಕರ್ ಜೊತೆ ತಂಡ ಮಾತುಕತೆ ನಡೆಸಿತ್ತು. ಆದರೆ, ನಾನಾ ಅವರು ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಇದರಿಂದಲೇ ಪ್ರಕಾಶ್ ಅವರನ್ನು ಪರಿಗಣಿಸಲಾಗಿದೆಯಂತೆ.
ಪ್ರಕಾಶ್ ಹಾಗೂ ರಾಜಮೌಳಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಮೊದಲು ‘ವಿಕ್ರಮಾರ್ಕುಡು’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡೋ ಸಮಯ ಬಂದಿದೆ. ಈ ಮೊದಲು ಕೂಡ ಪ್ರಕಾಶ್ ಹಲವು ತೆಲುಗು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಈಗ ಅವರು ಮಾಡುವ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಈ ಸಿನಿಮಾ 2027ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ವಾರಣಾಸಿ’ ಸಿನಿಮಾಕ್ಕೆ ಸಂಕಷ್ಟ, ಹೆಸರು ಬದಲಾಯಿಸಿದ ರಾಜಮೌಳಿ
ದಳಪತಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದಲ್ಲು ಪ್ರಕಾಶ್ ನಟಿಸಿದ್ದಾರಂತೆ. ‘ದೇವರ 2’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈ ಮೊದಲು ಒಂದನೇ ಭಾಗದಲ್ಲಿ ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




